ನಿದ್ದೆ ಮಂಪರಿನಲ್ಲಿದ್ದ ಬಾಲಕ ಬಲೂನು ಊದುತ್ತಿರುವಾಗ.. ಸಂಭವಿಸಿತು ಅನಾಹುತ

| Updated By: ಸಾಧು ಶ್ರೀನಾಥ್​

Updated on: Dec 03, 2020 | 12:00 PM

ಬಲೂನು ಹಿಡಿದು ಆಡುತ್ತಿರುವಾಗ ಉಸಿರುಗಟ್ಟಿ 4 ವರ್ಷದ ಬಾಲಕ ದೇವರಾಜ್ ಸೂರಜ್ ಭಾನುವಾರ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಅಂಧೇರಿಯಲ್ಲಿ ನಡೆದಿದೆ.

ನಿದ್ದೆ ಮಂಪರಿನಲ್ಲಿದ್ದ ಬಾಲಕ ಬಲೂನು ಊದುತ್ತಿರುವಾಗ.. ಸಂಭವಿಸಿತು ಅನಾಹುತ
ಸಾಂದರ್ಭಿಕ ಚಿತ್ರ
Follow us on

ಮುಂಬೈ: ಬಲೂನು ಹಿಡಿದು ಆಡುತ್ತಿರುವಾಗ ಉಸಿರುಗಟ್ಟಿ 4 ವರ್ಷದ ಬಾಲಕ ದೇವರಾಜ್ ಸೂರಜ್ ಭಾನುವಾರ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಅಂಧೇರಿಯಲ್ಲಿ ನಡೆದಿದೆ. ಬಾಲಕ ತನ್ನ ಅಕ್ಕನ ಜೊತೆ ಆಟವಾಡುತ್ತಿದ್ದ. ನಿದ್ದೆಯ ಮಂಪರಿನಲ್ಲಿದ್ದ ಬಾಲಕ ಬಲೂನು ಊದುತ್ತಿರುವಾಗ ಧ್ವನಿ ಪೆಟ್ಟಿಗೆಗೆ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.

ರಾತ್ರಿ 11 ಗಂಟೆಗೆ ಈ ಘಟನೆ ಸಂಭವಿಸಿದೆ. ಬಾಲಕ ದೇವರಾಜ್ ಸೂರಜ್ ಬಲೂನು ಊದಿ ಸ್ಪೋಟಗೊಳಿಸಲು ಪ್ರಯತ್ನಿಸುತ್ತಿದ್ದ. ಬಲೂನು ಧ್ವನಿ ಪೆಟ್ಟಿಗೆಯಲ್ಲಿ ಸಿಲುಕಿಕೊಂಡು ಉಸಿರಾಟ ಸಮಸ್ಯೆ ಉಂಟಾಯಿತು ಎಂದು ದೇವರಾಜ್​ ಮನೆಯವರು ಪೊಲೀಸರಿಗೆ ತಿಳಿಸಿದ್ದಾರೆ.

ಹುಡುಗ ಕೆಮ್ಮಲು ಆರಂಭಿಸಿದಾಗ ತಂದೆ ಸೂರಜ್ ನಾಗ್ ಮತ್ತು ಚಿಕ್ಕಪ್ಪ ರಾಜಾರಾಮ್ ಬಲೂನು ತೆಗೆಯಲು ಪ್ರಯತ್ನಿಸಿದರು. ಆದರೂ ಬಾಲಕನ ಗಂಟಲಿನಿಂದ ಬಲೂನು ಹೊರತೆಗೆಯಲು ಕಷ್ಟವಾಗಿದೆ. ತಕ್ಷಣವೇ, ಆಸ್ಪತ್ರೆ ಕರೆದೊಯ್ದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ದೇವರಾಜ್ ಸಾವನ್ನಪ್ಪಿದ್ದಾನೆ. ಬಾಲಕನ ಶವವನ್ನು ಶವಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ನೀರು ಕುಡಿಯಲು ನದಿಗೆ ಇಳಿದಿದ್ದ ಬಾಲಕ ಮೊಸಳೆ ಪಾಲು..

ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಕಾರು, ಆಡುತ್ತಾ ಕುಳಿತಿದ್ದ 6 ವರ್ಷದ ಬಾಲಕ ಸಾವು

Published On - 11:57 am, Thu, 3 December 20