ಟಿಂಡರ್ ಡೇಟಿಂಗ್ ಆಪ್ ಬಳಸಿ ಯುವತಿಯರ ಜತೆ ಗೆಳೆತನ; ಖಾಸಗಿ ವಿಡಿಯೋ ಸೆರೆ ಹಿಡಿದು ಹಣಕ್ಕೆ ಬೇಡಿಕೆ ಇಡುತಿದ್ದ ಆರೋಪಿ ಬಂಧನ

ಫೆಬ್ರವರಿ ಒಂದರಂದು ಕೊಡಿಹಳ್ಳಿಯಲ್ಲಿ ಇದೇ ಮಾದರಿ ಕೃತ್ಯ ಎಸಗಿದ್ದ ಬಗ್ಗೆ ಯುವತಿಯೊರ್ವಳು ಕೊಡೊಗೆಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಯುವತಿ ದೂರಿನ ಅನ್ವಯ ಕಾರ್ಯಚರಣೆ ನಡೆಸಿ ಹೆಚ್. ಎಸ್. ಆರ್. ಲೇಔಟ್​ನ್ಲಲಿ ಆರೋಪಿ ಅಭಿಷೇಕ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಟಿಂಡರ್ ಡೇಟಿಂಗ್ ಆಪ್ ಬಳಸಿ ಯುವತಿಯರ ಜತೆ ಗೆಳೆತನ; ಖಾಸಗಿ ವಿಡಿಯೋ ಸೆರೆ ಹಿಡಿದು ಹಣಕ್ಕೆ ಬೇಡಿಕೆ ಇಡುತಿದ್ದ ಆರೋಪಿ ಬಂಧನ
ಅಭಿಷೇಕ್ ಅಲಿಯಾಸ್ ಸುಶಾಂತ್ ಜೈನ್ ಬಂಧಿತ ಅರೋಪಿ
Follow us
TV9 Web
| Updated By: preethi shettigar

Updated on:Feb 04, 2022 | 9:47 AM

ಬೆಂಗಳೂರು: ಟಿಂಡರ್ ಡೇಟಿಂಗ್ ಆಪ್​ನಲ್ಲಿ(Tinder Dating app) ಗೆಳೆತನ ಮಾಡಿಕೊಂಡು ಯುವತಿಯರ ಜೊತೆ ವಿಕೃತ ಮೆರೆದಿದ್ದ ಆರೋಪಿಯನ್ನು ಪೊಲೀಸರು(Karnataka police) ಬಂಧಿಸಿದ ಘಟನೆ ಬೆಂಗಳೂರಿನ ಹೆಚ್​. ಎಸ್. ಆರ್. ಲೇಔಟ್​ನಲ್ಲಿ ನಡೆದಿದೆ. ಅಭಿಷೇಕ್ ಅಲಿಯಾಸ್ ಸುಶಾಂತ್ ಜೈನ್ ಬಂಧಿತ ಅರೋಪಿ. ಟಿಂಡರ್ ಡೇಟಿಂಗ್ ಆಪ್​ನಲ್ಲಿ ಯುವತಿಯರ ಪರಿಚಯ ಮಾಡಿಕೊಳ್ಳುತ್ತಿದ್ದ ಆರೋಪಿ, ಬಳಿಕ ಭೇಟಿ ಮಾಡಿ ಸ್ನೇಹ(Friendship) ಬೆಳೆಸುತಿದ್ದ. ಹಲವು ಬಾರಿ ಯುವತಿಯರ ಮನೆಗೆ ಯಾರು ಇಲ್ಲದ ವೇಳೆ ಭೇಟಿ ನೀಡಿ ಮತ್ತಷ್ಟು ಹತ್ತಿರವಾಗಲು ಪ್ರಯತ್ನಿಸುತ್ತಿದ್ದ.

ಬಳಿಕ ಯುವತಿಯರ ಜೊತೆ ರೊಮ್ಯಾಂಟಿಕ್ ಆಗಿ ವರ್ತನೆ ಮಾಡುತ್ತಿದ್ದು, ಖಾಸಗಿ ಸಮಯ ಕಳೆಯುವಂತೆ ಬಲವಂತವಾಗಿ ಬಟ್ಟೆಗಳನ್ನು ಬಿಚ್ಚಿಸುತಿದ್ದ. ಬಳಿಕ ಯುವತಿಯರ ಅನುಮತಿ ಇಲ್ಲದೆ ಅವರ ಖಾಸಗಿ ಫೋಟೋ ವಿಡಿಯೋ ತೆಗೆದುಕೊಳ್ಳುತಿದ್ದ. ನಂತರ ವಾಪಸ್ಸು ಬಂದ ಬಳಿಕ ಪೋನ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ. ಫೆಬ್ರವರಿ ಒಂದರಂದು ಕೊಡಿಹಳ್ಳಿಯಲ್ಲಿ ಇದೇ ಮಾದರಿ ಕೃತ್ಯ ಎಸಗಿದ್ದ ಬಗ್ಗೆ ಯುವತಿಯೊರ್ವಳು ಕೊಡೊಗೆಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.

ಯುವತಿ ದೂರಿನ ಅನ್ವಯ ಕಾರ್ಯಚರಣೆ ನಡೆಸಿ ಹೆಚ್. ಎಸ್. ಆರ್. ಲೇಔಟ್​ನ್ಲಲಿ ಆರೋಪಿ ಅಭಿಷೇಕ್​ನನ್ನು ಪೊಲೀಸರು ಬಂಧಿಸಿದ್ದಾರೆ.

ತುಮಕೂರು: ದಾರಿಹೋಕರನ್ನು ದೋಚಲು ಹೊಂಚು; ಮಾರಕಾಸ್ತ್ರಗಳ ಸಮೇತ ನಾಲ್ವರು ದರೋಡೆಕೊರರ ಬಂಧನ

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಮಾದೇನಹಳ್ಳಿ ತಾಂಡಾ ಬಳಿಯ ಅರಣ್ಯ ಪ್ರದೇಶದಲ್ಲಿ ಮಾರಕಾಸ್ತ್ರಗಳ ಸಮೇತ ನಾಲ್ವರು ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಐವರು ಆರೋಪಿಗಳು ಪರಾರಿಯಾಗಿದ್ದಾರೆ. ದಾರಿಹೋಕರನ್ನು ದೋಚಲು ಕಾರದ ಪುಡಿ, ಮಚ್ಚು ಹಿಡಿದು ಹೊಂಚು ಹಾಕಿದ್ದ ವೇಳೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ತುಮಕೂರು: ದಾನ ಕೇಳುವ ನೆಪದಲ್ಲಿ ಮಾಂಗಲ್ಯ ಸರ ಕಳ್ಳತನ

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊನ್ನೇಗೌಡನಪಾಳ್ಯದಲ್ಲಿ ದಾನ ಕೇಳುವ ನೆಪದಲ್ಲಿ ಪಾರ್ವತಿ ಎಂಬುವವರ ಬಳಿ ಬಂದು ಮಾಂಗಲ್ಯ ಸರ ಕಳ್ಳತನ ಮಾಡಿದ್ದಾನೆ. ಈ ವೇಳೆ 4 ಸಾವಿರ ರೂಪಾಯಿ ಕೂಡ ದೋಚಿ ಕಳ್ಳ ಪರಾರಿಯಾಗಿದ್ದಾನೆ. ಗ್ರಾಮದ ಪಾರ್ವತಿ ಮನೆಯಲ್ಲಿ ಒಬ್ಬರೇ ಇದ್ದಾಗ ವೃದ್ದಾಶ್ರಮಕ್ಕಾಗಿ ದಾನ ಕೇಳುವ ನೆಪದಲ್ಲಿ ಕಳ್ಳ ಆಗಮಿಸಿದ್ದಾನೆ. ಈ ವೇಳೆ ಹಣ ಇಲ್ಲ ರಾಗಿ ಇದೆ ಕೊಡುವುದಾಗಿ ತಿಳಿಸಿದಾಗ ಕಳ್ಳ ನಿರಾಕರಿಸಿದ್ದಾನೆ. ನಂತರ ಗ್ರಾಮದ ಹಲವರು ಹಣ ನೀಡಿದ್ದಾರೆಂದು ಪುಸ್ತಕ ತೋರಿಸುವ ನೆಪದಲ್ಲಿ ದುಷ್ಕರ್ಮಿ ಕತ್ತಿನಲ್ಲಿದ್ದ ಚಿನ್ನದ ಸರ ಮತ್ತು 4 ಸಾವಿರ ಹಣ ದೋಚಿ ಪರಾರಿಯಾಗಿದ್ದಾನೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ನೆಲಮಂಗಲದ ಮಾರುತಿನಗರದಲ್ಲಿ ಮನೆ ಬೀಗ ಒಡೆದು 3 ಲಕ್ಷ ನಗದು, ಚಿನ್ನಾಭರಣ ಕಳ್ಳತನ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಮಾರುತಿನಗರದಲ್ಲಿ ಗೀತಮ್ಮ ಎಂಬುವವರ ಮನೆ ಬೀಗ ಒಡೆದು 3 ಲಕ್ಷ ನಗದು, ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ಮನೆ ಕಳವಿಗೂ ಮುಂಚೆ ಕಳ್ಳರ ಚಲನವಲನ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಕಳವು ವೇಳೆ ಮನೆ ವಸ್ತುಗಳಿಗೆ ಹಾನಿ ಮಾಡಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:

ಬೆಂಗಳೂರು: ಖಾಸಗಿ ವಿಡಿಯೋ ಸೆರೆ ಹಿಡಿದು ಬೆದರಿಕೆ; ಯುವತಿ ಮೇಲೆ ದೌರ್ಜನ್ಯವೆಸಗಿದ ಐವರ ಬಂಧನ

Crime Update: ವ್ಯಕ್ತಿ ಗಮನ ಬೇರೆಡೆ ಸೆಳೆದು ಕಳ್ಳತನ, ನಕಲಿ ಬಂಗಾರದ ನಾಣ್ಯ ನೀಡಿ ವಂಚನೆ, ಹನಿಟ್ರ್ಯಾಪ್ ಆರೋಪಿಗಳ ಬಂಧನ

Published On - 9:32 am, Fri, 4 February 22

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ