ಮಣಿಪುರ ಸಮಸ್ಯೆ ಕುರಿತು ಚರ್ಚೆಗೆ ಸಿದ್ಧ: ವಿಪಕ್ಷಗಳ ಸಹಕಾರ ಕೋರಿ ಮಲ್ಲಿಕಾರ್ಜುನ ಖರ್ಗೆಗೆ ಪತ್ರ ಬರೆದ ಅಮಿತ್ ಶಾ

ಮಣಿಪುರದ ಸಮಸ್ಯೆಯನ್ನು ಚರ್ಚಿಸಲು ಸರ್ಕಾರ ಸಿದ್ಧವಾಗಿದೆ. ಎಲ್ಲಾ ಪಕ್ಷಗಳ ಸಹಕಾರವನ್ನು ನಾವು ಬಯಸುತ್ತದೆ. ಈ ಪ್ರಮುಖ ಸಮಸ್ಯೆಯನ್ನು ಪರಿಹರಿಸುವಲ್ಲಿ ಎಲ್ಲಾ ಪಕ್ಷಗಳು ಸಹಕರಿಸುತ್ತವೆ ಎಂದು ನಾನು ಭಾವಿಸುತ್ತೇನೆ ಎಂದು ಅಮಿತ್ ಶಾ ಹೇಳಿದ್ದಾರೆ.

ಮಣಿಪುರ ಸಮಸ್ಯೆ ಕುರಿತು ಚರ್ಚೆಗೆ ಸಿದ್ಧ: ವಿಪಕ್ಷಗಳ ಸಹಕಾರ ಕೋರಿ ಮಲ್ಲಿಕಾರ್ಜುನ ಖರ್ಗೆಗೆ ಪತ್ರ ಬರೆದ ಅಮಿತ್ ಶಾ
ಅಮಿತ್ ಶಾ
Follow us
|

Updated on:Jul 25, 2023 | 9:04 PM

ದೆಹಲಿ ಜುಲೈ 25: ಸಂಸತ್ತಿನಲ್ಲಿ ಸತತ ನಾಲ್ಕನೇ ದಿನವೂ ಕಲಾಪಕ್ಕೆ ಅಡ್ಡಿಯಾದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಮಂಗಳವಾರ ಉಭಯ ಸದನಗಳ ವಿರೋಧ ಪಕ್ಷದ ನಾಯಕರಿಗೆ ಪತ್ರ ಬರೆದು ಮಣಿಪುರ ವಿಷಯದ (Manipur) ಚರ್ಚೆಗೆ ಸಹಕರಿಸುವಂತೆ ಕೋರಿದ್ದಾರೆ. ಪತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಶಾ, ಮಣಿಪುರದ ಸಮಸ್ಯೆಯನ್ನು ಚರ್ಚಿಸಲು ಸರ್ಕಾರ ಸಿದ್ಧವಾಗಿದೆ. ಎಲ್ಲಾ ಪಕ್ಷಗಳ ಸಹಕಾರವನ್ನು ನಾವು ಬಯಸುತ್ತದೆ. ಈ ಪ್ರಮುಖ ಸಮಸ್ಯೆಯನ್ನು ಪರಿಹರಿಸುವಲ್ಲಿ ಎಲ್ಲಾ ಪಕ್ಷಗಳು ಸಹಕರಿಸುತ್ತವೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮತ್ತು ಅಧೀರ್ ರಂಜನ್ ಚೌಧರಿ ಅವರಿಗೆ ಪ್ರತ್ಯೇಕ ಪತ್ರ ಬರೆದಿರುವ ಗೃಹ ಸಚಿವರು, ಮಣಿಪುರ  ಅತ್ಯಂತ ಪ್ರಮುಖ ಗಡಿ ರಾಜ್ಯವಾಗಿದೆ. ಅದರ ಶ್ರೀಮಂತ ಸಾಂಸ್ಕೃತಿಕ ಪರಂಪರೆಯು ಮಣಿಪುರ ಮಾತ್ರವಲ್ಲದೆ ಇಡೀ ಭಾರತದ ಸಂಸ್ಕೃತಿಯ ‘ರತ್ನ’ವಾಗಿದೆ.

ಮಣಿಪುರದಲ್ಲಿ ಕಳೆದ ಆರು ವರ್ಷಗಳ ಬಿಜೆಪಿ ಆಡಳಿತದಲ್ಲಿ, ಪ್ರದೇಶವು ಶಾಂತಿ ಮತ್ತು ಅಭಿವೃದ್ಧಿಯ ಹೊಸ ಯುಗವನ್ನು ಅನುಭವಿಸುತ್ತಿದೆ. ಆದರೆ ಕೆಲವು ನ್ಯಾಯಾಲಯದ ತೀರ್ಪುಗಳು ಮತ್ತು ಕೆಲವು ಘಟನೆಗಳಿಂದಾಗಿ, ಮೇ ತಿಂಗಳ ಆರಂಭದಲ್ಲಿ ಮಣಿಪುರದಲ್ಲಿ ಹಿಂಸಾಚಾರದ ಘಟನೆಗಳು ನಡೆದವು. ಮಣಿಪುರ ಉಚ್ಚ ನ್ಯಾಯಾಲಯದ ಆದೇಶವು ಬಹುಸಂಖ್ಯಾತ ಮೈತಿಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂಬುದನ್ನು ಉಲ್ಲೇಖಿಸಿ ಸಚಿವರು ಪತ್ರ ಬರೆದಿದ್ದಾರೆ.

ಕೆಲವು ನಾಚಿಕೆಗೇಡಿನ ಘಟನೆಗಳು ಸಹ ನಡೆಯಿತು. ಅದರ ನಂತರ ಇಡೀ ದೇಶದ ಜನರು, ಈಶಾನ್ಯದ ಜನರು ಮತ್ತು ವಿಶೇಷವಾಗಿ ಮಣಿಪುರದ ಜನರು, ಸಂಸತ್ ರಾಜಕೀಯ ಪಕ್ಷಗಳನ್ನು ಮೀರಿ ಈ ಕಷ್ಟದ ಸಮಯದಲ್ಲಿ ಮಣಿಪುರದ ಜನರೊಂದಿಗೆ ನಿಲ್ಲುತ್ತಾರೆ ಎಂದು ನಿರೀಕ್ಷಿಸುತ್ತಿದ್ದಾರೆ ಎಂದು ಶಾ ಹೇಳಿದ್ದಾರೆ.

ಇದನ್ನೂ ಓದಿ: NDAs 25th Anniversary: ಎನ್​ಡಿಎ 25ನೇ ವಾರ್ಷಿಕೋತ್ಸವ ಆಚರಣೆಗೆ ಪ್ರಧಾನಿ ಮೋದಿ ಕರೆ; ಪ್ರಲ್ಹಾದ್ ಜೋಶಿ

ಉಭಯ ಸದನಗಳಲ್ಲಿ ಚರ್ಚೆಯ ನಂತರ ಮಣಿಪುರದ ಕುರಿತು ಹೇಳಿಕೆ ನೀಡಲು ಸರ್ಕಾರ ಸಿದ್ಧವಾಗಿದೆ.ಆದರೆ ಇದರಲ್ಲಿ ಎಲ್ಲಾ ಪಕ್ಷಗಳ ಸಹಕಾರವನ್ನು ನಿರೀಕ್ಷಿಸಲಾಗಿದೆ. ಸಂಸತ್ತಿನ ನಿರಂತರ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಬೆಂಬಲವನ್ನು ನೀಡುವಂತೆ ನಾನು ಮತ್ತು ನಿಮ್ಮ ಪಕ್ಷದ ಎಲ್ಲಾ ಸದಸ್ಯರನ್ನು ನಾನು ಒತ್ತಾಯಿಸುತ್ತೇನೆ ಎಂದು ಅವರು ಹೇಳಿದರು.

ಆದರೆ, ಮಣಿಪುರ ವಿಷಯದ ಕುರಿತು ಚರ್ಚೆ ನಡೆಸುವ ಮೊದಲು ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು ಹೇಳಿಕೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ.

ಅವಿಶ್ವಾಸ ನಿರ್ಣಯ ಮಂಡನೆಗೆ ವಿಪಕ್ಷ ನಿರ್ಧಾರ

ಮಣಿಪುರ ವಿವಾದದ ನಡುವೆಯೇ ನಾಳೆ ಸಂಸತ್ತಿನಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ವಿರೋಧ ಪಕ್ಷಗಳು ನಿರ್ಧರಿಸಿವೆ. ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದ್ದು, ಅದನ್ನು ನಾಳೆ ಸಲ್ಲಿಸಲಾಗುವುದು ಎಂದು ಮೂಲಗಳು ತಿಳಿಸಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ.

ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:04 pm, Tue, 25 July 23