Chandrababu Naidu: ಚಂದ್ರಬಾಬು ನಾಯ್ಡುಗೆ ಜಾಮೀನು ನೀಡಿದ ಆಂಧ್ರ ಹೈಕೋರ್ಟ್, ಆದರೆ ಸದ್ಯಕ್ಕಿಲ್ಲ ಬಿಡುಗಡೆ

|

Updated on: Oct 13, 2023 | 11:49 AM

ಅಂಗಲ್ಲು 307 ಪ್ರಕರಣದಲ್ಲಿ ಚಂದ್ರಬಾಬು ನಾಯ್ಡುಗೆ ಆಂಧ್ರ ಪ್ರದೇಶ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆದರೆ ಚಂದ್ರಬಾಬು ನಾಯ್ಡು ಇತರ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿ ಉಳಿಯಲಿದ್ದಾರೆ.

Chandrababu Naidu: ಚಂದ್ರಬಾಬು ನಾಯ್ಡುಗೆ ಜಾಮೀನು ನೀಡಿದ ಆಂಧ್ರ ಹೈಕೋರ್ಟ್, ಆದರೆ ಸದ್ಯಕ್ಕಿಲ್ಲ ಬಿಡುಗಡೆ
ಚಂದ್ರಬಾಬು ನಾಯ್ಡುಗೆ ಜಾಮೀನು ನೀಡಿದ ಆಂಧ್ರ ಪ್ರದೇಶ ಹೈಕೋರ್ಟ್
Follow us on

ಹೈದರಾಬಾದ್, ಅಕ್ಟೋಬರ್​ 13: ಅಂಗಲ್ಲು ಹಿಂಸಾಚಾರ ಪ್ರಕರಣಕ್ಕೆ ( Angallu incident) ಸಂಬಂಧಿಸಿದಂತೆ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರಿಗೆ (TDP chief Chandrababu Naidu) ಆಂಧ್ರಪ್ರದೇಶ ಹೈಕೋರ್ಟ್ (AP High Court) ಶುಕ್ರವಾರ ನಿರೀಕ್ಷಣಾ ಜಾಮೀನು (anticipatory bail) ಮಂಜೂರು ಮಾಡಿದೆ.

ಪ್ರಕರಣದಲ್ಲಿ ಎರಡೂ ಕಡೆಯ ವಾದ, ಪ್ರತಿವಾದಗಳನ್ನು ಆಲಿಸಿದ ಎಪಿ ಹೈಕೋರ್ಟ್ ಗುರುವಾರ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಚಂದ್ರಬಾಬು ವಿರುದ್ಧ ಅಂಗಾಲು ಘಟನೆಯಲ್ಲಿ ಅನ್ನಮಯ್ಯ ಜಿಲ್ಲೆಯ ಮುದಿವೇಡು ಪೊಲೀಸರು ಪ್ರಕರಣ ದಾಖಲಿಸಿದ್ದರು.

ಆಗಸ್ಟ್ 4 ರಂದು ಅನ್ನಮಯ ಜಿಲ್ಲೆಯ ಅಂಗಲ್ಲು ಗ್ರಾಮದಲ್ಲಿ ಸಂಭವಿಸಿದ ಹಿಂಸಾಚಾರಕ್ಕೆ ನಾಯ್ಡು ಅವರ ಹೇಳಿಕೆಗಳು ಕಾರಣವೆಂದು ಅಪರಾಧ ತನಿಖಾ ಇಲಾಖೆ (ಸಿಐಡಿ- Crime Investigation Department -CID) ಜಾಮೀನು ಅರ್ಜಿಯನ್ನು ವಿರೋಧಿಸಿತ್ತು.

Also read: ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ ಮತ್ತೆ ನಿರಾಸೆ, ಕೇಸು ರದ್ದು ಕುರಿತಾದ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

ಅಂಗಾಲು ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದರೂ, ಚಂದ್ರಬಾಬು ನಾಯ್ಡು ಅವರನ್ನು ಕಳೆದ ತಿಂಗಳು ಸಿಐಡಿ ಬಂಧಿಸಿತ್ತು. ಇದೇ ವೇಳೆ ಕೌಶಲಾಭಿವೃದ್ಧಿ ಹಗರಣ ಸೇರಿದಂತೆ ಇತರ ಪ್ರಕರಣಗಳಿಗೆ ಸಂಬಂಧಿಸಿದಂತೆ ಚಂದ್ರಬಾಬುಗೆ ನ್ಯಾಯಾಂಗ ಬಂಧನ ಮುಂದುವರಿಯಲಿದೆ.

ನಾಯ್ಡು ಅವರು ಚರ್ಮದ ಅಲರ್ಜಿಯಿಂದ ಬಳಲುತ್ತಿದ್ದಾರೆ ಎಂದು ದೂರಿದ ನಂತರ ಗುರುವಾರ ತಜ್ಞ ವೈದ್ಯರ ತಂಡ ರಾಜಮಹೇಂದ್ರವರಂ (ರಾಜಮಂಡ್ರಿ) ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಅವರ ಆರೋಗ್ಯವನ್ನು ಪರೀಕ್ಷಿಸಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:30 am, Fri, 13 October 23