Relationship: ಸಂಬಂಧವನ್ನು ಉಳಿಸಿಕೊಳ್ಳಲು ಸತ್ಯಕ್ಕಿಂತ ಸುಳ್ಳಿನ ಅಗತ್ಯವಿದೆಯೇ?
ಸಂಬಂಧ(Relationship)ಗಳನ್ನು ಉಳಿಸಿಕೊಳ್ಳಲು ಸುಳ್ಳಿನ ಅಗತ್ಯವಿದೆಯೇ, ಸತ್ಯದಿಂದ ಸಂಬಂಧ ಉಳಿಯದೇ? ಎನ್ನುವ ಪ್ರಶ್ನೆ ಸಾಕಷ್ಟು ಮಂದಿಯನ್ನು ಕಾಡಿರುತ್ತದೆ.
ಸಂಬಂಧ(Relationship)ಗಳನ್ನು ಉಳಿಸಿಕೊಳ್ಳಲು ಸುಳ್ಳಿನ ಅಗತ್ಯವಿದೆಯೇ, ಸತ್ಯದಿಂದ ಸಂಬಂಧ ಉಳಿಯದೇ? ಎನ್ನುವ ಪ್ರಶ್ನೆ ಸಾಕಷ್ಟು ಮಂದಿಯನ್ನು ಕಾಡಿರುತ್ತದೆ. ಪ್ರತಿಯೊಂದು ಸಂಬಂಧಗಳು ನಂಬಿಕೆಯ ಮೇಲೆ ನಿಂತಿರುತ್ತದೆ, ಆ ನಂಬಿಕೆಯನ್ನು ಉಳಿಸಿಕೊಳ್ಳಲು ಹಲವು ಬಾರಿ ನಾವು ಸುಳ್ಳು ಹೇಳಿರುತ್ತೇವೆ, ಆದರೆ ಸತ್ಯಕ್ಕಿಂತ ಸುಳ್ಳೇ ಹೆಚ್ಚಾದಾಗ ಸುಳ್ಳಿನ ಕಟ್ಟೆಯೊಡೆದಾಗ ಸಂಬಂಧದಲ್ಲೂ ಬಿರುಕು ಮೂಡುವುದಂತೂ ಸತ್ಯ. ಯಾವುದೇ ಸಂಬಂಧಕ್ಕೆ ಸತ್ಯವೇ ಆಧಾರ.
ಪ್ರತಿಯೊಬ್ಬ ವ್ಯಕ್ತಿಯು ತನ್ನ ಸಂಗಾತಿ ತನ್ನಿಂದ ಏನನ್ನೂ ಮುಚ್ಚಿಡಬಾರದು ಮತ್ತು ಸತ್ಯವನ್ನು ಹೇಳಬೇಕೆಂದು ಬಯಸುತ್ತಾರೆ. ಸಂಗಾತಿಯ ಭಾವನೆಗಳಿಗೆ ಧಕ್ಕೆಯಾಗದಂತೆ ಹೆಚ್ಚಿನ ಜನರು ದಿನನಿತ್ಯದ ಸುಳ್ಳುಗಳನ್ನು ಹೇಳುತ್ತಾರೆ ಎಂಬುದು ವೈಜ್ಞಾನಿಕ ಸಂಶೋಧನೆಯಲ್ಲಿ ಬಹಿರಂಗವಾಗಿದೆ.
ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಅಧ್ಯಯನವು ಹೆಚ್ಚಿನ ಜನರು ತಮ್ಮ ಸಂಬಂಧವನ್ನು ಗಟ್ಟಿಯಾಗಿ ಮತ್ತು ಸಂತೋಷವಾಗಿಡಲು ಸಾಮಾನ್ಯವಾಗಿ ಸುಳ್ಳು ಹೇಳುತ್ತಾರೆ ಎಂದು ಹೇಳುತ್ತದೆ.
ಮತ್ತಷ್ಟು ಓದಿ: Relationship Tips: ಯುವ ಪೀಳಿಗೆ ದೀರ್ಘಕಾಲ ಸಂಬಂಧದಲ್ಲಿ ಆಸಕ್ತಿ ಇಲ್ಲ, ತಜ್ಞರ ಅಭಿಪ್ರಾಯ ಇಲ್ಲಿದೆ
ಹಸಿ ಸುಳ್ಳು ಕೆಲವೊಮ್ಮೆ ಕಣ್ಣೆದುರು ನಡೆಯುತ್ತಿರುವುದರ ಬಗ್ಗೆಯೇ ಸುಳ್ಳು ಹೇಳುವುದು ಕಥೆ ಕಟ್ಟುವುದು ಮಾಡಿದರೆ ಅದು ಸುಳ್ಳು ಎಂದು ಯಾರಿಗಾದರೂ ತಿಳಿಯುತ್ತದೆ. ಇದು ಸಂಗಾತಿಯ ಭವಿಷ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಹೆಚ್ಚಿನ ಜನರು ಸಂಬಂಧವನ್ನು ಬಲಪಡಿಸಲು ಈ 3 ಸುಳ್ಳುಗಳನ್ನು ಹೇಳುತ್ತಾರೆ
1) ನಿಮ್ಮ ಇಷ್ಟಗಳ ಬಗ್ಗೆ ಸುಳ್ಳು ಮದುವೆಗೂ ಮುನ್ನ ಸಂಗಾತಿಯ ಇಷ್ಟವೇ ನಿಮ್ಮ ಇಷ್ಟವಾಗಿರುತ್ತದೆ, ಎಲ್ಲವನ್ನೂ ಒಪ್ಪಿಕೊಳ್ಳುವ ಮನಸ್ಸಿರುತ್ತದೆ, ಆದರೆ ಮದುವೆಯ ಬಳಿಕ ಆ ಇಷ್ಟ ಬದಲಾಗುತ್ತದೆ, ಆಗ ಸಂಗಾತಿಗೆ ನೋವುಂಟಾಗಬಹುದು, ಹೀಗಾಗಿ ಮೊದಲೇ ನಿಮ್ಮ ಇಷ್ಟವೇನಿದೆ, ಯಾವುದು ಇಷ್ಟವಾಗುವುದಿಲ್ಲ ಎಮಬುದನ್ನು ನೇರವಾಗಿಯೇ ಹೇಳಿ.
2) ಈ ಉಡುಗೆ ನಿಮ್ಮ ಅಂದವನ್ನು ಮತ್ತಷ್ಟು ಹೆಚ್ಚಿಸಲಿದೆ ಪ್ರತಿಯೊಬ್ಬರೂ ತಮ್ಮ ಸಂಗಾತಿಗೆ ಉಡುಗೆ ಖರೀದಿಸಲು ಬಯಸುತ್ತಾರೆ, ಆದರೆ ನಿಮ್ಮ ಸಂಗಾತಿ ಇಷ್ಟಪಡುವ ಉಡುಗೆಯನ್ನು ನೀವು ಇಷ್ಟಪಡುವ ಅಗತ್ಯವಿಲ್ಲ, ಆದರೆ ಉಡುಗೆ ಧರಿಸಿದ ನಂತರ ಸಂಗಾತಿಗೆ ಚೆನ್ನಾಗಿದೆ ಎನ್ನುವ ಒಂದು ಪ್ರಶಂಸೆ ನೀಡಿದರೆ ಸಾಕು.
3) ಆಹಾರದ ರುಚಿ ಅದ್ಭುತ ನೀವು ಮತ್ತು ನಿಮ್ಮ ಸಂಗಾತಿ ದೈನಂದಿನ ಕೆಲಸದಿಂದ ಸುಸ್ತಾಗುತ್ತೀರಿ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸಂಗಾತಿ ನಿಮಗಾಗಿ ನಿಮ್ಮ ನೆಚ್ಚಿನ ಪದಾರ್ಥವನ್ನು ಸಿದ್ಧಪಡಿಸುತ್ತಾರೆ. ತಿಂದ ಬಳಿಕ ತುಂಬಾ ಚೆನ್ನಾಗಿದೆ ಎಂದು ಹೇಳಿದರೆ ಸಾಕು ನಿಮ್ಮ ಸಂಗಾತಿಯ ಖುಷಿಗೆ ಪಾರವೇ ಇರುವುದಿಲ್ಲ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ