ಮಥುರಾ: ಉತ್ತರ ಪ್ರದೇಶದ ಮಥುರಾದಲ್ಲಿ ನಿನ್ನೆ ರಾತ್ರಿ ಯುವತಿಯೊಬ್ಬಳನ್ನು ಕಾರಿನಲ್ಲಿ ಕೆಳಗೆ ಹಾಕಿ 10 ಕಿ.ಮೀ ಎಳೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ, ನಂತರ ಯುವತಿಯ ಸಾವನ್ನಪ್ಪಿದ್ದಾರೆ. ಹಿಟ್ ಅಂಡ್ ಡ್ರ್ಯಾಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತದೇಹವನ್ನು ಕಾರಿನ ಅಂಡರ್ ಕ್ಯಾರೇಜಿನಲ್ಲಿ ಹಾಕಿ ಸುಮಾರು 10 ಕಿ.ಮೀ ವರೆಗೆ ಎಳೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರು ಚಲಾಯಿಸುತ್ತಿದ್ದ ದೆಹಲಿ ನಿವಾಸಿ ವೀರೇಂದ್ರ ಸಿಂಗ್ ಎಂಬಾತನನ್ನು ಬಂಧಿಸಲಾಗಿದೆ. ವೀರೇಂದ್ರ ಸಿಂಗ್ ಆಗ್ರಾದಿಂದ ನೋಯ್ಡಾಗೆ ಕಾರು ಚಾಲನೆ ಮಾಡುತ್ತಿದ್ದಾಗ ಯಮುನಾ ಎಕ್ಸ್‌ಪ್ರೆಸ್‌ವೇಯ ಮಥುರಾ ಬಳಿಯ ಟೋಲ್ ಬೂತ್‌ನಲ್ಲಿ ಅವರ ದೇಹವು ಅವರ ಕಾರಿನ ಅಡಿಯಲ್ಲಿ ಸಿಲುಕಿಕೊಂಡಿದ್ದು ಈ ಬಗ್ಗೆ ಭದ್ರತಾ ಸಿಬ್ಬಂದಿಯ ಗಮನಿಸಿದ್ದಾರೆ, ನಂತರ ಫಾಲೋ ಮಾಡಿ ವಶ ಪಡೆದಿದ್ದಾರೆ.
ಬಂಧಿತ ವ್ಯಕ್ತಿ ಸೋಮವಾರ ರಾತ್ರಿ ದಟ್ಟವಾದ ಮಂಜಿನಿಂದ ತನ್ನ ಕಾರಿನ ಅಡಿಯಲ್ಲಿ ಶವದ ಇರುವ ಬಗ್ಗೆ ತಿಳಿದಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾನೆ ಎಂದು ವರದಿಯಾಗಿದೆ. ಕಳೆದ ರಾತ್ರಿ ಎಕ್ಸ್‌ಪ್ರೆಸ್‌ವೇಯಲ್ಲಿ ದಟ್ಟವಾದ ಮಂಜು ಇತ್ತು, ಆ ಕಾರಣದಿಂದ ರಸ್ತೆ ಕಾಣುತ್ತಿರಲಿಲ್ಲ ಇದರಿಂದಾಗಿ ಅಪಘಾತಕ್ಕೆ ಒಳಗಾದ ವ್ಯಕ್ತಿ ಕಾರಿಗೆ ಕೆಳಗೆ ಸಿಲುಕಿಕೊಂಡಿದ್ದಾನೆ ಎಂದು ಬಂಧಿತ ವ್ಯಕ್ತಿ ವೀರೇಂದ್ರ ಸಿಂಗ್ ಹೇಳಿದ್ದಾನೆ ಎಂದು ಪೊಲೀಸ್ ಅಧೀಕ್ಷಕ ಟ್ರಿಗನ್ ಬಿಸೆನ್ ಹೇಳಿದರು.
ಇದನ್ನೂ ಓದಿ:Hit And Run : ಮಹಿಳಾ ಆಯೋಗದ ಅಧ್ಯಕ್ಷರಿಗೇ ಹೀಗಾದರೆ ಸಾಮಾನ್ಯ ಹೆಣ್ಣುಮಕ್ಕಳ ಗತಿ ಏನು?
ಈ ಬಗ್ಗೆ ಪೊಲೀಸರು ಸಿಂಗ್ ಅವರನ್ನು ಪ್ರಶ್ನಿಸುತ್ತಿದ್ದಾರೆ ಆ ಯುವತಿ ನಿಮ್ಮ ಕಾರಿನಲ್ಲಿ ಹೇಗೆ ಬಂದ್ರು, ಹೇಗೆ ಸತ್ತಿದ್ದಾರೆ ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಪ್ರಕರಣದ ಬಗ್ಗೆ ಭದ್ರತಾ ಕ್ಯಾಮೆರಾಗಳನ್ನು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಜನವರಿ 1ರ ಮುಂಜಾನೆ, 20 ವರ್ಷದ ಅಂಜಲಿ ಸಿಂಗ್ ದೆಹಲಿಯಲ್ಲಿ ಸ್ಕೂಟರ್ ಓಡಿಸುತ್ತಿದ್ದಾಗ, ಆಕೆಯನ್ನು 13 ಕಿ.ಮೀ ಎಳೆಯಲಾಯಿತು. ಈ ಘಟನೆಯ ನಂತರ ಆ ರಾತ್ರಿ ಕಾರಿನಲ್ಲಿದ್ದ ಐವರು ಸೇರಿದಂತೆ ಏಳು ಮಂದಿಯನ್ನು ಬಂಧಿಸಲಾಯಿತು, ಇದು ಭಾರೀ ಚರ್ಚೆಗೆ ಕಾರಣವಾಗಿತ್ತು
Published On - 2:59 pm, Tue, 7 February 23