Breaking Yasin Malik ಭಯೋತ್ಪಾದನೆಗೆ ನಿಧಿ ಪ್ರಕರಣ: ಕಾಶ್ಮೀರಿ ಪ್ರತ್ಯೇಕತಾವಾದಿ ಯಾಸಿನ್ ಮಲಿಕ್​​ಗೆ ಜೀವಾವಧಿ ಶಿಕ್ಷೆ

| Updated By: ರಶ್ಮಿ ಕಲ್ಲಕಟ್ಟ

Updated on: May 25, 2022 | 8:35 PM

Terror funding case ಯಾಸಿನ್ ಮಲಿಕ್​​ಗೆ ದೆಹಲಿಯ ವಿಶೇಷ ಎನ್ಐಎ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಅಷ್ಟೇ ಅಲ್ಲದೆ ₹10 ಲಕ್ಷ ದಂಡ ಕಟ್ಟುವಂತೆ ಆದೇಶಿಸಿದೆ.

Breaking Yasin Malik ಭಯೋತ್ಪಾದನೆಗೆ ನಿಧಿ ಪ್ರಕರಣ: ಕಾಶ್ಮೀರಿ ಪ್ರತ್ಯೇಕತಾವಾದಿ ಯಾಸಿನ್ ಮಲಿಕ್​​ಗೆ ಜೀವಾವಧಿ ಶಿಕ್ಷೆ
ಯಾಸಿನ್ ಮಲಿಕ್
Follow us on

ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ ಕಾಶ್ಮೀರಿ ಪ್ರತ್ಯೇಕತಾವಾದಿ ಮತ್ತು ನಿಷೇಧಿತ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (JKLF) ಮುಖ್ಯಸ್ಥ ಯಾಸಿನ್ ಮಲಿಕ್‌ಗೆ (Yasin Malik) ದೆಹಲಿಯ ವಿಶೇಷ ಎನ್ಐಎ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಅಷ್ಟೇ ಅಲ್ಲದೆ ₹10 ಲಕ್ಷ ದಂಡ ಕಟ್ಟುವಂತೆ ಆದೇಶಿಸಿದೆ. ಪಟಿಯಾಲ ಹೌಸ್ ಕೋರ್ಟ್‌ನ ವಿಶೇಷ ಎನ್‌ಐಎ ನ್ಯಾಯಾಧೀಶ ಪ್ರವೀಣ್ ಸಿಂಗ್ ಈ ಶಿಕ್ಷೆ ಪ್ರಕಟಿಸಿದ್ದಾರೆ. ಇದಕ್ಕಿಂತ ಮುನ್ನ ಯಾಸಿನ್ ಮಲಿಕ್​​ಗೆ ಮರಣದಂಡನೆ ವಿಧಿಸುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬುಧವಾರ ದೆಹಲಿ ಕೋರ್ಟಿಗೆ ಕೋರಿತ್ತು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಮರಣದಂಡನೆ ವಿಧಿಸಲು ಎನ್‌ಐಎ ಬೇಡಿಕೆಯ ಕುರಿತು ಪ್ರತಿಕ್ರಿಯಿಸಿರುವ ಮಲಿಕ್, “ನಾನು ಯಾವುದಕ್ಕೂ ಬೇಡುವುದಿಲ್ಲ, ಪ್ರಕರಣವು ಈ ನ್ಯಾಯಾಲಯದಲ್ಲಿದೆ ಮತ್ತು ಅದನ್ನು ನಿರ್ಧರಿಸುವುದು ನ್ಯಾಯಾಲಯಕ್ಕೆ ಬಿಟ್ಟಿದ್ದು ಎಂದು ಹೇಳಿದರು. 2017 ರಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದನೆಗೆ ನಿಧಿ, ಭಯೋತ್ಪಾದನೆ ಹರಡುವಿಕೆ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಸಂಬಂಧಿಸಿದ ಆರೋಪಗಳಿಗೆ ಮಲಿಕ್ ತಪ್ಪೊಪ್ಪಿಕೊಂಡ ನಂತರ ದೆಹಲಿ ನ್ಯಾಯಾಲಯವು ಕಳೆದ ವಾರ ಮಲಿಕ್​​ನ್ನು ಅಪರಾಧಿ ಎಂದು ಘೋಷಿಸಿತ್ತು. ಯಾಸಿನ್ ಮಲಿಕ್ ವಿರುದ್ಧದ ತೀರ್ಪಿಗೆ ಮುನ್ನ ಎನ್‌ಐಎ ಮತ್ತು ದೆಹಲಿ ಪೊಲೀಸರು ಭಾರೀ ಭದ್ರತೆಯನ್ನು ಏರ್ಪಡಿಸಿದ್ದಾರೆ.


ಕಠಿಣವಾದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ (ಯುಎಪಿಎ) ಅಡಿಯಲ್ಲಿ ದಾಖಲಾದ ಪ್ರಕರಣಗಳು ಸೇರಿದಂತೆ ಎಲ್ಲ ಆರೋಪಗಳಲ್ಲಿಯೂ ತಾನು ತಪ್ಪಿತಸ್ಥ ಎಂದು ಮೇ 10ರಂದು ಯಾಸಿನ್ ಮಲಿಕ್ ತಪ್ಪೊಪ್ಪಿಗೆ ನೀಡಿದ್ದ. 2017ರಲ್ಲಿ ಕಾಶ್ಮೀರ ಕಣಿವೆಯಲ್ಲಿ ನಡೆದ ಭಯೋತ್ಪಾದನೆ ಹಾಗೂ ಪ್ರತ್ಯೇಕತಾವಾದ ಚಟುವಟಿಕೆಯ ಆರೋಪಕ್ಕೆ ಸಂಬಂಧಿಸಿದಂತೆ ಈ ಪ್ರಕರಣ ದಾಖಲಾಗಿತ್ತು.

ಯಾಸಿನ್ ಮಲಿಕ್ 2019ರಿಂದಲೂ ದೆಹಲಿಯ ತಿಹಾರ್ ಜೈಲಿನಲ್ಲಿದ್ದ. ಆತನ ವಿರುದ್ಧ ಯುಎಪಿಎ ಕಾಯ್ದೆಯ ಸೆಕ್ಷನ್ 16 (ಭಯೋತ್ಪಾದನಾ ಕೃತ್ಯ), 17 (ಭಯೋತ್ಪಾದನಾ ಚಟುವಟಿಕೆಗೆ ಹಣಕಾಸು ಸಂಗ್ರಹ), 18 (ಭಯೋತ್ಪಾದನಾ ಕೃತ್ಯ ಎಸಗಲು ಸಂಚು) ಮತ್ತು 20 (ಭಯೋತ್ಪಾದನಾ ಗುಂಪು ಅಥವಾ ಸಂಘಟನೆಯ ಸದಸ್ಯನಾಗಿರುವುದು), ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120-B (ಅಪರಾಧ ಸಂಚು) ಮತ್ತು 124-A (ದೇಶದ್ರೋಹ) ಪ್ರಕರಣಗಳನ್ನು ದಾಖಲಿಸಲಾಗಿತ್ತು.

ಯಾಸಿನ್ ಮಲಿಕ್ ಪ್ರಕರಣದ ಟೈಮ್ ಲೈನ್

  1. ಮೇ 25, 2022: ಭಯೋತ್ಪಾದನೆಗೆ ಆರ್ಥಿಕ ನೆರವು ಪ್ರಕರಣದಲ್ಲಿ ಯಾಸಿನ್ ಮಲಿಕ್ ಗೆ ಜೀವಾವಧಿ ಶಿಕ್ಷೆ ವಿಧಿಸಿದ ದೆಹಲಿ ಎನ್ಐಎ ಕೋರ್ಟ್  ಮೇ 19, 2022: ಅಪರಾಧಿ ಎಂದು ಘೋಷಿಸಿದ ಎನ್ಐಎ ಕೋರ್ಟ್
  2. ಮೇ 16, 2022: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸಂಸ್ಥಾಪಕ ಹಫೀಜ್ ಸಯೀದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾವುದ್ದೀನ್, ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕರಾದ ಯಾಸಿನ್ ಮಲಿಕ್, ಶಬ್ಬೀರ್ ಶಾ, ಮಸರತ್ ಆಲಂ ಮತ್ತು ಇತರರ ವಿರುದ್ಧ ಯುಎಪಿಎಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲು ಎನ್‌ಐಎ ನ್ಯಾಯಾಲಯ ಆದೇಶಿಸಿತ್ತು.
  3. ಏಪ್ರಿಲ್ 10, 2019: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಿ ಗುಂಪುಗಳಿಗೆ ಆರ್ಥಿಕ ನೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಯಾಸಿನ್ ಮಲಿಕ್ ಬಂಧನ
  4. ಫೆಬ್ರವರಿ 26, 2019: ಯಾಸಿನ್ ಮಲಿಕ್ ಮನೆಯನ್ನು ಶೋಧ ಮಾಡಿ ಹಲವಾರು ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಯಿತು.
  5. 2017: ಎನ್‌ಐಎ ವಿವಿಧ ಪ್ರತ್ಯೇಕತಾವಾದಿ ನಾಯಕರ ವಿರುದ್ಧ ಭಯೋತ್ಪಾದನೆ ನಿಧಿಯ ಪ್ರಕರಣವನ್ನು ದಾಖಲಿಸಿತು. 2019 ರಲ್ಲಿ ಸಲ್ಲಿಸಿದ ಚಾರ್ಜ್ ಶೀಟ್‌ನಲ್ಲಿ ಯಾಸಿನ್ ಮಲಿಕ್ ಮತ್ತು ಇತರ ನಾಲ್ವರನ್ನು ಹೆಸರಿಸಿದೆ.
  6. ಜನವರಿ 12, 2016: 2016 ರ ಜನವರಿಯಲ್ಲಿ ಯಾಸಿನ್ ಮಲಿಕ್ ಪಾಕಿಸ್ತಾನದೊಂದಿಗೆ ಗಿಲ್ಗಿಟ್-ಬಾಲ್ಟಿಸ್ತಾನ್ ವಿಲೀನವನ್ನು ವಿರೋಧಿಸಿ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರಿಗೆ ಪತ್ರ ಬರೆದಿದ್ದರು.
  7. ಫೆಬ್ರವರಿ 2013: ಯಾಸಿನ್ ಮಲಿಕ್ ಇಸ್ಲಾಮಾಬಾದ್‌ನ ಪ್ರತಿಭಟನಾ ಸ್ಥಳದಲ್ಲಿ ಲಷ್ಕರ್-ಎ-ತೈಬಾ (ಎಲ್‌ಇಟಿ) ಮುಖ್ಯಸ್ಥ ಹಫೀಜ್ ಮುಹಮ್ಮದ್ ಸಯೀದ್​​ಗೆ ನಿಷೇಧ ಹೇರಿದರು.
  8. ಮೇ 2007: ಯಾಸಿನ್ ಮಲಿಕ್ ಮತ್ತು ಜೆಕೆಎಲ್ ಎಫ್ ಅಭಿಯಾನವನ್ನು ಪ್ರಾರಂಭಿಸಿದ್ದು, ಇದನ್ನು ಸಫರ್-ಇ-ಆಜಾದಿ (ಸ್ವಾತಂತ್ರ್ಯದ ಪ್ರಯಾಣ) ಎಂದು ಕರೆಯಲಾಯಿತು.
  9. ಮಾರ್ಚ್ 26, 2002: ಭಯೋತ್ಪಾದನೆ ತಡೆ ಕಾಯಿದೆಯಡಿಯಲ್ಲಿ, ಯಾಸಿನ್ ಮಲಿಕ್ ಬಂಧನ.ಸುಮಾರು ಒಂದು ವರ್ಷ ಬಂಧನದಲ್ಲಿರಿಸಲಾಯಿತು.
  10. ಅಕ್ಟೋಬರ್ 1999: ಭಾರತೀಯ ಅಧಿಕಾರಿಗಳು ಸಾರ್ವಜನಿಕ ಸುರಕ್ಷತಾ ಕಾಯಿದೆ (PSA) ಅಡಿಯಲ್ಲಿ ಯಾಸಿನ್ ಮಲಿಕ್​​ನ್ನು ಬಂಧಿಸಿದರು.

Published On - 6:17 pm, Wed, 25 May 22