Tomato Price : ಈ ರಾಜ್ಯದಲ್ಲಿ 250ರೂ.ಗೆ ತಲುಪಿದ ಒಂದು ಕೆಜಿ ಟೊಮೆಟೊ ಬೆಲೆ
ಟೊಮೆಟೊ(Tomato) ಎಂದಾಕ್ಷಣ ಹಣ್ಣಿನಷ್ಟೇ ಎಲ್ಲರ ಮುಖವೂ ಕೆಂಪಾಗುತ್ತಿದೆ ಏಕೆಂದರೆ ಅದರ ಬೆಲೆ ಅಷ್ಟಿದೆ. ಸಾಕಷ್ಟು ಬಾರಿ ಈರುಳ್ಳಿ ಸೇರಿದಂತೆ ಸಾಕಷ್ಟು ತರಕಾರಿಗಳ ಬೆಲೆ ಏರಿಕೆಯಾದಾಗಲೂ ಟೊಮೆಟೊ ಒಂದೇ ಕಡಿಮೆ ಬೆಲೆ ಇದ್ದುಕೊಂಡು ಹಸಿದವರ ಹೊಟ್ಟೆಯನ್ನು ತುಂಬಿಸಿತ್ತು.
ಟೊಮೆಟೊ(Tomato) ಎಂದಾಕ್ಷಣ ಹಣ್ಣಿನಷ್ಟೇ ಎಲ್ಲರ ಮುಖವೂ ಕೆಂಪಾಗುತ್ತಿದೆ ಏಕೆಂದರೆ ಅದರ ಬೆಲೆ ಅಷ್ಟಿದೆ. ಸಾಕಷ್ಟು ಬಾರಿ ಈರುಳ್ಳಿ ಸೇರಿದಂತೆ ಸಾಕಷ್ಟು ತರಕಾರಿಗಳ ಬೆಲೆ ಏರಿಕೆಯಾದಾಗಲೂ ಟೊಮೆಟೊ ಒಂದೇ ಕಡಿಮೆ ಬೆಲೆ ಇದ್ದುಕೊಂಡು ಹಸಿದವರ ಹೊಟ್ಟೆಯನ್ನು ತುಂಬಿಸಿತ್ತು. ಆದರೆ ಕೇವಲ ಕರ್ನಾಟಕ ಮಾತ್ರವಲ್ಲ ವಿವಿಧ ರಾಜ್ಯಗಳಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದೆ. ಕರ್ನಾಟಕದಲ್ಲಿ ಒಂದು ಕೆಜಿ ಟೊಮೆಟೊ 120-150 ರೂ.ವರೆಗೆ ಮಾರಾಟವಾಗುತ್ತಿದ್ದರೆ ಬೇರೆ ರಾಜ್ಯಗಳಲ್ಲಿ 250 ರೂ.ವರೆಗೂ ಮಾರಾಟ ಮಾಡಲಾಗುತ್ತಿದೆ.
ಗಂಗೋತ್ರಿಯಲ್ಲಿ ಪ್ರತಿ ಕೆಜಿಗೆ 250 ರೂ. ಮತ್ತು ಉತ್ತರಕಾಶಿ ಜಿಲ್ಲೆಯಲ್ಲಿ ಪ್ರತಿ ಕೆಜಿಗೆ 180ರೂ.ನಿಂದ 200 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಉತ್ತರಕಾಶಿಯಲ್ಲಿ ಹೆಚ್ಚುತ್ತಿರುವ ಟೊಮೆಟೊ ಬೆಲೆಯಿಂದ ಗ್ರಾಹಕರು ಹೆಚ್ಚು ಹೊರೆಯನ್ನು ಎದುರಿಸುತ್ತಿದ್ದಾರೆ. ಜನರು ಈಗ ಹಣ್ಣನ್ನು ಖರೀದಿಸಲು ಸಹ ಸಿದ್ಧರಿಲ್ಲ.
ಮತ್ತಷ್ಟು ಓದಿ: ಕೆಂಪು ಸುಂದರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು; ಹಾಸನದಲ್ಲಿ ಲಕ್ಷಾಂತರ ರೂ. ಮೌಲ್ಯದ ಟೊಮೇಟೊ ಕಳ್ಳತನ
ಗಂಗೋತ್ರಿ, ಯಮುನೋತ್ರಿಯಲ್ಲಿ, ಟೊಮೆಟೊ ಕೆಜಿಗೆ 200 ರೂ.ನಿಂದ 250 ರೂ.ಗೆ ಮಾರಾಟವಾಗುತ್ತಿದೆ ಎಂದು ತರಕಾರಿ ಮಾರಾಟಗಾರ ರಾಕೇಶ್ ಎಎನ್‌ಐಗೆ ತಿಳಿಸಿದ್ದಾರೆ.
ಪ್ರಮುಖ ಟೊಮೆಟೊ ಬೆಳೆಯುವ ಪ್ರದೇಶಗಳಲ್ಲಿ ಹೆಚ್ಚಾದ ತಾಪಮಾನ ಹಾಗೂ ಅಕಾಲಿಕ ಮಳೆಯಿಂದಾಗಿ ತರಕಾರಿ ಬೆಲೆಗಳು ಹೆಚ್ಚಾಗಿವೆ. ಚೆನ್ನೈನಲ್ಲಿ ಸದ್ಯ ಟೊಮೆಟೊ ಕೆಜಿಗೆ 100-130 ರೂ.ಗೆ ಮಾರಾಟವಾಗುತ್ತಿದೆ.
ಬೆಲೆ ಏರಿಕೆಯ ನಡುವೆಯೂ ಗ್ರಾಹಕರಿಗೆ ಕೊಂಚ ಬಿಡುವು ನೀಡುವ ಉದ್ದೇಶದಿಂದ ತಮಿಳುನಾಡು ಸರ್ಕಾರವು ರಾಜ್ಯ ರಾಜಧಾನಿ ಚೆನ್ನೈನ ಪಡಿತರ ಅಂಗಡಿಗಳಲ್ಲಿ ಪ್ರತಿ ಕೆಜಿಗೆ 60 ರೂ. ಸಬ್ಸಿಡಿ ದರದಲ್ಲಿ ಟೊಮೆಟೊವನ್ನು ಮಾರಾಟ ಮಾಡಲು ಪ್ರಾರಂಭಿಸಿದೆ.
ಹಲವು ರಾಜ್ಯಗಳಂತೆ ಕರ್ನಾಟಕದಲ್ಲೂ ಇತ್ತೀಚಿನ ದಿನಗಳಲ್ಲಿ ಟೊಮೆಟೊ ಬೆಲೆ ಏರಿಕೆಯಾಗಿದೆ. ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಹಠಾತ್ ತಾಪಮಾನ ಏರಿಕೆಯಿಂದಾಗಿ ಬೆಲೆಗಳು ಹೆಚ್ಚಾಗಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:16 am, Fri, 7 July 23