ಹಿಜಾಬ್ ವಿವಾದವನ್ನು ಬಿಜೆಪಿಗರು ದೊಡ್ಡದು ಮಾಡಿಸ್ತಿದ್ದಾರೆ: ಮಾಜಿ ಸಿಎಂ ಸಿದ್ದರಾಮಯ್ಯ

ಸಂಘಪರಿವಾರದ ಪ್ರಯೋಗಾಲಯವೇ ಕರಾವಳಿ. ಸರ್ಕಾರ ಇದಕ್ಕೆಲ್ಲ ಕುಮ್ಮಕ್ಕು ನೀಡಬಾರದು. ಶಿಕ್ಷಣದಲ್ಲಿ ರಾಜಕೀಯ ಬೆರಸಬಾರದು ಎಂದು ಹಿಜಾಬ್ ವಿವಾದದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಹಿಜಾಬ್ ವಿವಾದವನ್ನು ಬಿಜೆಪಿಗರು ದೊಡ್ಡದು ಮಾಡಿಸ್ತಿದ್ದಾರೆ: ಮಾಜಿ ಸಿಎಂ ಸಿದ್ದರಾಮಯ್ಯ
ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯ
Follow us
TV9 Web
| Updated By: preethi shettigar

Updated on:Feb 04, 2022 | 12:40 PM

ಬೆಂಗಳೂರು: ಸಮವಸ್ತ್ರ ಕಡ್ಡಾಯ ಮಾಡಬೇಕು ಎಂದು ಎಲ್ಲೂ ಹೇಳಿಲ್ಲ. ಇದು ಸಂವಿಧಾನದಲ್ಲಿ ನೀಡಿರುವ ಮೂಲಭೂತ ಹಕ್ಕಾಗಿದೆ. ವೈಯಕ್ತಿಕವಾಗಿ ಹೇಳಬೇಕಾದರೆ ಇದು ಮಕ್ಕಳ ಮೂಲಭೂತ ಹಕ್ಕು. ಇನ್ನು ಈ ವಿವಾದಕ್ಕೆ ಸಂಬಂಧಪಟ್ಟಂತೆ ಕುಂದಾಪುರದ ಸರ್ಕಾರಿ ಕಾಲೇಜಿನ (Government college) ಪ್ರಾಂಶುಪಾಲರು ಗೇಟ್​ ಬಂದ್​ ಮಾಡಿದ್ದು, ಸಂವಿಧಾನ ವಿರೋಧ. ಮಕ್ಕಳ ವಿದ್ಯಾಭ್ಯಾಸವನ್ನು ತಡೆಗಟ್ಟುವ ಪ್ರಯತ್ನ ನಡೆಯುತ್ತಿದೆ. ಹಿಜಾಬ್(Hijab) ವಿವಾದವನ್ನು ಬಿಜೆಪಿಗರು(BJP) ದೊಡ್ಡದು ಮಾಡಿಸ್ತಿದ್ದಾರೆ. ಸಂಘಪರಿವಾರದ ಪ್ರಯೋಗಾಲಯವೇ ಕರಾವಳಿ. ಸರ್ಕಾರ ಇದಕ್ಕೆಲ್ಲ ಕುಮ್ಮಕ್ಕು ನೀಡಬಾರದು. ಈ ಪ್ರಾಂಶುಪಾಲರನ್ನು ಮೊದಲು ತೆಗೆಯಬೇಕು. ಶಿಕ್ಷಣದಲ್ಲಿ ರಾಜಕೀಯ ಬೆರಸಬಾರದು ಎಂದು ಹಿಜಾಬ್ ವಿವಾದದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ನದಿ ಜೋಡಣೆ ವಿಚಾರವಾಗಿ ಸರ್ಕಾರ ಮಾಹಿತಿ ನೀಡಬೇಕು: ವಿಪಕ್ಷ ನಾಯಕ ಸಿದ್ದರಾಮಯ್ಯ

ಒಕ್ಕೂಟ ವ್ಯವಸ್ಥೆಯಲ್ಲಿ ನಾವು ಯಾರ ಗುಲಾಮರೂ ಅಲ್ಲ. ರಾಜ್ಯ ಸರ್ಕಾರದ ಮೇಲೆ ಕೇಂದ್ರ ಸವಾರಿ ಮಾಡುತ್ತಿದೆ. ಕೃಷಿ ಕಾಯ್ದೆ ಸೇರಿದಂತೆ ಅನೇಕ ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಕೇಂದ್ರ ತಲೆ ಹಾಕುತ್ತಿದೆ. ರಾಜ್ಯ ಸರ್ಕಾರ ನದಿ ಜೋಡಣೆ ವಿಚಾರವಾಗಿ ಮಾಹಿತಿ ನೀಡಬೇಕು. ನದಿ ಜೋಡಣೆ ವಿಚಾರ ಏಕಮುಖ ನಿರ್ಧಾರ ಮಾಡಬಾರದು. ಈಶ್ವರಪ್ಪ ಹಾಗೂ ಅಶೋಕ್ ಮಾತನಾಡಿದ್ದು ಬಿಟ್ಟರೆ ಮತ್ತೇನು ಮಾಡಿಲ್ಲ. ಹೀಗಾಗಿ ಸರ್ಕಾರ ಈ ವಿಚಾರವಾಗಿ ಮಾಹಿತಿ ನೀಡಬೇಕು ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬಳಿ ಮಾತನಾಡಿದ ಅವರು, ಗಂಗಾ ಕಾವೇರಿ ನದಿ ಜೋಡಣೆ ಏಕೆ ನಿಲ್ಲಿಸಿದರು. ಅದರಿಂದ ಹೆಚ್ಚು ಲಾಭ ಇತ್ತು. ಆರ್ಥರ್ ಕಾರ್ಟನ್ ಎಂಬ ಇಂಜಿನಿಯರ್ ಹಿಮಾಲಯದ ನದಿ ದಕ್ಷಿಣಕ್ಕೆ ತಿರುಗಿಸಬೇಕು ಎಂದು 19 ನೇ ಶತಮಾನದಲ್ಲೇ ಹೇಳಿದ್ದರು. ಈ ಹಿಂದೆ ಕೆ. ಎಲ್. ರಾವ್ ಎಂಬ ನೀರಾವರಿ ಸಚಿವ ಇದನ್ನು ಪ್ರಸ್ತಾಪ ಮಾಡಿದ್ದರು ಮತ್ತೆ ಏಕೆ ಇದನ್ನು ನಿಲ್ಲಿಸಿದ್ದರು ಎಂದು ಹೇಳಿದ್ದಾರೆ.

ಬಜೆಟ್​ನಲ್ಲಿ ದಕ್ಷಿಣದ ನದಿಗಳ ಜೋಡಣೆ ಬಗ್ಗೆ ಪ್ರಸ್ತಾಪ

ನದಿಗಳ ಜೋಡಣೆ ಕಾರ್ಯಸಾಧುವಾದ ಯೋಜನೆ ಅಲ್ಲ. ಸಚಿವೆ ನಿರ್ಮಲಾ ಸೀತಾರಾಮನ್ ತಮಿಳುನಾಡಿನವರು.‌ ಅದಕ್ಕಾಗಿ ತಮಿಳುನಾಡಿಗೆ ಈ ಯೋಜನೆ‌ ಕೊಟ್ಟಿದ್ದಾರೆ. ನದಿಗಳ ಜೋಡಣೆಯಿಂದ ಹೆಚ್ಚು ನೀರು ಸಿಗುವುದಿಲ್ಲ. ಯಾವ ಯಾವ ನದಿಗಳಿಂದ ಹೆಚ್ಚು ನೀರು ಸಿಗುತ್ತದೆ.  ಈ ಬಗ್ಗೆ ರಾಜ್ಯದವರ ಜೊತೆಗೆ ಚರ್ಚೆ ಮಾಡಿಲ್ಲ. ಇದರಿಂದ ಜಲವಿವಾದ ಶುರುವಾಗುತ್ತದೆ. ‌ಹೀಗಾಗಿ ದಕ್ಷಿಣ ಭಾರತದ ರಾಜ್ಯಗಳ ಸಭೆ ಕರೆಯಬೇಕು ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಬಳಿಕ ಮಾತನಾಡಿದ ಅವರು, ನಿರ್ಮಲಾ ಸೀತಾರಾಮನ್ ಬಜೆಟ್​ನಲ್ಲಿ ದಕ್ಷಿಣದ ನದಿಗಳ ಜೊಡಣೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಸುಮಾರು 46 ಸಾವಿರ ಕೋಟಿ ಯೋಜನೆಗೆ ಮೀಸಲಿಟ್ಟಿದ್ದೇವೆ ಎಂದಿದ್ದಾರೆ. ಇದು ಕಾರ್ಯಗತವಾಗುಂತ ಯೋಜನೆಯಲ್ಲ. ಈ ಬಗ್ಗೆ ನಮ್ಮ ರಾಜ್ಯದ ಜೊತೆ ಚರ್ಚೆ ಮಾಡಿಲ್ಲ ಅನಿಸುತ್ತದೆ. ನ್ಯಾಷನಲ್ ವಾಟರ್ ಡೆವಲಪ್ ಮೆಂಟ್ ಏಜನ್ಸಿಯಲ್ಲಿ ಒಂದು ಸಭೆ ನಡೆದಿದೆ. ಅಲ್ಲಿ ಬಹುಷಃ ನದಿ ಜೋಡಣೆ ಬಗ್ಗೆ ಚರ್ಚೆಯಾಗಿದೆ. 347 ಟಿಎಂಸಿ ನೀರನ್ನು ಬಳಸಿಕೊಳ್ಳಬೇಕು ಎಂದು ಚರ್ಚೆಯಾಗಿದೆ. ದೇಶದಲ್ಲಿ ರಾಜಸ್ತಾನ ರಾಜ್ಯದ ಬಳಿಕ ಹೆಚ್ಚು ಒಣ ಭೂಮಿ ಹೊಂದಿರುವ ರಾಜ್ಯ ಕರ್ನಾಟಕ. ಶೇ 70 ರಷ್ಟು ಒಣ ಭೂಮಿ ನಮ್ಮ ರಾಜ್ಯದಲ್ಲಿದೆ. ಆಂಧ್ರ ಪ್ರದೇಶ, ತಮಿಳುನಾಡಿನಲ್ಲಿ ಶೇ. 50 ಕ್ಕಿಂತ ಹೆಚ್ವು ನೀರಾವರಿಯಾಗಿದೆ. ಕರ್ನಾಟಕದಲ್ಲಿ ಕೇವಲ ಶೇ 30 ರಷ್ಟು ಮಾತ್ರ ನೀರಾವರಿಯಾಗಿದೆ ಎಂದು ತಿಳಿಸಿದ್ದಾರೆ.

ಈ ಯೋಜನೆ ಬದಲು ಮೇಕೆದಾಟು ಯೋಜನೆ ಏಕೆ ಜಾರಿ ಮಾಡಬಾರದು: ಸಿದ್ದರಾಮಯ್ಯ

ನಮ್ಮ ಪಾದಯಾತ್ರೆ ನಿಲ್ಲಿಸುತ್ತಾರೆ. ಅದಕ್ಕೆ ಬೇಕಾಗಿರುವುದು ಪರಿಸರ ಇಲಾಖೆ ನಿರಪೇಕ್ಷಣ ಪತ್ರ ಅಷ್ಟೇ. ಅದಕ್ಕೆ ಏಕೆ ಆಸಕ್ತಿ ತೋರುತ್ತಿಲ್ಲ. ನದಿ ಜೋಡಣೆ ಯೋಜನೆ ಬದಲು ಮೇಕೆದಾಟು ಯೋಜನೆ ಏಕೆ ಜಾರಿ ಮಾಡಬಾರದು? ಕೇಂದ್ರ ಸರ್ಕಾರ ಕರ್ನಾಟಕದ ವಿರುದ್ಧ ಪಕ್ಷಪಾತ ತೋರುತ್ತಿದೆ. ಈ ಯೋಜನೆಯಿಂದ ಕರ್ನಾಟಕಕ್ಕೆ ಎಷ್ಟು ನೀರು ಸಿಗುತ್ತದೆ ಎಂದು ಗೊತ್ತಾ? ಬಜೆಟ್​ನಲ್ಲಿ ಘೋಷಣೆ​ ಮಾಡುವುದು ಸುಳ್ಳಾ? ಬಜೆಟ್​ನಲ್ಲಿ ಘೋಷಣೆ ಮಾಡುವುದು ಜಾರಿ ಮಾಡಲು. ನನ್ನ ಪ್ರಕಾರ ತಮಿಳುನಾಡಿಗೆ ನೀರು ಹೆಚ್ಚಾಗಿ ಸಿಗುತ್ತದೆ. ರಾಜಕೀಯ ಉದ್ದೇಶ ಇದಿಯೋ ಇಲ್ವೋ ಗೊತ್ತಿಲ್ಲ. ಆದರೆ ನಿರ್ಮಾಲ ಸೀತಾರಾಮನ್ ತಮಿಳುನಾಡಿನವರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಹಿಜಾಬ್ ವಿವಾದದ ಬಗ್ಗೆ ಸಿದ್ದರಾಮಯ್ಯ ಹೇಳಿಕೆಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರತಿಕ್ರಿಯೆ

ಅನೇಕ ವರ್ಷಗಳಿಗೆ ರಾಜಕೀಯದಲ್ಲಿದ್ದವರು, ಸಿಎಂ ಆಗಿದ್ದವರು ಜನರ ಓಟ್ ​ಗೋಸ್ಕರ ಜನರನ್ನು ಮಿಸ್​ಗೈಡ್ ಮಾಡ್ತಿದ್ದಾರೆ. ಅವರ ಕಾಲದಲ್ಲೇ ಈ ನಿಯಮ ಮಾಡಿರುವವರು ಈಗ ಹೀಗೆ ಮಾತನಾಡಬಾರದು. ಆಡಳಿತ ಮಂಡಳಿ ಒಪ್ಪಿದರೆ ಮಾತ್ರ ಸಮವಸ್ತ್ರ. ರಾಜಕೀಯ ಕ್ಷೇತ್ರ ಹಾಳುಮಾಡಿಯಾಗಿದೆ. ಶಿಕ್ಷಣ ಕ್ಷೇತ್ರವನ್ನು ನೀವು ಹಾಳು ಮಾಡಬೇಡಿ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸಿದ್ದರಾಮಯ್ಯನವರಿಗೆ ನಾಚಿಕೆಯಾಗಬೇಕು. ಶಾಲೆ ಸೂಚಿಸಿದ ಸಮವಸ್ತ್ರ ಧರಿಸುತ್ತೇವೆ ಎಂದು ಬರೆದುಕೊಟ್ಟಿದ್ದಾರೆ. 95 ಮಕ್ಕಳ ಪೈಕಿ 6 ಮಕ್ಕಳು ಹಿಜಾಬ್ ಧರಿಸಿದ್ದಾರೆ. ಒಬ್ಬ ಲಾಯರ್ ಆಗಿ ರೂಲ್ ಬುಕ್ ಓದಿ. ನಾವೇಲ್ಲರೂ ಒಂದೇ ಎನ್ನಲು ಅವಕಾಶ ಮಾಡಿಕೊಡಿ. ಸಮವಸ್ತ್ರ ಧರಿಸಿಯೇ ಬರಬೇಕೆಂದು ಸರ್ಕಾರದ ನಿರ್ಣಯ. ಹಿಜಾಬ್ ವಿವಾದದ ಬಗ್ಗೆ ಪಿತೂರಿಗಳು ಇರಬಹುದು. ವಿದೇಶದ 8 ದೇಶಗಳಲ್ಲಿ ಹಿಜಾಬ್​ನನ್ನ ನಿಷೇಧಿಸಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಾಗ್ಧಾಳಿ ನಡೆಸಿದ್ದಾರೆ.

ಶಾಲಾ ಮಕ್ಕಳು ಹಿಜಾಬ್‌ ಧರಿಸುವುದಕ್ಕೆ ವಿರೋಧ ಸರಿಯಲ್ಲ: ಶಾಸಕ ಜಮೀರ್ ಅಹಮದ್‌ ಖಾನ್

ಶಾಲಾ ಮಕ್ಕಳು ಹಿಜಾಬ್‌ ಧರಿಸುವುದು ಧಾರ್ಮಿಕ ಹಕ್ಕಾಗಿದೆ. ಈ ಹಿಂದಿನಿಂದಲೂ ಹಿಜಾಬ್ ಧರಿಸಿ ಶಾಲೆಗೆ ಹೋಗುತ್ತಿದ್ದರು. ಆದರೆ ಕೆಲ ದಿನಗಳಿಂದ ಮಾತ್ರ ಕೇಸರಿ ಶಾಲು ಹಾಕಿ ಶಾಲೆಗೆ ಬರುತ್ತಿದ್ದಾರೆ. ಹಿಜಾಬ್‌ ಧರಿಸಿ ಶಾಲೆಗೆ ಬರದಂತೆ ಪ್ರಾಂಶುಪಾಲರು ಗೇಟ್ ಹಾಕಿದ್ದು ಸರಿಯಲ್ಲ. ಮಕ್ಕಳನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇದು ಸರಿಯಲ್ಲ. ಹಿಜಾಬ್‌ ವಿವಾದದ ಹಿಂದೆ ರಾಜ್ಯ ಸರ್ಕಾರ ಇದೆ ಅನಿಸುತ್ತದೆ. ದೇಶ ಯಾವ ಮಟ್ಟಕ್ಕೆ ಇಳಿಯುತ್ತಿದೆ? ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ರೀತಿ ಮಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಶಾಸಕ ಜಮೀರ್ ಅಹಮದ್‌ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:

ಜಿ ಎಸ್ ಟಿ ಅಂದರೇನು ಅಂತ ಜೆಡಿ(ಎಸ್) ನಾಯಕ ರಮೇಶ್ ಗೌಡ ಹೇಳುವವರೆಗೆ ಸಿದ್ದರಾಮಯ್ಯ ಬಿಡಲಿಲ್ಲ!

ಫೆಬ್ರವರಿ 8 ರಿಂದ ಗೋವಾದಲ್ಲಿ ಚುನಾವಣಾ ಪ್ರಚಾರ ಮಾಡಲಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ

Published On - 11:14 am, Fri, 4 February 22