Relationship Tips: ಯುವ ಪೀಳಿಗೆ ದೀರ್ಘಕಾಲ ಸಂಬಂಧದಲ್ಲಿ ಆಸಕ್ತಿ ಇಲ್ಲ, ತಜ್ಞರ ಅಭಿಪ್ರಾಯ ಇಲ್ಲಿದೆ
ಇಂದಿನ ಯುವಪೀಳಿಗೆ ಸಂಬಂಧಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿರುವುದಿಲ್ಲ. ವಿಶೇಷವಾಗಿ ದೀರ್ಘಕಾಲದ ಸಂಬಂಧದ ಬಗ್ಗೆ ನಂಬಿಕೆಯಿಡುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.
ಇಂದು ಸಾಕಷ್ಟು ಡೇಟಿಂಗ್ ಆಪ್(Dating app) ಗಳು ಲಭ್ಯವಿದ್ದು , ನೀವು ಸುಲಭವಾಗಿ ನಿಮ್ಮ ಇಷ್ಟಕ್ಕೆ ತಕ್ಕಂತೆ ಸಂಗಾತಿಗಳನ್ನು ಭೇಟಿಯಾಗಬಹುದಾಗಿದೆ. ಇದರಿಂದಾಗಿ ಸಾಕಷ್ಟು ಯುವ ಪೀಳಿಗೆಯು ನಿಜವಾದ ದೀರ್ಘಕಾಲದ ಸಂಬಂಧದ ಬಗ್ಗೆ ಆಸಕ್ತಿ ಹಾಗು ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದು ತಜ್ಞರು ಹೇಳುತ್ತಾರೆ. ಇಂದಿನ ಯುವಪೀಳಿಗೆ ಸಂಬಂಧಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿರುವುದಿಲ್ಲ. ವಿಶೇಷವಾಗಿ ದೀರ್ಘಕಾಲದ ಸಂಬಂಧದ ಬಗ್ಗೆ ನಂಬಿಕೆಯಿಡುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.
ಡೇಟಿಂಗ್ ಎಂಬುದು ಸಾಮಾನ್ಯ ದಿನಚರಿಗಳಲ್ಲಿ ಒಂದಾಗಿದೆ. ಇಲ್ಲಿ ಪ್ರಾರಂಭದಲ್ಲಿ ನೀವು ನಿಮ್ಮ ಸಂಗಾತಿಯೊಂದಿಗೆ ದೈಹಿಕ ಒಡನಾಟಕ್ಕಿಂತ, ಭಾವನಾತ್ಮಕವಾಗಿ ಹೆಚ್ಚಿನ ಒಡನಾಟವನ್ನು ಹೊಂದುವುದು ಅತ್ಯಂತ ಅಗತ್ಯ. ಇಂದಿನ ಯುವ ಪೀಳಿಗೆ ಭಾವನಾತ್ಮಕ ಸಂಪರ್ಕದ ಕೊರತೆಯನ್ನು ಅನುಭವಿಸುತ್ತಿದ್ದಾರೆ ಎಂದು ಸಂಬಂಧ ಸಲಹೆಗಾರ ಡಾ. ಸಿಮ್ರಾನ್ ಕಥುರಿಯಾ ಹೇಳಿದ್ದಾರೆ.
ಇಂದಿನ ಮಹಿಳೆಯರು ಸ್ವಾವಲಂಬಿಯಾಗಿದ್ದು, ಸಬಲರಾಗಿದ್ದಾರೆ ಮತ್ತು ನಿರಂತರವಾಗಿ ಯಶಸ್ಸಿನ ಗುರಿಯನ್ನು ಮತ್ತು ಸಾಧನೆಗಳ ಕಡೆ ಗಮನಹರಿಸುವುದರಿಂದ ಅವರು ತಮ್ಮ ಸಾಧನೆಗೆ ಸಹಾಯ ಮಾಡುವಂತಹ ಯಾವಾಗಲೂ ಬೆಂಬಲವಾಗಿ ನಿಲ್ಲುವ ಪುರುಷನನ್ನು ಪ್ರೀತಿಸುತ್ತಾರೆ ಎಂದು ಹೇಳುತ್ತಾರೆ. ಕಣ್ಣುಗಳು ಆತ್ಮದ ಕಿಟಕಿಯಾಗಿದೆ. ಕಣ್ಣುಗಳು ಪದಗಳಿಗಿಂತ ಹೆಚ್ಚಿನ ಭಾವನೆಗಳನ್ನು ವ್ಯಕ್ತಪಡಿಸಬಲ್ಲದು.
ಇದನ್ನು ಓದಿ: ನಿಮ್ಮ ಸಂಗಾತಿಯ ಬಳಿ ಕ್ಷಮೆ ಕೇಳುವಾಗ, ಈ ತಪ್ಪುಗಳನ್ನು ಮಾಡಬೇಡಿ
ಇಂದಿನ ಯುವಪೀಳಿಗೆ ಸಂಬಂಧವನ್ನು ದೀರ್ಘಕಾಲದ ವರೆಗೆ ಉಳಿಸಲು ಬಯಸುತ್ತಾರೆ. ಜೊತೆಗೆ ಇಬ್ಬರ ನಡುವೆ ಪರಸ್ವರ ಪ್ರೀತಿ ಕಾಳಜಿ ಮತ್ತು ಜವಬ್ದಾರಿಗಳು ಇದ್ದಾಗ ಸಂಬಂಧವನ್ನು ದೀರ್ಘಕಾಲದ ವರೆಗೆ ಕೊಂಡು ಹೋಗಲು ಸಾಧ್ಯ ಎಂದು ಸಲಹೆ ನೀಡುತ್ತಾರೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: