ಕೊವಿಡ್ 19 ವಿರುದ್ಧ ಹೋರಾಟದಲ್ಲಿ ಮುಂದಿನ 125 ದಿನಗಳು ತುಂಬ ನಿರ್ಣಾಯಕ: ಡಾ.ವಿ.ಕೆ.ಪೌಲ್
ಕೊವಿಡ್ 19 ಎರಡನೇ ಅಲೆ ಸ್ವಲ್ಪ ಮಟ್ಟಿಗೆ ತಗ್ಗುತ್ತಿದ್ದಂತೆ ಹಲವು ರಾಜ್ಯಗಳು ನಿಧಾನವಾಗಿ ನಿರ್ಬಂಧಗಳನ್ನು ಸಡಿಲಗೊಳಿಸುತ್ತಿವೆ. ಇದೀಗ ಆಗಸ್ಟ್ನಲ್ಲೇ ಕೊವಿಡ್ 19 ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಹೇಳಿದ್ದು, ಆತಂಕ ಮೂಡಿಸಿದೆ.
ದೆಹಲಿ: ಕೊವಿಡ್ 19 (Covid 19) ವಿರುದ್ಧ ಹೋರಾಟದಲ್ಲಿ ಮುಂದಿನ 100-125 ದಿನಗಳು ತುಂಬ ನಿರ್ಣಾಯಕ ಮತ್ತು ಸಂದಿಗ್ಧವಾಗಿರಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಕಳೆದ ಎರಡು ತಿಂಗಳ ಹಿಂದೆ ಕೊವಿಡ್ ಎರಡನೇ ಅಲೆ ಉತ್ತುಂಗಕ್ಕೆ ಏರಿತ್ತು. ಅದಾದ ಬಳಿಕ ದಿನದಲ್ಲಿ ಪತ್ತೆಯಾಗುವ ಕೊವಿಡ್ ಕೇಸ್ಗಳ ಸಂಖ್ಯೆಯಲ್ಲಿ ಇಳಿಮುಖವಾಯಿತು. ಆದರೆ ಈಗೀಗ ಕೊರೊನಾ ಕೇಸ್ಗಳಲ್ಲಿ ತುಂಬ ಇಳಿಮುಖ ಆಗುತ್ತಿಲ್ಲ. ಅದು ಎಚ್ಚರಿಕೆಯ ಸಂಕೇತ ಎಂದು ನೀತಿ ಆಯೋಗದ ಸದಸ್ಯ ಡಾ. ವಿ.ಕೆ.ಪೌಲ್ ಹೇಳಿದ್ದಾರೆ.
ಕೊವಿಡ್ 19 ಎರಡನೇ ಅಲೆ ಸ್ವಲ್ಪ ಮಟ್ಟಿಗೆ ತಗ್ಗುತ್ತಿದ್ದಂತೆ ಹಲವು ರಾಜ್ಯಗಳು ನಿಧಾನವಾಗಿ ನಿರ್ಬಂಧಗಳನ್ನು ಸಡಿಲಗೊಳಿಸುತ್ತಿವೆ. ಇದೀಗ ಆಗಸ್ಟ್ನಲ್ಲೇ ಕೊವಿಡ್ 19 ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಹೇಳಿದ್ದು, ಆತಂಕ ಮೂಡಿಸಿದೆ. ಇದರ ಬೆನ್ನಲ್ಲೇ ಈ ಹೇಳಿಕೆ ನೀಡಿರುವ ಡಾ. ಪೌಲ್, ಜುಲೈ ಅಂತ್ಯದೊಳಗೆ 50 ಕೋಟಿ ಜನರಿಗೆ ಕೊವಿಡ್ 19 ಲಸಿಕೆ ಕೊಟ್ಟು ಮುಗಿಸಬೇಕು ಎಂಬ ಗುರಿಯನ್ನು ನಾವು ಹೊಂದಿದ್ದೇವೆ. 66 ಕೋಟಿ ಡೋಸ್ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ನ್ನು ಕೇಂದ್ರ ಸರ್ಕಾರ ಆದೇಶಿಸಿದೆ. ಅದರೊಂದಿಗೆ 22 ಕೋಟಿ ಡೋಸ್ ಲಸಿಕೆ ಖಾಸಗಿ ವಲಯಕ್ಕೆ ಸೇರಲಿದೆ. ಉಳಿದಂತೆ ಕೊವಿಡ್ 19 ಮೂರನೇ ಅಲೆ ತಡೆಯಲು ಏನೇನು ಸಾಧ್ಯವೋ ಅದನ್ನೆಲ್ಲ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಕೊವಿಡ್ 19 ಟಾಸ್ಕ್ಫೋರ್ಸ್ಗೆ ಹೇಳಿದ್ದಾರೆ ಎಂದೂ ತಿಳಿಸಿದ್ದಾರೆ.
ಕೊರೊನಾ ಮತ್ತು ಅದರ ರೂಪಾಂತರಿ ವೈರಾಣುಗಳಿಂದ ರಕ್ಷಿಸಿಕೊಳ್ಳಲು ಲಸಿಕೆ ಪಡೆಯುವುದೊಂದೇ ಮಾರ್ಗ ಎಂದು ವಿ.ಕೆ.ಪೌಲ್ ಒತ್ತಿ ಹೇಳಿದ್ದಾರೆ. ಅಲ್ಲದೆ, ಈ ಬಗ್ಗೆ ಭಾರತೀಯ ವೈದ್ಯಕೀಯ ಮಂಡಳಿ ಸಂಶೋಧನೆ ಕೂಡ ನಡೆಸಿದೆ. ಐಸಿಎಂಆರ್ ಪೊಲೀಸ್ ಸಿಬ್ಬಂದಿಯ ಮೇಲೆ ಅಧ್ಯಯನ ನಡೆಸಿತ್ತು. ಕೊರೊನಾ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಪೊಲೀಸರಲ್ಲಿ ಎರಡೂ ಡೋಸ್ ಲಸಿಕೆ ಪಡೆದ ಪೊಲೀಸರಿಗಿಂತ, ಲಸಿಕೆ ಪಡೆಯದ ಪೊಲೀಸರಿಗೇ ಸಾವಿನ ಅಪಾಯ ಜಾಸ್ತಿ ಇರುವುದು ಈ ಸಂಶೋಧನೆಯಿಂದ ಗೊತ್ತಾಗಿದೆ ಎಂದು ಪೌಲ್ ತಿಳಿಸಿದ್ದಾರೆ.
ಇದನ್ನೂ ಓದಿ: ರಾಜೀನಾಮೆ ನೀಡುವ ಪ್ರಶ್ನೆ ಇಲ್ಲ; ಮತ್ತೆ ಆಗಸ್ಟ್ ಮೊದಲ ವಾರದಲ್ಲಿ ದೆಹಲಿಗೆ ಬರುತ್ತೇನೆ – ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
The next 125 days are critical in the fight against COVID 19 Says Dr VK Poul