PM Modi in SCO Meet: ಭಯೋತ್ಪಾದನೆ ವಿಚಾರದಲ್ಲಿ ಯಾವುದೇ ದ್ವಂದ್ವ ನೀತಿ ಇರಬಾರದು: ಎಸ್‌ಸಿಒ ಸಭೆಯಲ್ಲಿ ಪ್ರಧಾನಿ ಮೋದಿ ಮಾತು

ಎಸ್‌ಸಿಒ ದೇಶಗಳು ಭಯೋತ್ಪಾದನೆಯನ್ನು ಖಂಡಿಸಬೇಕು. ಭಯೋತ್ಪಾದನೆ ವಿಚಾರದಲ್ಲಿ ಯಾವುದೇ ದ್ವಂದ್ವ ನೀತಿ ಇರಬಾರದು. ಭಾರತೀಯರಿಗೆ ರಾಷ್ಟ್ರಗಳು ಕೇವಲ ನೆರೆಹೊರೆಯವರಲ್ಲ, ಅದು ಕುಟುಂಬವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

PM Modi in SCO Meet: ಭಯೋತ್ಪಾದನೆ ವಿಚಾರದಲ್ಲಿ ಯಾವುದೇ ದ್ವಂದ್ವ ನೀತಿ ಇರಬಾರದು: ಎಸ್‌ಸಿಒ ಸಭೆಯಲ್ಲಿ ಪ್ರಧಾನಿ ಮೋದಿ ಮಾತು
ಎಸ್‌ಸಿಒ ಸಭೆಯಲ್ಲಿ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on:Jul 04, 2023 | 1:57 PM

ಮಂಗಳವಾರ ಎಸ್‌ಸಿಒ ನಾಯಕರನ್ನು (SCO Meet)ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi), ಕೆಲವು ದೇಶಗಳು ಭಯೋತ್ಪಾದಕರಿಗೆ (Terrorists) ಆಶ್ರಯ ನೀಡುತ್ತಿದ್ದು ಗಡಿಯಾಚೆಗಿನ ಭಯೋತ್ಪಾದನೆಯನ್ನು ಸಾಧನವಾಗಿ ಬಳಸುತ್ತಿವೆ ಎಂದು ಹೇಳಿದರು. ಪಾಕಿಸ್ತಾನದ ಶೆಹಬಾಜ್ ಷರೀಫ್, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಸಮ್ಮುಖದಲ್ಲಿ ಮೋದಿ ಈ ಮಾತು ಹೇಳಿದ್ದಾರೆ. ಅಂತಹ ದೇಶಗಳನ್ನು ಟೀಕಿಸಲು ಎಸ್‌ಸಿಒ ಹಿಂಜರಿಯಬಾರದು. ಎಸ್‌ಸಿಒ ದೇಶಗಳು ಭಯೋತ್ಪಾದನೆಯನ್ನು ಖಂಡಿಸಬೇಕು. ಭಯೋತ್ಪಾದನೆ ವಿಚಾರದಲ್ಲಿ ಯಾವುದೇ ದ್ವಂದ್ವ ನೀತಿ ಇರಬಾರದು. ಭಾರತೀಯರಿಗೆ ರಾಷ್ಟ್ರಗಳು ಕೇವಲ ನೆರೆಹೊರೆಯವರಲ್ಲ, ಅದು ಕುಟುಂಬವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

“ನಾವು ಎಸ್‌ಸಿಒ ಅನ್ನು ವಿಸ್ತೃತ ನೆರೆಹೊರೆಯಾಗಿ ನೋಡುವುದಿಲ್ಲ, ಬದಲಿಗೆ ವಿಸ್ತೃತ ಕುಟುಂಬವಾಗಿ ನೋಡುತ್ತೇವೆ. ಭದ್ರತೆ, ಆರ್ಥಿಕ ಅಭಿವೃದ್ಧಿ, ಸಂಪರ್ಕ, ಏಕತೆ, ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವ, ಮತ್ತು ಪರಿಸರ ಸಂರಕ್ಷಣೆ ಎಸ್​​ಸಿಒ ಬಗ್ಗೆ ನಮ್ಮ ಗುರಿಗಳ ಆಧಾರಸ್ತಂಭಗಳಾಗಿವೆ ಎಂದಿದ್ದಾರೆ ಪ್ರಧಾನಿ.

ಎಸ್‌ಸಿಒ ರಾಷ್ಟ್ರಗಳ ವರ್ಚುವಲ್ ಶೃಂಗಸಭೆಯಲ್ಲಿ ಚರ್ಚೆಯ ಪ್ರಮುಖ ವಿಷಯಗಳಲ್ಲಿ ಉಕ್ರೇನ್ ಸಂಘರ್ಷವೂ ಸೇರಿದೆ. ಎಸ್‌ಸಿಒ ಸದಸ್ಯ ರಾಷ್ಟ್ರಗಳ ನಡುವೆ ಸಂಪರ್ಕ, ವ್ಯಾಪಾರ ಮತ್ತು ಸಹಕಾರವನ್ನು ಹೆಚ್ಚಿಸುವ ಬಗ್ಗೆಯೂ ಚರ್ಚಿಸಲಾಯಿತು.

ಸಭೆಯಲ್ಲಿ ಮೋದಿ ಹೇಳಿದ್ದೇನು?

ಕಳೆದ ಎರಡು ದಶಕಗಳಲ್ಲಿ, ಇಡೀ ಯುರೇಷಿಯಾ ಪ್ರದೇಶದಲ್ಲಿ ಶಾಂತಿ, ಸಮೃದ್ಧಿ ಮತ್ತು ಅಭಿವೃದ್ಧಿಗೆ SCO ಪ್ರಮುಖ ವೇದಿಕೆಯಾಗಿ ಹೊರಹೊಮ್ಮಿದೆ. ಈ ಪ್ರದೇಶದೊಂದಿಗೆ ಭಾರತದ ಸಾವಿರಾರು ವರ್ಷಗಳ ಸಾಂಸ್ಕೃತಿಕ ಮತ್ತು ಜನರ ನಡುವಿನ ಸಂಬಂಧಗಳು ನಮ್ಮ ಹಂಚಿಕೆಯ ಪರಂಪರೆಗೆ ಜೀವಂತ ಸಾಕ್ಷಿಯಾಗಿದೆ.

ನಾವು ಶಾಂಘೈ ಸಹಕಾರ ಸಂಸ್ಥೆ ಅನ್ನು ವಿಸ್ತೃತ ನೆರೆಹೊರೆಯಾಗಿ ಮಾತ್ರ ನೋಡುವುದಿಲ್ಲ, ಬದಲಿಗೆ ವಿಸ್ತೃತ ಕುಟುಂಬವಾಗಿ ನೋಡುತ್ತೇವೆ. SCO ಅಧ್ಯಕ್ಷರಾಗಿ, ಭಾರತವು ನಮ್ಮ ಬಹುಮುಖಿ ಸಹಕಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಪ್ರಯತ್ನಗಳನ್ನು ಮಾಡಿದೆ.

ಭಾರತವು ಎಸ್‌ಸಿಒದೊಳಗೆ ಸಹಕಾರದ ಐದು ಸ್ತಂಭಗಳನ್ನು ಸ್ಥಾಪಿಸಿದೆ. ಅದು ಸ್ಟಾರ್ಟ್ಅಪ್ ಮತ್ತು ನಾವೀನ್ಯತೆ, ಸಾಂಪ್ರದಾಯಿಕ ಔಷಧ, ಯುವ ಸಬಲೀಕರಣ, ಡಿಜಿಟಲ್ ಸೇರ್ಪಡೆ ಮತ್ತು ಬೌದ್ಧ ಪರಂಪರೆ ಎಂದು ಮೋದಿ ಹೇಳಿದ್ದಾರೆ

ಅಫ್ಘಾನಿಸ್ತಾನದ ಪರಿಸ್ಥಿತಿಯು ನಮ್ಮೆಲ್ಲರ (ದೇಶಗಳ) ಭದ್ರತೆಯ ಮೇಲೆ ನೇರ ಪರಿಣಾಮ ಬೀರಿದೆ. ಅಫ್ಘಾನಿಸ್ತಾನದ ಬಗ್ಗೆ ಭಾರತದ ಕಾಳಜಿ ಮತ್ತು ನಿರೀಕ್ಷೆಗಳು ಹೆಚ್ಚಿನ SCO ಸದಸ್ಯ ರಾಷ್ಟ್ರಗಳಂತೆಯೇ ಇವೆ. ಅಫ್ಘಾನಿಸ್ತಾನದ ಜನರ ಕಲ್ಯಾಣಕ್ಕಾಗಿ ನಾವು ಒಗ್ಗಟ್ಟಿನ ಪ್ರಯತ್ನಗಳನ್ನು ಮಾಡಬೇಕಾಗಿದೆ.ಅಫ್ಘಾನಿಸ್ತಾನದ ಭೂಮಿಯನ್ನು ನೆರೆಯ ರಾಷ್ಟ್ರಗಳಲ್ಲಿ ಅಶಾಂತಿ ಹರಡಲು ಅಥವಾ ಉಗ್ರಗಾಮಿ ಸಿದ್ಧಾಂತಗಳನ್ನು ಉತ್ತೇಜಿಸಲು ಬಳಸಬಾರದು.

SCO ಸಭೆಯ ಪ್ರಾಮುಖ್ಯತೆ: ಮಾಸ್ಕೋವನ್ನು ಬೆಚ್ಚಿಬೀಳಿಸಿದ ಖಾಸಗಿ ಸೈನಿಕರ ಗುಂಪು ಕಳೆದ ವಾರ ಅಲ್ಪಾವಧಿಯ ಸಶಸ್ತ್ರ ದಂಗೆಯನ್ನು ಪ್ರಾರಂಭಿಸಿದ ನಂತರ ಇದು ಬಹುಪಕ್ಷೀಯ ಶೃಂಗಸಭೆಯಲ್ಲಿ ಪುಟಿನ್ ಅವರ ಮೊದಲ ಭಾಗವಹಿಸುವಿಕೆಯಾಗಿದೆ. ಭಾರತ ಮತ್ತು ಚೀನಾದ ಸೈನಿಕರ ನಡುವಿನ ಮೂರು ವರ್ಷಗಳ ಪೂರ್ವ ಲಡಾಖ್ ಗಡಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮತ್ತು ಪ್ರಧಾನಿ ಮೋದಿಯವರ ಉನ್ನತ ಮಟ್ಟದ ಯುಎಸ್ ಭೇಟಿಯ ಎರಡು ವಾರಗಳ ನಂತರ ಶೃಂಗಸಭೆಯು ನಡೆಯುತ್ತಿದೆ.

SCO ಸದಸ್ಯರು: ಭಾರತದ ಅಧ್ಯಕ್ಷತೆಯಲ್ಲಿ ಶಾಂಘೈ ಸಹಕಾರ ಸಂಘಟನೆಯ (SCO) ಶೃಂಗಸಭೆಯು ಇರಾನ್ ಅನ್ನು ಗುಂಪಿನ ಹೊಸ ಖಾಯಂ ಸದಸ್ಯರನ್ನಾಗಿ ಸ್ವಾಗತಿಸಲು ಸಹ ಸಿದ್ಧವಾಗಿದೆ. ಭಾರತ, ಚೀನಾ, ರಷ್ಯಾ, ಪಾಕಿಸ್ತಾನ, ಕಝಾಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಒಳಗೊಂಡಿರುವ SCO, ಪ್ರಭಾವಶಾಲಿ ಆರ್ಥಿಕ ಮತ್ತು ಭದ್ರತಾ ಬಣವಾಗಿದೆ. ಇದು ಅತಿದೊಡ್ಡ ಪ್ರಾದೇಶಿಕ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

Published On - 1:31 pm, Tue, 4 July 23