Relationship: ನಿಮ್ಮ ದಾಂಪತ್ಯ ಸಂಬಂಧದಲ್ಲಿ ಈ ಕಷ್ಟ ಎದುರಾಗಬಹುದು? ಇದಕ್ಕೆ ಕಾರಣ ಇಲ್ಲಿದೆ
ಸಂಗಾತಿಗಳಿಬ್ಬರು ತಮ್ಮ ಸಂಬಂಧವನ್ನು ಕೊನೆಗೊಳಿಸುವುದರಿಂದ ಹಿಡಿದು ಪರಸ್ಪರ ಸಂಬಂಧದ ಹಂತಗಳನ್ನು ರೂಪಿಸಿಕೊಳ್ಳುವವರೆಗೆ ಉಂಟಾಗಬಹುದಾದ ಕೆಲವು ಕಷ್ಟಕರ ವಿಷಯಗಳ ಬಗ್ಗೆ ಮಾಹಿತಿ ಇಲ್ಲಿದೆ.
ಸಂಬಂಧಗಳನ್ನು ಉಳಿಸಿಕೊಳ್ಳುವುದು ಮತ್ತು ಅದನ್ನು ಸರಿಪಡಿಸಿಕೊಳ್ಳುವುದು ಕಷ್ಟ ನಿಜ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಸಂಬಂಧವು ಜೀವನದ ಅಗಾಧವಾದ ಮೂಲವಾಗಿದೆ. ಏಕೆಂದರೆ ಅವು ನಮ್ಮನ್ನು ಭಾವನಾತ್ಮಕವಾಗಿ ಬೆಂಬಲಿಸುತ್ತವೆ. ಮತ್ತು ಸಂಗಾತಿಗಳು ನಮ್ಮ ಪ್ರತಿಯೊಂದು ಕಾರ್ಯದಲ್ಲೂ ಮೆಚ್ಚುಗೆಯನ್ನು ಮತ್ತು ಬೆಂಬಲವನ್ನು ಸೂಚಿಸುತ್ತಾರೆ. ಕೆಲವೊಮ್ಮೆ ಸಂಬಂಧವನ್ನು ಸಮತೋಲನದಲ್ಲಿಡಲು ಮತ್ತು ಸರಿಯಾಗಿ ನಿರ್ವಹಿಸಲು ಕಷ್ಟಕರವಾಗಬಹುದು. ಸಂಬಂಧಗಳು ಸಂಕೀರ್ಣವಾಗಿರುವುದರಿಂದ ಕೆಲವು ಸಂಬಂಧಗಳು ಕಾಲಾನಂತರದಲ್ಲಿ ದುರ್ಬಲವಾಗುತ್ತದೆ ಮತ್ತು ಸಂಬಂಧವು ಮುರಿದು ಸಂಗಾತಿಗಳಿಬ್ಬರು ದೂರವಾಗಬಹುದು. ಜೀವನದ ಒತ್ತಡಗಳು, ಕೆಲಸದ ಒತ್ತಡಗಳು, ಹಣಕಾಸಿನ ತೊಂದರೆಗಳು ಇಂತಹ ವಿಷಯಗಳು ಆರೋಗ್ಯಕರ ಸಂಬಂಧದಲ್ಲಿ ಸವಾಲುಗಳನ್ನು ಒಡ್ಡಬಹುದು. ಥೆರಪಿಸ್ಟ್ ಮರಿಯಾ ಜಿ. ಸೋಸಾ ಅವರು ಸಂಬಂಧದಲ್ಲಿನ ಕೆಲವು ಕಷ್ಟಕರವಾದ ವಿಷಯಗಳ ಬಗ್ಗೆ ತಿಳಿಸಿದ್ದಾರೆ.
ಸಂಬಂಧದಲ್ಲಿ ಎದುರಾಗುವ ಕಷ್ಟಕರ ವಿಷಯಗಳು:
ದೂರ ಸರಿಯುವುದು: ಸಂಬಂಧದಲ್ಲಿ ಎದುರಾಗುವ ಅತ್ಯಂತ ಕಷ್ಟಕರ ವಿಷಯವೆಂದರೆ ಸಂಗಾತಿಗಳಿಬ್ಬರು ಪರಸ್ಪರ ದೂರವಾಗುವುದು. ನಾವು ಅವರನ್ನು ಪ್ರೀತಿಸುತ್ತಿದ್ದರೂ, ಅವರು ನಮಗೆ ಸರಿಯಾಗ ಸಂಗಾತಿಯಾಗದಿರಬಹುದು ಎಂದು ಲೆಕ್ಕಾಚಾರ ಮಾಡಿ ಸಂಬಂಧವನ್ನು ಕೊನೆಗೊಳಿಸುವುದು, ಅತ್ಯಂತ ಕಠಿಣಕರ ಸಂದರ್ಭವಾಗಿರುತ್ತದೆ.
ಚುಚ್ಚು ಮಾತುಗಳು: ಸಂಗಾತಿಗಳಿಬ್ಬರ ಕೆಲವು ಕಠಿಣ ಸಂಭಾಷಣೆಗಳು, ಸಂಬಂಧದ ಅನಿವಾರ್ಯ ಅಂತ್ಯಕ್ಕೆ ಕಾರಣವಾಗಬಹುದು. ಅಂತಹ ಸಂಭಾಷಣೆಗಳು ಮನಸ್ಸಿಗೆ ಆಳವಾದ ನೋವನ್ನುಂಟುಮಾಡುತ್ತವೆ.
ಮಾನದಂಡಗಳು: ಸಂಬಂಧವನ್ನು ಉಳಿಸಿಕೊಳ್ಳುವ ಸಲುವಾಗಿ, ನಾವು ನಮ್ಮ ಮಾನದಂಡಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಈ ಮೂಲಕ ನಮಗೆ ನಾವು ದ್ರೋಹವನ್ನು ಬಗೆದಿದ್ದೇವೆ ಎಂದು ಅಂದುಕೊಂಡಾಗ ಅದು ಮನಸ್ಸಿಗೆ ನೋವನ್ನು ಉಂಟುಮಾಡುತ್ತದೆ.
ನಿರ್ಲಕ್ಷ್ಯದ ಭಾವನೆ: ಸಂಗಾತಿಯು ನನ್ನ ಬಗ್ಗೆ ನಿರ್ಲಕ್ಷ್ಯ ತೊರುತ್ತಿದ್ದಾನೆ ಎನ್ನುವ ಭಾವನೆ, ತುಂಬಾ ನೋವನ್ನುಂಟು ಮಾಡುತ್ತದೆ. ಇದು ಕೂಡಾ ಸಂಬಂಧದಲ್ಲಿ ಎದುರಾಗುವ ಕಷ್ಟಕರ ವಿಷಯಗಳಲ್ಲಿ ಒಂದಾಗಿದೆ.
ಸಮಯ ನೀಡದಿರುವುದು: ಸಂಗಾತಿಯು ನಮಗಾಗಿ ಸಮಯವನ್ನು ಮೀಸಲಿಡುತ್ತಿಲ್ಲ, ನಮ್ಮ ಜೊತೆ ಸಮಯವನ್ನು ಕಳೆಯುತ್ತಿಲ್ಲ ಎನ್ನುವ ವಿಚಾರ ಸಂಬಂಧದಲ್ಲಿ ಅತ್ಯಂತ ಕಷ್ಟಕರವಾದ ವಿಷಯಗಳಲ್ಲಿ ಒಂದಾಗಿದೆ. ಪ್ರತಿಯೊಬ್ಬರು ಸಂಗಾತಿಯೊಂದಿಗೆ ಸಮಯವನ್ನು ಕಳೆಯಬೇಕೆಂದು ಬಯಸುತ್ತಾರೆ, ಆದರೆ ಅದು ಸಾಧ್ಯವಾಗದಿದ್ದಾಗ ಮನಸ್ಸು ಮುರಿದುಹೋಗುತ್ತದೆ.
ನಿಯಂತ್ರಣ: ನಮಗಾಗಿ ಮತ್ತು ನಮ್ಮ ಒಳಿತಿಗಾಗಿ ನಾವು ರೂಪಿಸಿಕೊಳ್ಳುವ ನಿಯಂತ್ರಣ ಕೆಲವೊಮ್ಮೆ ಸಂಬಂಧದ ದಿಕ್ಕನ್ನೇ ಬದಲಿಸಬಹುದು.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ