ಮುಂಬೈ, ಮಾ.20: ಪರೇಲ್ ಪ್ರದೇಶದ 43 ವರ್ಷದ ಮಹಿಳೆಯೊಬ್ಬರು ಮುಂಬೈನಲ್ಲಿ ಹೊಸದಾಗಿ ನಿರ್ಮಿಸಲಾದ ಅಟಲ್ ಸೇತು ಮೇಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ಮಧ್ಯಾಹ್ನ ಸೇತುವೆಯ ರಸ್ತೆಯಿಂದ ಜಿಗಿದಿದ್ದಾರೆ ಎಂದು ಹೇಳಲಾಗಿದೆ. ಇನ್ನು ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಆಕೆಯ ಮನೆಯಲ್ಲಿ ಒಂದು ಪತ್ರ ಸಿಕ್ಕಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆಯನ್ನು ವೈದ್ಯೆ ಕಿಂಜಲ್ ಕಾಂತಿಲಾಲ್ ಶಾ ಎಂದು ಗುರುತಿಸಲಾಗಿದೆ. ಮಹಿಳೆ ಕಳೆದ ಹಲವಾರು ವರ್ಷಗಳಿಂದ ಖಿನ್ನತೆ ಒಳಗಾಗಿದ್ದರು. ಅವರಿಗೆ ಈಗಾಗಲೇ ಚಿಕಿತ್ಸೆ ಮಾಡಲಾಗುತ್ತಿದೆ ಎಂದು ಮನೆಯವರು ಪೊಲೀಸರಿಗೆ ತಿಳಿಸಿದ್ದಾರೆ. ಅಟಲ್ ಸೇತು ಸುತ್ತ ಆಕೆಯ ಪತ್ತೆಗಾಗಿ ಕಾರ್ಯಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಕಿಂಜಲ್ ಕಾಂತಿಲಾಲ್ ಶಾ ದಾದಾಸಾಹೇಬ್ ಫಾಲ್ಕೆ ರಸ್ತೆಯಲ್ಲಿರುವ ನವೀನ್ ಆಶಾ ಕಟ್ಟಡದಲ್ಲಿ ತನ್ನ ತಂದೆಯೊಂದಿಗೆ ಉಳಿದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಸೋಮವಾರ ಮಧ್ಯಾಹ್ನ ಕಿಂಜಲ್ ಪರೇಲ್‌ನಲ್ಲಿರುವ ತನ್ನ ಮನೆಯ ಸಮೀಪದಿಂದ ಟ್ಯಾಕ್ಸಿ ಮಾಡಿಕೊಂಡು ಅಟಲ್ ಸೇತು ಸೇತುವೆ ಬಳಿ ಹೋಗಿದ್ದಾರೆ. ಮುಂಬೈನಿಂದ ಸುಮಾರು 14.3 ಕಿಲೋಮೀಟರ್ ದೂರದಲ್ಲಿ ಈ ಸೇತುವೆ ಬಳಿ ಟ್ಯಾಕ್ಸಿ ನಿಲ್ಲಿಸಲು ಚಾಲಕನ್ನು ಕೇಳಿಕೊಂಡಿದ್ದಾರೆ.
ಆಕೆಯ ವರ್ತನೆಯನ್ನು ಕಂಡು ಚಾಲಕನಿಗೆ ಅನುಮಾನ ಬಂದು ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಚಾಲಕ ಹಿಂಬಾಲಿಸವುದನ್ನು ಕಂಡು ತನ್ನನ್ನೂ ಹಿಂಬಾಲಿಸದಂತೆ ಹೇಳಿದ್ದಾಳೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದಾಳೆ ಎಂದು ತಿಳಿದು ಚಾಲಕ ಪೊಲೀಸರಿಗೆ ಕಾಲ್ ಮಾಡಿ ಹೇಳಿದ್ದಾರೆ. ಕರಾವಳಿ ಪೊಲೀಸರು, ಸ್ಥಳೀಯ ಗ್ರಾಮಸ್ಥರು ಮತ್ತು ರಕ್ಷಕರ ಸಹಾಯದಿಂದ ಅವಳನ್ನು ಪತ್ತೆಹಚ್ಚುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.
ಇದನ್ನೂ ಓದಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಯುಪಿಎಸ್ಸಿ ಪ್ರಿಲಿಮಿನರಿ ಪರೀಕ್ಷೆ ಮುಂದೂಡಿಕೆ
ಸೋಮವಾರ ಬೆಳಿಗ್ಗೆ ನವಿ ಮುಂಬೈ ಪೊಲೀಸರಿಗೆ ಅವಳು ಪರೇಲ್ ಮೂಲದವಳು ಎಂದು ತಿಳಿದುಬಂದಿದೆ. ಹಾಗೂ ಆಕೆಯ ತಂದೆ ಕೂಡ ಪೊಲೀಸ್ ಠಾಣೆ ಮಗಳು ಕಾಣೆಯಾಗಿರುವ ಬಗ್ಗೆ ದೂರ ನೀಡಿದರು. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತನ್ನ ತಂದೆ ಫೋನ್ ಮಾಡಿ, ನಾನು ಕೆಲಸದ ನಿಮಿತ್ತ ಹೊರಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ. ಇನ್ನು ಮನೆಯಲ್ಲಿ ಪೊಲೀಸರು ತನಿಖೆ ನಡೆಸಿದಾಗ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಅಟಲ್ ಸೇತುಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ