ಪ್ರೀತಿ, ವಾತ್ಸಲ್ಯಕ್ಕೆ ಮತ್ತೊಂದು ಹೆಸರೇ ತಾಯಿ. ತಾಯಿ ಯಾವಾತ್ತಿಗೂ ತಾನು 9 ತಿಂಗಳು ಹೊತ್ತು ಹೆತ್ತ ಕೂಸಿಗೆ ಸದಾ ರಕ್ಷಣೆಯ ನೆರಳಾಗಿರುತ್ತಾಳೆ. ಆದರೆ ಇಲ್ಲೊಬ್ಬಳು ಮಹಾ ತಾಯಿ ತಾನು ಹೆತ್ತ ಮಗುವನ್ನು ಮೂರು ಲಕ್ಷಕ್ಕೆ ಮಾರಾಟ ಮಾಡಿದ್ದಾಳೆ. ಮಾರಾಟ ಮಾಡಿದ ಕೆಲವೇ ದಿನಗಳಲ್ಲಿ ಸುದ್ದಿ ಹರಿದಾಡಿದ್ದು, ಇದೀಗಾ ಕರುಳಬಳ್ಳಿಯನ್ನೇ ಮಾರಾಟ ಮಾಡಿದ ತಪ್ಪಿಗೆ ಜೈಲು ಸೇರಿದ್ದಾಳೆ.
ಕೇರಳದ ರಾಜಧಾನಿ ತಿರುವನಂತಪುರದ ಕಂಜಿರಂಕುಲಂನ 36 ವರ್ಷದ ಮಹಿಳೆ ನವಜಾತ ಶಿಶುವನ್ನು 3 ಲಕ್ಷ ರೂ.ಗೆ ಮಾರಾಟ ಮಾಡಿದ ಆರೋಪದ ಮೇಲೆ ಆಕೆಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಏಪ್ರಿಲ್ 21 ರಂದು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಯಿಂದ ತಂಪನೂರು ಪೊಲೀಸರಿಗೆ ನವಜಾತ ಶಿಶುವಿನ ಮಾರಾಟದ ಬಗ್ಗೆ ಮಾಹಿತಿ ನೀಡಲಾಗಿದೆ, ಇದಾದ ಕೆಲವೇ ಘಂಟೆಯಲ್ಲಿ ಮಹಿಳೆಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಕೇರಳದ ಬೋಟ್ ದುರಂತ ಕಾಡುತ್ತದೆ, ಅದನ್ನು ಮರೆಯಬಾರದು: ಹೈಕೋರ್ಟ್
ಪೊಲೀಸರ ಪ್ರಕಾರ, ಏಪ್ರಿಲ್ ಮೊದಲ ವಾರದಲ್ಲಿ ಮಗು ಜನಿಸಿದೆ. ಜನಿಸಿದ ನಾಲ್ಕು ದಿನಗಳ ನಂತರ ಮಹಿಳೆ ತನ್ನ ಮಗುವನ್ನು ಸಮೀಪದ ನಗರದಲ್ಲಿ ವಾಸಿಸುವ ದಂಪತಿಗೆ 3 ಲಕ್ಷ ರೂ.ಗೆ ಮಾರಾಟ ಮಾಡಿದ್ದಾಳೆ. ಭಾನುವಾರ ಆಕೆಯನ್ನು ಬಂಧಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:12 pm, Tue, 9 May 23