AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿ ಎಸ್ ಟಿ ಅಂದರೇನು ಅಂತ ಜೆಡಿ(ಎಸ್) ನಾಯಕ ರಮೇಶ್ ಗೌಡ ಹೇಳುವವರೆಗೆ ಸಿದ್ದರಾಮಯ್ಯ ಬಿಡಲಿಲ್ಲ!

ಜಿ ಎಸ್ ಟಿ ಅಂದರೇನು ಅಂತ ಜೆಡಿ(ಎಸ್) ನಾಯಕ ರಮೇಶ್ ಗೌಡ ಹೇಳುವವರೆಗೆ ಸಿದ್ದರಾಮಯ್ಯ ಬಿಡಲಿಲ್ಲ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 03, 2022 | 4:04 PM

ಸಿದ್ದರಾಮಯ್ಯನವರು ತಮಗೆ ಪ್ರಶ್ನೆ ಕೇಳಿದ ರಮೇಶ್​ ಅವರಿಗೆ ಜಿ ಎಸ್ ಟಿ ಅಂದರೇನು ಅಂತ ಮರುಪ್ರಶ್ನಿಸಿದ್ದಾರೆ. ಜೆಡಿ(ಎಸ್) ನಾಯಕ ತೊದಲುವುದನ್ನು ಕಂಡು ವಿರೋಧ ಪಕ್ಷದ ನಾಯಕನಿಗೆ ಗೊತ್ತಿಲ್ಲ ಅನ್ನೋದು ಮನವರಿಕೆಯಾಗಿದೆ. ಅವರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಕ್ಕಿಸಲು ಅದೇ ಪ್ರಶ್ನೆ ಪುನರಾವರ್ತಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ (Leader of Opposition) ಸಿದ್ದರಾಮಯ್ಯನವರು (Siddaramaiah) ರಾಜಕಾರಣಿ ಆಗಿರದಿದ್ದರೆ ಏನಾಗಿರುತ್ತಿದ್ದರು ಅಂತ ಊಹಿಸಬಲ್ಲಿರಾ? ಆವರು ಖಂಡಿತವಾಗಿಯೂ ಮೇಷ್ಟ್ರು (schoolteacher) ಆಗಿರುತ್ತಿದ್ದರು ಮಾರಾಯ್ರೇ. ಯಾಕೆ ಅಂತ ನೀವು ಈಗ ಊಹಿಸಬಹುದು. ಅವರಿಗೆ ಪಾಠ ಮಾಡುವುದೆಂದರೆ ಪಂಚಪ್ರಾಣ. ಕನ್ನಡ ಮತ್ತು ಇತರ ವಿಷಯಗಳನ್ನು ಅವರು ವಿಧಾನ ಸಭೆಯಲ್ಲಿ, ಸಾರ್ವಜನಿಕ ಸಮಾರಂಭಗಳಲ್ಲಿ ಪಾಠ ಮಾಡುವುದನ್ನು ನಾವು ನೋಡಿದ್ದೇವೆ. ಈ ವಿಡಿಯೋನಲ್ಲಿ ನೋಡಿ. ಅವರು ಜೆಡಿ(ಎಸ್) ನಾಯಕ ರಮೇಶ ಗೌಡ ಅವರಿಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಇದೊಂದು ಸರ್ಕಾರಿ ಕಾರ್ಯಕ್ರಮ. ಕೇಂದ್ರ ಸರ್ಕಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಸಂಸತ್ತಿನಲ್ಲಿ 2022-23 ಸಾಲಿನ ಮುಂಗಡ ಪತ್ರ ಮಂಡಿಸಿದ್ದು ಅದರ ಬಗ್ಗೆ ದೇಶದೆಲ್ಲೆಡೆ ಚರ್ಚೆಯಾಗುತ್ತಿದೆ. ಇಲ್ಲೂ ಬಜೆಟ್ ಮೇಲೆ ಚರ್ಚೆ ನಡೆಯುತ್ತಿದ್ದಾಗ ಎಮ್ ಎಲ್ ಸಿ ರಮೇಶ್ ಗೌಡ ಅವರು ಜಿ ಎಸ್ ಟಿ ಕುರಿತು ಒಂದು ಪ್ರಶ್ನೆಯನ್ನು ಸಿದ್ದರಾಮಯ್ಯನವರಿಗೆ ಕೇಳಿದ್ದಾರೆ. ಯಾರಾದರೂ ಪ್ರಶ್ನೆ ಕೇಳಿದಾಗ ಕೀಟಲೆ ಮಾಡುವುದು ಸಿದ್ದರಾಮಯ್ಯನವರ ಸ್ವಭಾವ. ಇಲ್ಲೂ ಅದೇ ಆಗಿದೆ.

ಸಿದ್ದರಾಮಯ್ಯನವರು ತಮಗೆ ಪ್ರಶ್ನೆ ಕೇಳಿದ ರಮೇಶ್​ ಅವರಿಗೆ ಜಿ ಎಸ್ ಟಿ ಅಂದರೇನು ಅಂತ ಮರುಪ್ರಶ್ನಿಸಿದ್ದಾರೆ. ಜೆಡಿ(ಎಸ್) ನಾಯಕ ತೊದಲುವುದನ್ನು ಕಂಡು ವಿರೋಧ ಪಕ್ಷದ ನಾಯಕನಿಗೆ ಗೊತ್ತಿಲ್ಲ ಅನ್ನೋದು ಮನವರಿಕೆಯಾಗಿದೆ. ಅವರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಕ್ಕಿಸಲು ಅದೇ ಪ್ರಶ್ನೆ ಪುನರಾವರ್ತಿಸಿದ್ದಾರೆ. ಆಗಲೂ ರಮೇಶ್ ಅವರಿಂದ ಉತ್ತರ ಬಂದಿಲ್ಲ. ಮೂರನೇ ಬಾರಿ ಅವರ ಜಿ ಎಸ್ ಟ ಅದರೇನಯ್ಯ ಅಂತ ಗದರುವ ಧ್ವನಿಯಲ್ಲಿ ಕೇಳಿದ್ದಾರೆ.

ರಮೇಶ್ ಅವರ ಪೇಚಾಟ ಕಂಡು ಪಕ್ಕದಲ್ಲಿರುವವರು ಜಿ ಎಸ್ ಟಿ ಫುಲ್ ಫಾರ್ಮ್ ಅವರಿಗೆ ಹೇಳಿದ ಬಳಿಕ ವಿಧಾನ ಪರಿಷತ್ ಸದಸ್ಯ ಅದನ್ನೇ ಸಿದ್ದರಾಮಯ್ಯನವರಿಗೆ ಕೇಳುವಂತೆ ಉಚ್ಛರಿಸುತ್ತಾರೆ. ಆಗ ಸಮಾಧಾನಗೊಳ್ಳುವ ಸಿದ್ದರಾಮಯ್ಯನವರು ಜಿ ಎಸ್ ಟಿ ಬಗ್ಗೆ ವಿವರಣೆ ನೀಡಲಾರಂಭಿಸುತ್ತಾರೆ.

ಇದನ್ನೂ ಓದಿ:   ಕರ್ನಾಟಕಕ್ಕೆ ಯಾವುದೇ ಹೊಸ ಯೋಜನೆ ಘೋಷಿಸಿಲ್ಲ, ಇದೊಂದು ನಿರಾಶಾದಾಯಕ ಬಜೆಟ್; ಸಿದ್ದರಾಮಯ್ಯ ಟೀಕೆ