ಪೊಲೀಸ್​​-ಸಿಆರ್​ಪಿಎಫ್​ ತುಕಡಿಗಳ ಮೇಲೆ ಉಗ್ರರ ದಾಳಿ

ದಾಳಿ ವೇಳೆ ಓರ್ವ ಪೋಲಿಸ್ ಸಿಬ್ಬಂದಿ ಮತ್ತು ಓರ್ವ ನಾಗರಿಕ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್​​-ಸಿಆರ್​ಪಿಎಫ್​ ತುಕಡಿಗಳ ಮೇಲೆ ಉಗ್ರರ ದಾಳಿ
ಸಾಂದರ್ಭಿಕ ಚಿತ್ರ
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 06, 2020 | 5:28 PM

ಶ್ರೀನಗರ: ಪೊಲೀಸ್ ಮತ್ತು ಸಿಆರ್​ಪಿಎಫ್​ ಸಿಬ್ಬಂದಿಯಿದ್ದ ಜಂಟಿ ಕಾರ್ಯಾಚರಣೆ ತುಕಡಿಯ ಮೇಲೆ ಭಾನುವಾರ ಮುಂಜಾನೆ ಭಯೋತ್ಪಾದಕರು ದಾಳಿ ಮಾಡಿದ್ದಾರೆ. ದಾಳಿ ವೇಳೆ ಓರ್ವ ಪೋಲಿಸ್ ಸಿಬ್ಬಂದಿ ಮತ್ತು ಓರ್ವ ನಾಗರಿಕ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹವಾಲ್ ಪ್ರದೇಶದ ಸಜ್ಗಾರಿಪುರದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರ ಮೇಲೆ ಭಯೋತ್ಪಾದಕರು ನಿರ್ದಾಕ್ಷಿಣ್ಯವಾಗಿ ಗುಂಡು ಹಾರಿಸಿದರು. ಈ ಸಂದರ್ಭ ಪೊಲೀಸ್ ಸಿಬ್ಬಂದಿ ಫಾರೂಕ್ ಅಹ್ಮದ್ ಚೋಪನ್ ಮತ್ತು ನಾಗರಿಕ ಮುನೀರ್ ಅಹ್ಮದ್ ಗಾಯಗೊಂಡರು. ಸದ್ಯ ಈ ಪ್ರದೇಶವನ್ನು ರಕ್ಷಣಾ ಸಿಬ್ಬಂದಿ ಸುತ್ತುವರಿದಿದ್ದು, ಭಯೋತ್ಪಾದಕರಿಗಾಗಿ ಶೋಧಕಾರ್ಯ ನಡೆದಿದೆ ಎಂದು ಕಾಶ್ಮೀರ ವಲಯದ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರವು ಹಿಂಪಡೆದ ನಂತರ ಕಾಶ್ಮೀರದ ಶಾಂತಿ ಹಾಳುಮಾಡುವ ಪ್ರಯತ್ನಗಳು ನಡೆಯುತ್ತಿದ್ದವು. ಗಡಿದಾಟಿ ಬರುವ ಯತ್ನವೂ ಸೇರಿದಂತೆ ಭಯೋತ್ಪಾದಕ ಸಂಘಟನೆಗಳ ಹಲವು ಹುನ್ನಾರಗಳನ್ನು ಭದ್ರತಾಪಡೆಗಳ ವಿಫಲಗೊಳಿಸಿದ್ದವು.

ಮತ್ತೆ ಮತಿಗೇಡಿ ಉಗ್ರರ ಅಟ್ಟಹಾಸ, ಮೂವರು CRPF ಯೋಧರು ಹುತಾತ್ಮ