ಮೋದಿ ನಮ್ಮನ್ನು ಭಯೋತ್ಪಾದಕರು ಎಂದು ಕರೆಯುತ್ತಾರೆ, ಅಮಿತ್ ಶಾ ಪತ್ರ ಬರೆಯುತ್ತಾರೆ: ಮಲ್ಲಿಕಾರ್ಜುನ ಖರ್ಗೆ

|

Updated on: Jul 26, 2023 | 2:07 PM

ಪ್ರಧಾನಿ ಮೋದಿಯವರು ನಮ್ಮನ್ನು ಭಯೋತ್ಪಾದಕ ಸಂಘಟನೆಗೆ ಹೋಲಿಸಿದ ದಿನವೇ, ಗೃಹ ಸಚಿವರು ವಿರೋಧ ಪಕ್ಷಗಳಿಂದ ಸಹಕಾರ ಕೋರಿ ಪತ್ರ ಬರೆದಿದ್ದಾರೆ. ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ವರ್ಷಗಳಿಂದಲೂ ಅಂತರವಿತ್ತು. ಆದರೆ ಈಗ ನಾವು ಸರ್ಕಾರದಲ್ಲಿಯೂ ಅಂತರವನ್ನು ನೋಡುತ್ತಿದ್ದೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಮೋದಿ ನಮ್ಮನ್ನು ಭಯೋತ್ಪಾದಕರು ಎಂದು ಕರೆಯುತ್ತಾರೆ, ಅಮಿತ್ ಶಾ ಪತ್ರ ಬರೆಯುತ್ತಾರೆ: ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
Follow us on

ದೆಹಲಿ ಜುಲೈ 26: ಮಣಿಪುರ (Manipur) ಸಮಸ್ಯೆಯ ಬಗ್ಗೆ ಚರ್ಚಿಸಲು ಸಂಸತ್​​ನಲ್ಲಿ ಕಾಂಗ್ರೆಸ್ ಮತ್ತು ಎಲ್ಲಾ ಪಕ್ಷಗಳ ಸಹಕಾರವನ್ನು ಕೋರಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah), ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರಿಗೆ ಮಂಗಳವಾರ ಪತ್ರ ಬರೆದಿದ್ದರು. ಇದಕ್ಕೆ ಬುಧವಾರ ಉತ್ತರಿಸಿದ ಖರ್ಗೆ, “ಪ್ರಧಾನಿ ಮೋದಿಯವರು ನಮ್ಮನ್ನು ಭಯೋತ್ಪಾದಕ ಸಂಘಟನೆಗೆ ಹೋಲಿಸಿದ ದಿನವೇ, ಗೃಹ ಸಚಿವರು ವಿರೋಧ ಪಕ್ಷಗಳಿಂದ ಸಹಕಾರ ಕೋರಿ ಪತ್ರ ಬರೆದಿದ್ದಾರೆ. ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ವರ್ಷಗಳಿಂದಲೂ ಅಂತರವಿತ್ತು, ಆದರೆ ಈಗ ನಾವು ಸರ್ಕಾರದಲ್ಲಿಯೂ ಅಂತರವನ್ನು ನೋಡುತ್ತಿದ್ದೇವೆ. ಪ್ರಧಾನಿ ಮೋದಿ ಅವರು ಇಂಡಿಯಾ ದಿಕ್ಕಿಲ್ಲದ್ದು ಎಂದು ಕರೆದಿರುವುದು ದುರದೃಷ್ಟಕರ ಎಂದಿದ್ದಾರೆ.

ಮಣಿಪುರದ ಕುರಿತು ಸರ್ಕಾರದಿಂದ ಹೇಳಿಕೆ ನೀಡುವಂತೆ ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಕೇವಲ ಹೇಳಿಕೆಯಲ್ಲ, ಪೂರ್ಣ ಪ್ರಮಾಣದ ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ. ಆದರೆ ಇದಕ್ಕೆ ಎಲ್ಲ ಪಕ್ಷಗಳ ಸಹಕಾರ ಬೇಕು. ನಿಮ್ಮ ಮೂಲಕ ನಾನು ಎಲ್ಲಾ ವಿರೋಧ ಪಕ್ಷಗಳಿಗೆ ಮನವಿ ಮಾಡುತ್ತೇನೆ, ದಯವಿಟ್ಟು ಒಳ್ಳೆಯ ವಾತಾವರಣದಲ್ಲಿ ಚರ್ಚೆಗೆ ಬನ್ನಿ ಎಂದು ಅಮಿತ್ ಶಾ ಪತ್ರದಲ್ಲಿ ಬರೆದಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಮತ್ತು ಅಧೀರ್ ರಂಜನ್ ಚೌಧರಿ ಅವರಿಗೆ ಪ್ರತ್ಯೇಕ ಪತ್ರ ಬರೆದಿರುವ ಗೃಹ ಸಚಿವರು, ಮಣಿಪುರ  ಅತ್ಯಂತ ಪ್ರಮುಖ ಗಡಿ ರಾಜ್ಯವಾಗಿದೆ. ಅದರ ಶ್ರೀಮಂತ ಸಾಂಸ್ಕೃತಿಕ ಪರಂಪರೆಯು ಮಣಿಪುರ ಮಾತ್ರವಲ್ಲದೆ ಇಡೀ ಭಾರತದ ಸಂಸ್ಕೃತಿಯ ‘ರತ್ನ’ವಾಗಿದೆ. ಮಣಿಪುರದಲ್ಲಿ ಕಳೆದ ಆರು ವರ್ಷಗಳ ಬಿಜೆಪಿ ಆಡಳಿತದಲ್ಲಿ, ಪ್ರದೇಶವು ಶಾಂತಿ ಮತ್ತು ಅಭಿವೃದ್ಧಿಯ ಹೊಸ ಯುಗವನ್ನು ಅನುಭವಿಸುತ್ತಿದೆ. ಆದರೆ ಕೆಲವು ನ್ಯಾಯಾಲಯದ ತೀರ್ಪುಗಳು ಮತ್ತು ಕೆಲವು ಘಟನೆಗಳಿಂದಾಗಿ, ಮೇ ತಿಂಗಳ ಆರಂಭದಲ್ಲಿ ಮಣಿಪುರದಲ್ಲಿ ಹಿಂಸಾಚಾರದ ಘಟನೆಗಳು ನಡೆದವು.


ಕೆಲವು ನಾಚಿಕೆಗೇಡಿನ ಘಟನೆಗಳು ಸಹ ನಡೆಯಿತು. ಅದರ ನಂತರ ಇಡೀ ದೇಶದ ಜನರು, ಈಶಾನ್ಯದ ಜನರು ಮತ್ತು ವಿಶೇಷವಾಗಿ ಮಣಿಪುರದ ಜನರು, ಸಂಸತ್ ರಾಜಕೀಯ ಪಕ್ಷಗಳನ್ನು ಮೀರಿ ಈ ಕಷ್ಟದ ಸಮಯದಲ್ಲಿ ಮಣಿಪುರದ ಜನರೊಂದಿಗೆ ನಿಲ್ಲುತ್ತಾರೆ ಎಂದು ನಿರೀಕ್ಷಿಸುತ್ತಿದ್ದಾರೆ ಎಂದು ಶಾ ಪತ್ರದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಮಣಿಪುರ ಸಮಸ್ಯೆ ಕುರಿತು ಚರ್ಚೆಗೆ ಸಿದ್ಧ: ವಿಪಕ್ಷಗಳ ಸಹಕಾರ ಕೋರಿ ಮಲ್ಲಿಕಾರ್ಜುನ ಖರ್ಗೆಗೆ ಪತ್ರ ಬರೆದ ಅಮಿತ್ ಶಾ

ನಿಮ್ಮ ಪತ್ರದ ಮನೋಭಾವಕ್ಕೆ ವಿರುದ್ಧವಾದ ಸರ್ಕಾರದ ಧೋರಣೆಯು ಸಂಸತ್ತಿನಲ್ಲಿ ಸಂವೇದನಾರಹಿತ ಮತ್ತು ನಿರಂಕುಶವಾಗಿದೆ. ಈ ಧೋರಣೆ ಹೊಸದೇನಲ್ಲ, ಬದಲಿಗೆ ಹಿಂದಿನ ಅಧಿವೇಶನಗಳಲ್ಲಿ ಇಂಥದ್ದನ್ನು ಪ್ರತಿಪಕ್ಷಗಳು ಕಂಡಿವೆ ಎಂದು ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ