ಮಗಳನ್ನು ನಿನಗೆ ಮದುವೆ ಮಾಡಿಕೊಡಲ್ಲ ಎಂದಿದ್ದಕ್ಕೆ ಯುವತಿಯ ಪೋಷಕರನ್ನು ಕೊಂದ ವ್ಯಕ್ತಿ
ಮಗಳನ್ನು ನಿನಗೆ ಮಾತ್ರ ಮದುವೆ ಮಾಡಿಕೊಡುವುದಿಲ್ಲ ಎಂದು ಹೇಳಿದ್ದಕ್ಕೆ ಯುವತಿಯ ಪೋಷಕರನ್ನು ಚಾಕುವಿನಿಂದ ಇರಿದು ವ್ಯಕ್ತಿಯೊಬ್ಬ ಕೊಲೆ ಮಾಡಿರುವ ಘಟನೆ ಡುಮ್ಕಾದ ಶಿಕಾರಿಪರಾ ಪೊಲೀಸ್ ಠಾಣೆ ಪ್ರದೇಶದ ಸುಂದರಪ್ಲಾನ್ ಗ್ರಾಮದಲ್ಲಿ ನಡೆದಿದೆ. ದಂಪತಿಗಳಾದ ಸಾಹೇಬ್ ಹೆಂಬ್ರಾಮ್ (63) ಮತ್ತು ಅವರ ಪತ್ನಿ ಮಂಗಲಿ ಕಿಸ್ಕು (60) ಅವರನ್ನು ಇರಿದು ಕೊಲ್ಲಲಾಗಿದೆ. ಅವರ ಇಬ್ಬರು ಹೆಣ್ಣುಮಕ್ಕಳಾದ 25 ವರ್ಷದ ಹಿರಾಮುನಿ ಹೆಂಬ್ರಾಮ್ ಮತ್ತು 17 ವರ್ಷದ ಬೆನಿ ಹೆಂಬ್ರಾಮ್ ಕೂಡ ಗಾಯಗೊಂಡಿದ್ದಾರೆ.

ಡುಮ್ಕಾ, ಸೆಪ್ಟೆಂಬರ್ 05: ಮಗಳನ್ನು ನಿನಗೆ ಮಾತ್ರ ಮದುವೆ(Marriage) ಮಾಡಿಕೊಡುವುದಿಲ್ಲ ಎಂದು ಹೇಳಿದ್ದಕ್ಕೆ ಯುವತಿಯ ಪೋಷಕರನ್ನು ಚಾಕುವಿನಿಂದ ಇರಿದು ವ್ಯಕ್ತಿಯೊಬ್ಬ ಕೊಲೆ ಮಾಡಿರುವ ಘಟನೆ ಡುಮ್ಕಾದ ಶಿಕಾರಿಪರಾ ಪೊಲೀಸ್ ಠಾಣೆ ಪ್ರದೇಶದ ಸುಂದರಪ್ಲಾನ್ ಗ್ರಾಮದಲ್ಲಿ ನಡೆದಿದೆ. ದಂಪತಿಗಳಾದ ಸಾಹೇಬ್ ಹೆಂಬ್ರಾಮ್ (63) ಮತ್ತು ಅವರ ಪತ್ನಿ ಮಂಗಲಿ ಕಿಸ್ಕು (60) ಅವರನ್ನು ಇರಿದು ಕೊಲ್ಲಲಾಗಿದೆ. ಅವರ ಇಬ್ಬರು ಹೆಣ್ಣುಮಕ್ಕಳಾದ 25 ವರ್ಷದ ಹಿರಾಮುನಿ ಹೆಂಬ್ರಾಮ್ ಮತ್ತು 17 ವರ್ಷದ ಬೆನಿ ಹೆಂಬ್ರಾಮ್ ಕೂಡ ಗಾಯಗೊಂಡಿದ್ದಾರೆ.
ಹಿರಿಯ ಮಗಳು ಹಿರಾಮುನಿ 2024 ರಲ್ಲಿ ಫೇಸ್‌ಬುಕ್‌ನಲ್ಲಿ ಪಾಕೂರ್ ನಿವಾಸಿ ಲೋಕೇಶ್ ಜೊತೆ ಸ್ನೇಹ ಬೆಳೆಸಿದ್ದಾಗಿ ಹೇಳಿದ್ದಾಳೆ. ಲೋಕೇಶ್ ದಿವ್ಯಾಂಗನಾಗಿದ್ದು ಒಂದು ಕೈ ಸ್ವಾದೀನವಿರಲಿಲ್ಲ. ಸ್ನೇಹ ಬೆಳೆದ ನಂತರ ಆತ ನಿರಂತರವಾಗಿ ಮದುವೆಗೆ ಒತ್ತಡ ಹೇರುತ್ತಿದ್ದನು, ಆದರೆ ಕುಟುಂಬ ಸದಸ್ಯರು ಇದಕ್ಕೆ ಸಿದ್ಧರಿರಲಿಲ್ಲ.
ಕಳೆದ ಮೂರು ದಿನಗಳಿಂದ, ಆತ ನಿರಂತರವಾಗಿ ಅವಳನ್ನು ಫೋನ್‌ನಲ್ಲಿ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದ, ಆದರೆ ಅವಳ ತಂದೆಯ ಸೂಚನೆಯಂತೆ ಅವಳು ಅವನೊಂದಿಗೆ ಮಾತನಾಡಲಿಲ್ಲ. ಇದರಿಂದ ಕೋಪಗೊಂಡ ಲೋಕೇಶ್, ಭಾರೀ ಮಳೆ ಬರುತ್ತಿದ್ದಾಗ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಚಾಕು ಸಹಿತ ಮನೆಗೆ ಬಂದಿದ್ದಾನೆ. ಮೊದಲು ಅವನು ಮಲಗಿದ್ದ ಆಕೆಯ ಹೆತ್ತವರ ಮೇಲೆ ದಾಳಿ ಮಾಡಿದ್ದ ನಂತರ ಇಬ್ಬರು ಸಹೋದರಿಯರು ಅವರನ್ನು ರಕ್ಷಿಸಲು ಹೋದಾಗ, ಅವನು ಅವರ ಮೇಲೂ ದಾಳಿ ಮಾಡಿದ್ದಾನೆ.
ಹೇಗೋ ಇಬ್ಬರು ಮನೆಯಿಂದ ಓಡಿ ಹೋಗಿ ಜೀವವನ್ನು ಉಳಿಸಿಕೊಂಡಿದ್ದಾರೆ. ದಾಳಿಯ ನಂತರ, ಸಹಾಯವಾಣಿಗೆ ಕರೆ ಮಾಡಲಾಯಿತು. ಪೊಲೀಸ್ ಠಾಣೆಯ ಉಸ್ತುವಾರಿ ಅಮಿತ್ ಕುಮಾರ್ ಲಾಕ್ರಾ ತಮ್ಮ ತಂಡದೊಂದಿಗೆ ಸ್ಥಳಕ್ಕೆ ತಲುಪಿ ಗಾಯಾಳುಗಳನ್ನು ಡುಮ್ಕಾ ಫೂಲ್ ಜಾನೋ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಿದ್ದಾರೆ.
ಮತ್ತಷ್ಟು ಓದಿ: ಮದುವೆಗೆ ವಯಸ್ಸು ಮುಖ್ಯನಾ? ಮ್ಯಾರೇಜ್ ಆಗೋಕೆ ಪರ್ಫೆಕ್ಟ್ ಏಜ್ ಯಾವುದು? ಇಲ್ಲಿದೆ ಮಾಹಿತಿ
ಶಿಕಾರಿಪರಾ ಪೊಲೀಸ್ ಠಾಣೆ ಪ್ರದೇಶದಲ್ಲಿ ವೃದ್ಧ ದಂಪತಿಯನ್ನು ಕೊಲೆ ಮಾಡಲಾಗಿದೆ ಮತ್ತು ಇಬ್ಬರೂ ಹೆಣ್ಣುಮಕ್ಕಳು ಗಾಯಗೊಂಡಿದ್ದಾರೆ ಎಂದು ಎಸ್ಪಿ ಪೀತಾಂಬರ್ ಸಿಂಗ್ ಖೇರ್ವಾರ್ ತಿಳಿಸಿದ್ದಾರೆ. ಆರೋಪಿಯನ್ನು ಹುಡುಕಲು ಪೊಲೀಸ್ ತಂಡವನ್ನು ನಿಯೋಜಿಸಲಾಗಿದೆ. ಗಾಯಗೊಂಡ ಹೆಣ್ಣುಮಕ್ಕಳು ಅಪಾಯದಿಂದ ಪಾರಾಗಿದ್ದಾರೆಂದು ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




