ಅಜಿತ್ ಪವಾರ್ vs ಶರದ್ ಪವಾರ್; ಪಕ್ಷದಲ್ಲಿ ಬಂಡಾಯವೆದ್ದ ನಾಯಕರನ್ನು ಉಚ್ಚಾಟಿಸಿದ ಎನ್‌ಸಿಪಿ
ತನ್ನ ನಿವೃತ್ತಿಯ ಬಗ್ಗೆ ಅಜಿತ್ ಪವಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಶರದ್ ಪವಾರ್, ನನಗೆ 82 ಅಥವಾ 92 ವಯಸ್ಸೇ ಆಗಿರಲಿ ನಾನು ಇನ್ನೂ ಚುರುಕಾಗಿದ್ದೇನೆ ಎಂದು ಹೇಳಿದ್ದಾರೆ.
ಬಂಡಾಯವೆದ್ದ ನಾಯಕರಾದ ಪ್ರಫುಲ್ ಪಟೇಲ್ ಮತ್ತು ಸುನೀಲ್ ತಟ್ಕರೆ ಮತ್ತು ಇತರ ಒಂಬತ್ತು ಮಂದಿಯನ್ನು ಪಕ್ಷದಿಂದ ಉಚ್ಚಾಟಿಸುವ ನಿರ್ಧಾರವನ್ನು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (Nationalist Congress Party) ಕಾರ್ಯಕಾರಿ ಸಮಿತಿಯು ಅನುಮೋದಿಸಿದೆ ಎಂದು ಪಿಸಿ ಚಾಕೊ (PC Chacko) ಗುರುವಾರ ಹೇಳಿದ್ದಾರೆ. ಅಜಿತ್ ಪವಾರ್ (Ajit Pawar) ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂಬ ಬಂಡಾಯ ಬಣದ ಹೇಳಿಕೆಯನ್ನು ತಳ್ಳಿ ಹಾಕಿದ ಅವರು ಅಂತಹ ವಾದಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದಿದ್ದಾರೆ. ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶರದ್ ಪವಾರ್ (Sharad Pawar), “ನಾನು ಎನ್‌ಸಿಪಿ ಅಧ್ಯಕ್ಷ, ಯಾರಾದರೂ (ಅವರು ಅಧ್ಯಕ್ಷರು ಎಂದು) ಹೇಳಿದರೆ ಅದು ಸಂಪೂರ್ಣವಾಗಿ ಸುಳ್ಳು, ಅದರಲ್ಲಿ ಯಾವುದೇ ಸತ್ಯವಿಲ್ಲ. ಅಜಿತ್ ಪವಾರ್ ಏನಾದರೂ ಹೇಳಿದರೆ ಯಾವುದೇ ಪ್ರಾಮುಖ್ಯತೆ ಇಲ್ಲ. ಅದೇ ವೇಳೆ ಪಕ್ಷದ ಹೆಸರು ಮತ್ತು ಚಿಹ್ನೆಯ ವಿಷಯದ ಕುರಿತು ಮಾತಾನಾಡಿದ ಅವರು”ನಾವು ಭಾರತೀಯ ಚುನಾವಣಾ ಆಯೋಗವನ್ನು ನಂಬುತ್ತೇವೆ, ನಾವು ಏನನ್ನಾದರೂ ಹೇಳಬೇಕಾದರೆ ನಾವು ಇಸಿಐಗೆ ಹೋಗುತ್ತೇವೆ” ಎಂದಿದ್ದಾರೆ.
ತನ್ನ ನಿವೃತ್ತಿಯ ಬಗ್ಗೆ ಅಜಿತ್ ಪವಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಶರದ್ ಪವಾರ್, ನನಗೆ 82 ಅಥವಾ 92 ವಯಸ್ಸೇ ಆಗಿರಲಿ ನಾನು ಇನ್ನೂ ಚುರುಕಾಗಿದ್ದೇನೆ ಎಂದು ಹೇಳಿದ್ದಾರೆ.
ಬೆಂಬಲಿಗರು ಮತ್ತು 53 ಎನ್‌ಸಿಪಿ ಶಾಸಕರಲ್ಲಿ 32 ಮಂದಿಯ ಬಲದಲ್ಲಿರುವ ಅಜಿತ್ ಪವಾರ್ ಬುಧವಾರ ತಮ್ಮ 83 ವರ್ಷದ ಮಾವನ ವಿರುದ್ಧ ವಾಗ್ದಾಳಿ ನಡೆಸಿ ಮರಾಠಾ ಪ್ರಬಲ ವ್ಯಕ್ತಿ ಯಾವಾಗ ಸಕ್ರಿಯ ರಾಜಕೀಯದಿಂದ ನಿವೃತ್ತಿ ಹೊಂದುತ್ತಾರೆ ಎಂದು ಕೇಳಿದ್ದರು. ನಿಮಗೆ 83 ವರ್ಷ, ನೀವು ನಿವೃತ್ತಿಯಾಗುತ್ತಿಲ್ಲವೇ? ಪ್ರತಿಯೊಬ್ಬರಲ್ಲೂ ಅವರದೇ ಇನ್ನಿಂಗ್ಸ್ ಇರುತ್ತದೆ. ಹೆಚ್ಚು ಉತ್ಪಾದಕ ವರ್ಷಗಳು ಅಂದರೆ 25 ರಿಂದ 75 ವರ್ಷಗಳು. ನಿಮ್ಮ ಆಶೀರ್ವಾದವನ್ನು ನಮಗೆ ನೀಡಿ. ನೀವು ದೀರ್ಘಕಾಲ ಬದುಕಬೇಕೆಂದು ನಾವು ಪ್ರಾರ್ಥಿಸುತ್ತೇವೆ ಎಂದು ಅಜಿತ್ ಪವಾರ್ ಹೇಳಿದ್ದಾರೆ.
“ನಮಗೆ, ಸಾಹೇಬ್ (ಶರದ್ ಪವಾರ್) ಒಬ್ಬ ದೇವರು.ನಾವು ಅವರ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದೇವೆ. ಐಎಎಸ್ ಅಧಿಕಾರಿಗಳು 60 ನೇ ವಯಸ್ಸಿನಲ್ಲಿ ನಿವೃತ್ತರಾಗುತ್ತಾರೆ. ರಾಜಕೀಯದಲ್ಲಿಯೂ ಸಹ ಬಿಜೆಪಿ ನಾಯಕರು 75 ನೇ ವಯಸ್ಸಿನಲ್ಲಿ ನಿವೃತ್ತರಾಗುತ್ತಾರೆ. ನೀವು ಎಲ್ ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಅವರ ಉದಾಹರಣೆಯನ್ನು ನೋಡಬಹುದು ಎಂದಿದ್ದಾರೆ.
ಆದಾಗ್ಯೂ, ಹೊಸದಾಗಿ ಸೇರ್ಪಡೆಗೊಂಡ ಕ್ಯಾಬಿನೆಟ್ ಸಚಿವ ಛಗನ್ ಭುಜಬಲ್ ಗೆ 75 ವರ್ಷ ವಯಸ್ಸು. ಅವರು ಅಜಿತ್ ಪವಾರ್ ಶಿಬಿರದ ಪ್ರಮುಖ ಸದಸ್ಯರಾಗಿದ್ದಾರೆ.
ಪವಾರ್ ಅವರು ದೆಹಲಿಯ ನಿವಾಸದಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಕರೆದಿದ್ದರು. ಪಿಸಿ ಚಾಕೋ, ಜಿತೇಂದ್ರ ಅವ್ಹಾದ್, ಫೌಜಿಯಾ ಖಾನ್ ಮತ್ತು ವಂದನಾ ಚವ್ಹಾಣ್ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಜುಲೈ 14 ರಂದು ಮಧ್ಯಾಹ್ನ 2.35ಕ್ಕೆ ಚಂದ್ರಯಾನ-3 ಉಡಾವಣೆ: ಇಸ್ರೋ ಘೋಷಣೆ
ಏತನ್ಮಧ್ಯೆ, ಶರದ್ ಪವಾರ್ ಅವರು ದೆಹಲಿಯಲ್ಲಿ ಕರೆದಿರುವ ಎನ್‌ಸಿಪಿ ಕಾರ್ಯಕಾರಿ ಸಮಿತಿ ಸಭೆಗೆ ಯಾವುದೇ ಕಾನೂನು ಪವಿತ್ರತೆ ಇಲ್ಲ ಎಂದು ಅಜಿತ್ ಪವಾರ್ ನೇತೃತ್ವದ ಬಣ ಹೇಳಿಕೆಯಲ್ಲಿ ತಿಳಿಸಿದೆ.
ಶರದ್ ಪವಾರ್ ಅವರು ಇಂದು ನವದೆಹಲಿಯಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ/ರಾಷ್ಟ್ರೀಯ ಕಾರ್ಯಕಾರಿ ಸಮಿತಿ/ರಾಷ್ಟ್ರೀಯ ಪದಾಧಿಕಾರಿಗಳು/ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ರಾಜ್ಯ ಪಕ್ಷದ ಅಧ್ಯಕ್ಷರ ಸಭೆಯನ್ನು ಕರೆದಿದ್ದಾರೆ ಎಂದು ವಿವಿಧ ಮಾಧ್ಯಮಗಳ ವರದಿಗಳಿಂದ ತಿಳಿದುಬಂದಿದೆ. ಎನ್‌ಸಿಪಿಯ ಬಹುಪಾಲು ಚುನಾಯಿತ ಪ್ರತಿನಿಧಿಗಳು ಮತ್ತು ವಿವಿಧ ಸಾಂಸ್ಥಿಕ ಹುದ್ದೆಯಲ್ಲಿ ಕೆಲಸ ಮಾಡುವ ಸದಸ್ಯರ ಅಗಾಧ ಬೆಂಬಲದೊಂದಿಗೆ ಅಜಿತ್ ಪವಾರ್ ಅವರು 30.06.2023 ರಂದು ಎನ್‌ಸಿಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಅಜಿತ್ ಪವಾರ್ ಬಣದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ