ಕೆಂಪು ಸುಂದರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು; ಹಾಸನದಲ್ಲಿ ಲಕ್ಷಾಂತರ ರೂ. ಮೌಲ್ಯದ ಟೊಮೇಟೊ ಕಳ್ಳತನ

ಸೋಮನಹಳ್ಳಿ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಟೊಮೇಟೊ ಕಳ್ಳತನವಾಗಿದೆ. ಐವತ್ತರಿಂದ ಅರವತ್ತು ಬ್ಯಾಗ್‌ನಷ್ಟು ಟೊಮೇಟೊವನ್ನು ಖದೀಮರು ಕದ್ದು ಪರಾರಿಯಾಗಿದ್ದಾರೆ.

ಕೆಂಪು ಸುಂದರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು; ಹಾಸನದಲ್ಲಿ ಲಕ್ಷಾಂತರ  ರೂ. ಮೌಲ್ಯದ ಟೊಮೇಟೊ ಕಳ್ಳತನ
ಟೊಮ್ಯಾಟೊ
Follow us
TV9 Web
| Updated By: ಆಯೇಷಾ ಬಾನು

Updated on: Jul 05, 2023 | 11:00 AM

ಹಾಸನ: ರಾಜ್ಯದಲ್ಲಿ ಕೆಂಪು ಸುಂದರಿ ಟೊಮೇಟೊ ಬೆಲೆ ಗಗನಕ್ಕೇರಿದೆ(Tomato Rate Increased). ಯಾವ ಜಿಲ್ಲೆಗೆ ಹೋದರೂ 100 ರೂಪಾಯಿಗಿಂತ ಕಡಿಮೆ ಇಲ್ಲ. ಹೀಗಾಗಿ ಖದೀಮರು ಟೊಮೇಟೊ ಕಳ್ಳತನಕ್ಕೆ ಮುಂದಾಗಿದ್ದಾರೆ. ಹಾಸನ ಜಿಲ್ಲೆ ಬೇಲೂರು ತಾಲೂಕಿನ ಗೋಣಿ ಸೋಮನಹಳ್ಳಿ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಟೊಮೇಟೊ ಕಳ್ಳತನವಾಗಿದೆ(Tomato Theft). ಐವತ್ತರಿಂದ ಅರವತ್ತು ಬ್ಯಾಗ್‌ನಷ್ಟು ಟೊಮೇಟೊವನ್ನು ಖದೀಮರು ಕದ್ದು ಪರಾರಿಯಾಗಿದ್ದಾರೆ.

ಗ್ರಾಮದ ಧರಣಿ ಎಂಬುವವರು ತಮ್ಮ ಜಮೀನಿನಲ್ಲಿ ಟೊಮೇಟೊ ಬೆಳೆದಿದ್ದರು. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುವುದುರಿಂದ ಒಳ್ಳೆಯ ಲಾಭ ಬರುತ್ತೆ ಎಂಬ ಆಸೆಯಲ್ಲಿದ್ದರು. ಆದ್ರೆ ಕಳೆದ ರಾತ್ರಿ ಹೊಲಕ್ಕೆ ನುಗ್ಗಿರುವ ಕೆಲ ಕಳ್ಳರು ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಮೌಲ್ಯದ ಟೊಮೇಟೊ ಕಳ್ಳತನ ಮಾಡಿದ್ದಾರೆ. ಇಂದು ಬೆಳಿಗ್ಗೆ ಧರಣಿ ಅವರು ತಮ್ಮ ಜಮೀನಿನ ಬಳಿ ಹೋದಾಗ ಟೊಮೇಟೊ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಹಳೇಬೀಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಕ್ಷಾಂತರ ಮೌಲ್ಯದ ಟೊಮೇಟೊ ಕಳೆದುಕೊಂಡು ರೈತ ಧರಣಿ ಕಂಗಾಲಾಗಿದ್ದಾರೆ.

ಇದನ್ನೂ ಓದಿ: Haveri News: ಟೊಮೆಟೊಗೆ ಭರ್ಜರಿ ಬೆಲೆ; ಕಳವು ಪತ್ತೆಗೆ ಸಿಸಿಟಿವಿ ಅಳವಡಿಸಿದ ಅಕ್ಕಿ ಆಲೂರ ವ್ಯಾಪಾರಿ

ಕೆಲ ವರ್ಷದ ಹಿಂದೆ ಈರುಳ್ಳಿ ಬೆಲೆ ಕೂಡ ಇದೇ ರೀತಿ ಏರಿಕೆಯಾಗಿತ್ತು. ಆಗ ಕೂಡ ಖದೀಮರು ಈರುಳ್ಳಿ ಕದ್ದು ಹಣ ಮಾಡಿದ್ದರು. ಅಲ್ಲದೆ ಮದುವೆಗೆ ಬಂದವರು ವರ-ವಧುವಿಗೆ ಈರುಳ್ಳಿ ಗಿಫ್ಟ್ ನೀಡೋದು ಟ್ರೆಂಟ್ ಆಗಿತ್ತು. ರೈತರು ತಾವು ಬೆಳೆದ ಈರುಳ್ಳಿ ಕಾಪಾಡಲು ನಿದ್ದೆ ಇಲ್ಲದೆ ಹಗಲು-ರಾತ್ರಿ ಕಾಯುತ್ತಿದ್ದರು. ಸದ್ಯ ಈಗ ಇದೇ ಪರಿಸ್ಥಿತಿ ಟೊಮೇಟೊಗೆ ಬಂದಿದೆ. 10ರೂ, 20ರೂಪಾಯಿಗೆ ಬರುತ್ತಿದ್ದ ಟೊಮೇಟೊ ಈಗ ನೂರರ ಗಡಿದಾಟಿದೆ. ಹೀಗಾಗಿ ಟೊಮೇಟೊ ರೈತರು ಕಳ್ಳರಿಂದ ತಮ್ಮ ಬೆಳೆ ಕಾಪಾಡಿಕೊಳ್ಳುವಂತಾಗಿದೆ.

ಇನ್ನು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿ ಆಲೂರ ಗ್ರಾಮದ ಮಾರುಕಟ್ಟೆಯಲ್ಲಿ ಕೃಷ್ಣಪ್ಪ ಎಂಬ ವ್ಯಾಪಾರಿಯೊಬ್ಬರು ಮಾರಾಟಕ್ಕೆ ತಂದ ಟೊಮೇಟೊ ಕಳ್ಳತನವಾಗಬಾರದೆಂದು ಸಿಸಿಟಿವಿ ಅಳವಡಿಸಿದ್ದಾರೆ. ತರಕಾರಿ ಖರೀದಿಸಲು ಬರುವ ಗ್ರಾಹಕರು ಕಣ್ತಪ್ಪಿಸಿ ಮೂರು-ನಾಲ್ಕು ಟೊಮೇಟೊಗಳನ್ನು ತೆಗೆದುಕೊಂಡು ಹೋಗುತ್ತಾರೆ. ಹೀಗಾಗಿ ಸಿಸಿಟಿವಿ ಅಳವಡಿಸಿದ್ದೇನೆ ಎಂದು ಕೃಷ್ಣಪ್ಪ ತಿಳಿಸಿದ್ದಾರೆ.

ಹಾಸನಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್