ಜಮ್ಮು ಕಾಶ್ಮೀರ(Jammu And Kashmir) ದಲ್ಲಿ ಈ ವರ್ಷ ನಡೆದ ಉಗ್ರರ ಹತ್ಯೆಗೆ ಸಂಬಂಧಿಸಿದ ಅಂಕಿ-ಅಂಶಗಳನ್ನು ಭದ್ರತಾ ಪಡೆಗಳು ಬಿಡುಗಡೆ ಮಾಡಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯೋಜಿಸಲಾದ ಭದ್ರತಾ ಪಡೆಗಳು ನೀಡಿರುವ ಮಾಡಿದ ಅಂಕಿ ಅಂಶದ ಪ್ರಕಾರ, 2022ಕ್ಕೆ ಹೋಲಿಸಿದರೆ 2023 ರ ಆರಂಭದಿಂದ ಕಣಿವೆಯಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕರ ಸಂಖ್ಯೆಯಲ್ಲಿ ಶೇಕಡಾ 78 ರಷ್ಟು ಇಳಿಕೆಯಾಗಿದೆ ಎಂದು ಹೇಳಿದೆ.
ಮಾಹಿತಿಯಂತೆ ಈ ವರ್ಷದ ಜನವರಿ 1 ರಿಂದ ಜುಲೈ 5 ರ ನಡುವೆ ನಡೆಸಿದ ವಿವಿಧ ಕಾರ್ಯಾಚರಣೆಗಳಲ್ಲಿ ಒಟ್ಟು 27 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. 2022ರಲ್ಲಿ ಇದೇ ಅವಧಿಯಲ್ಲಿ ಹತರಾದ ಉಗ್ರರ ಸಂಖ್ಯೆ 125 ಎಂದು ಎಎನ್‌ಐ ಸುದ್ದಿ ಸಂಸ್ಥೆಯ ವರದಿ ತಿಳಿಸಿದೆ.
ಭಾರತೀಯ ಸೇನೆ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ ನಡೆಸಿದ ವಿವಿಧ ಕಾರ್ಯಾಚರಣೆಗಳಲ್ಲಿ 27 ಭಯೋತ್ಪಾದಕರು ಹತರಾಗಿದ್ದಾರೆ. ಈ ಪೈಕಿ ಎಂಟು ಮಂದಿ ಸ್ಥಳೀಯ ಭಯೋತ್ಪಾದಕರು ಮತ್ತು 19 ಮಂದಿ ವಿದೇಶಿ ಭಯೋತ್ಪಾದಕರಿದ್ದರು.
ಮತ್ತಷ್ಟು ಓದಿ: Jammu And Kashmir: ಕುಪ್ವಾರಾದಲ್ಲಿ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ, ಐವರು ಉಗ್ರರ ಹತ್ಯೆ
2022 ರಲ್ಲಿ ಇದೇ ಅವಧಿಯಲ್ಲಿ 91 ಸ್ಥಳೀಯ ಭಯೋತ್ಪಾದಕರು ಮತ್ತು 34 ವಿದೇಶಿ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿತ್ತು. ಎರಡೂ ವರ್ಷಗಳ ಅಂಕಿಅಂಶಗಳನ್ನು ಹೋಲಿಸಿದರೆ, ಸ್ಥಳೀಯ ಭಯೋತ್ಪಾದಕರು ಮತ್ತು ವಿದೇಶಿ ಭಯೋತ್ಪಾದಕರ ಹತ್ಯೆಯಲ್ಲಿ ಕ್ರಮವಾಗಿ ಶೇ. 91 ಮತ್ತು ಶೇ. 44 ದಷ್ಟು ಇಳಿಕೆ ಕಂಡುಬಂದಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 2022 ರಲ್ಲಿ ಒಟ್ಟು 187 ಭಯೋತ್ಪಾದಕರು ಕೊಲ್ಲಲ್ಪಟ್ಟರು ಮತ್ತು 111 ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳನ್ನು ನಡೆಸಲಾಯಿತು. ಒಟ್ಟು, 130 ಸ್ಥಳೀಯ ಭಯೋತ್ಪಾದಕರು ಮತ್ತು 57 ವಿದೇಶಿ ಭಯೋತ್ಪಾದರಾಗಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ