ಸಚಿವ ಸಂಪುಟ ಮೇಜರ್ ಸರ್ಜರಿಗೆ ಮೋದಿ ತಯಾರಿ: ಕರ್ನಾಟಕದವರು ಯಾರು ಔಟ್? ಯಾರು ಇನ್?

ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಸಚಿವ ಸಂಪುಟದ ಕೆಲ ಮಹತ್ವದ ಬದಲಾವಣೆ ಪ್ರಧಾನಿ ನರೇಂದ್ರ ಮೋದಿ ಚಿಂತನೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಕರ್ನಾಟಕ ಬಿಜೆಪಿಯಲ್ಲಿ ಚರ್ಚೆಯಾಗುತ್ತಿದೆ. ಇನ್ನು ಕರ್ನಾಟಕದ ಹೊಸ ಮುಖಗಳಿಗೆ ಮಣೆ ಹಾಕುವ ಬಗ್ಗೆಯೂ ಚಿಂತನೆಗಳು ನಡೆದಿವೆ. ಹಾಗಾದ್ರೆ, ಸಂಪುಟದಿಂದ ಯಾರು ಔಟ್| ಯಾರು ಇನ್?

ಸಚಿವ ಸಂಪುಟ ಮೇಜರ್ ಸರ್ಜರಿಗೆ ಮೋದಿ ತಯಾರಿ: ಕರ್ನಾಟಕದವರು ಯಾರು ಔಟ್? ಯಾರು ಇನ್?
ನರೇಂದ್ರ ಮೋದಿ
Follow us
| Updated By: ರಮೇಶ್ ಬಿ. ಜವಳಗೇರಾ

Updated on: Jul 04, 2023 | 12:07 PM

ನವದೆಹಲಿ: ಲೋ‌ಕಸಭೆ ಚುನಾವಣೆಗೂ ಮುನ್ನ ನರೇಂದ್ರ ಮೋದಿ‌(Narendra Modi) ಸಂಪುಟದಲ್ಲಿ(cabinet reshuffle )ಕೆಲ ಬದಲಾವಣೆಯ ಲೆಕ್ಕಾಚಾರ ಶುರುವಾಗಿದೆ. ಸಂಪುಟ ಪುನಾರಚನೆಗೆ ಸಿದ್ದತೆಗಳು ಶುರುವಾಗಿವೆ‌. ಸೋಮುವಾರ ಪ್ರಧಾನಿ ನರೇಂದ್ರಮೋದಿಯವರ ನೇತೃತ್ವದಲ್ಲಿ ನಿನ್ನೆ (ಜುಲೈ 03) ನಡೆದಿದ್ದ ಮಹತ್ವದ ಮಂತ್ರಿ ಪರಿಷತ್ ಸಭೆಯಲ್ಲಿ ಲೋಕಸಭಾ ಚುನಾವಣೆಗೆ ಹೇಗೆ ತಯಾರಿ ಇರಬೇಕು ಎಂಬ ಬಗ್ಗೆ ಸಲಹೆ ನೀಡಿದ್ದಾರೆ. ಪ್ರಧಾನಿ ಮಂತ್ರಿ ಪರಿಷತ್ ಸಭೆ ನಡೆಸಿದ್ದಾರೆ ಎಂದರೆ ಕೆಲವೇ ದಿನಗಳಲ್ಲಿ ಸಂಪುಟ ಪುನಾರಚನೆ ಆಗುತ್ತೆ ಎನ್ನುವ ಚರ್ಚೆಗಳು ಶುರುವಾಗಿವೆ. ಸಂಸತ್ ಅಧಿವೇಶನಕ್ಕೂ ಮುನ್ನ ಸಂಪುಟ ಪುನಾರಚನೆಯಾಗುವ ಸಾಧ್ಯತೆ ಇದ್ದು, ಮುಂಬರುವ ರಾಜ್ಯಗಳ ಚುನಾವಣೆಗಳತ್ತ ಗಮನಹರಿಸಿ ಮೋದಿ ಸಂಪುಟ ಪುನಾರಚನೆ ಮಾಡಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸಚಿವ ಸಂಪುಟದೊಂದಿಗೆ ಪ್ರಧಾನಿ ಮೋದಿ ಮಹತ್ವದ ಸಭೆ, ಸಂಪುಟ ಪುನಾರಚನೆ ಬಗ್ಗೆ ಚರ್ಚೆ?

. ಈ ವರ್ಷಾಂತ್ಯದ ವೇಳೆ ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ಚುನಾವಣೆ ನಡೆಯಲಿದ್ದು ಪುನಾರಚನೆ ವೇಳೆ ಈ ರಾಜ್ಯಗಳಿಗೆ ಮಹತ್ವ ನೀಡಲಿದ್ದಾರೆ. ಅಷ್ಟೇ ಅಲ್ಲದೆ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಹಳೆ ದೋಸ್ತಿಗಳ ಮನವೊಲಿಸಲು ಬಿಜೆಪಿ ತಂತ್ರಮಾಡುತ್ತಿದೆ. ಬಿಜೆಪಿ ತನ್ನ ಮಿತ್ರ ಬಳಗವನ್ನು ಹೆಚ್ಚಿಸಲು ಮಿತ್ರಪಕ್ಷಗಳಿಗೂ ಮಂತ್ರಿ ಸ್ಥಾನ ನೀಡಲುವ ಸಾಧ್ಯತೆ ಇದೆ. ಎನ್ ಸಿಪಿ ಬಂಡಾಯಗಾರಿಗೂ ಕೇಂದ್ರದಲ್ಲಿ ಮಂತ್ರಿ ಸ್ಥಾನ ಸಿಲಿದ್ದು ಎನ್ ಸಿಪಿ ನಾಯಕ ಪ್ರಫುಲ್ ಪಟೇಲ್ ಗೆ ಕೇಂದ್ರ ಮಂತ್ರಿ ಪಟ್ಟ ಸಿಗುವ ಸಾಧ್ಯತೆಗಳಿವೆ.

ಇನ್ನು ಅಜಿತ್ ಪವಾರ್ ಡಿಸಿಎಂ ಆದ ಹಿನ್ನೆಲೆ ದೇವೇಂದ್ರ ಫಡ್ನವಿಸ್ ಗೆ ಕೇಂದ್ರ ಮಂತ್ರಿ ನೀಡಿ ರಾಷ್ಟ್ರರಾಜಕಾರಣಕ್ಕೆ ಕರೆತರುವ ಚಿಂತನೆಗಳು ನಡೆದಿವೆ. ಪ್ರಸ್ತುತ ಮೋದಿ ಸಂಪುಟದಲ್ಲಿ ಮಹಾರಾಷ್ಟ್ರದ ಎಂಟು ಮಂದಿ ಸಚಿವರಿದ್ದಾರೆ. ನಿತಿನ್ ಗಡ್ಕರಿ, ಪಿಯೂಷ್ ಗೋಯಲ್, ನಾರಾಯಣ ರಾಣೆ ಮತ್ತು ರಾಮದಾಸ್ ಅಠಾವಳೆ ಮಂತ್ರಿಗಳಾಗಿದ್ದಾರೆ. ಮಹಾರಾಷ್ಟ್ರದ ಶಿಂಧೆ ಬಣ ಮೂವರನ್ನು ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಮುಂದಾಗಿದ್ದು, ಅವರನ್ನು ಸೇರಿಸಿಕೊಳ್ಳಲು ಬಿಜೆಪಿ ತನ್ನ ಕೋಟಾದಿಂದ ಕೆಲವು ಸಚಿವರನ್ನು ಕೈಬಿಡಲಿದೆ.

ಗುಜರಾತ್ ಕೋಟಾಗೆ ಬೀಳಲಿದೆ ಕತ್ತರಿ

ಗುಜರಾತ್ ನಲ್ಲಿ ವಿಧಾನಸಭಾ ಚುನಾವಣೆ ಮುಗಿರುವುದರಿಂದ ಸಂಪುಟ ಪುನರ್ ರಚನೆ ವೇಳೆ ಗುಜರಾತ್ ಕೋಟಾದ ಮಂತ್ರಿಗಳನ್ನು ತೆಗೆದುಹಾಕುವ ಸಾಧ್ಯತೆ ಇದೆ. ಪ್ರಸ್ತುತ ಸಂಪುಟದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ, ಮನ್ಸುಖ್ ಮಾಂಡವಿಯಾ, ಪುರುಷೋತ್ತಮ ರೂಪಾಲ, ದರ್ಶನ ಜರ್ದೋಶ್, ದೇವುಸಿಂಗ್ ಚೌಹಾಣ್ ಮತ್ತು ಮಹೇಂದ್ರ ಮುಂಜ್ಪಾರಾ ಸಚಿವರಾಗಿದ್ದಾರೆ. ಮನ್ಸುಖ್ ಮಾಂಡವಿಯಾ, ಪರುಷೋತ್ತಮ ರೂಪಲಾ ಮತ್ತು ದರ್ಶನಾ ಜರ್ದೋಶ್ ಅವರಿಗೆ ಕೋಕ್ ನೀಡುವ ಸಾಧ್ಯತೆ ಇದೆ

ಇನ್ನು ಧರ್ಮೇಂದ್ರ ಪ್ರಧಾನ್ ಅವರನ್ನು ಸಂಪುಟದಿಂದ ಬಿಡುಗಡೆ ಮಾಡಿ. ಉತ್ತರಪ್ರದೇಶ ಬಿಜೆಪಿಯ ಉಸ್ತುವಾರಿ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಮೋದಿ ಸಂಪುಟ ಪುನಾರಚನೆಯಲ್ಲಿ ಬಿಹಾರ ಮತ್ತು ಉತ್ತರ ಪ್ರದೇಶ ಸಚಿವರನ್ನು ಕೈಬಿಡುವ‌ ಸಾಧ್ಯತೆ ಹೆಚ್ಚಿದೆ. ಈ ಎರಡು ರಾಜ್ಯಗಳಿಂದ 20 ಸಚಿವರಿದ್ದಾರೆ. ಬಿಹಾರದಿಂದ ಅಶ್ವಿನಿ ಚೌಬೆ, ಪಶುಪತಿ ಪಾರಸ್ ಮತ್ತು ಆರ್.ಕೆ.ಸಿಂಗ್ ಅವರನ್ನು ಸಂಪುಟದಿಂದ‌ ಕೈಬಿಡುವ ಚರ್ಚೆ ನಡೆದಿದೆ. ಉತ್ತರ ಪ್ರದೇಶದ ಮಹೇಂದ್ರ ನಾಥ್ ಪಾಂಡೆ, ಅಜಯ್ ಮಿಶ್ರಾ ಟೆನಿ ಅವರ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆ ಇದೆ. ಪಾಂಡೆ ಮತ್ತು ಅಜಯ್ ಮಿಶ್ರಾ ಅವರನ್ನು ತೆಗೆದುಹಾಕಿದರೆ, ಬ್ರಾಹ್ಮಣರನ್ನು ಸಮಾಧಾನಪಡಿಸಲು ಲಕ್ಷ್ಮೀಕಾಂತ್ ವಾಜಪೇಯಿ ಅಥವಾ ಹರೀಶ್ ದ್ವಿವೇದಿ ಸಂಪುಟದಲ್ಲಿ ಸ್ಥಾನ ಪಡೆಯಬಹುದು ಎನ್ನಲಾಗಿದೆ.

ಕರ್ನಾಟಕದವರು ಯಾರು ಔಟ್? ಯಾರು ಇನ್?

ಕರ್ನಾಟಕದಿಂದ 6 ಸಚಿವರು ಮೋದಿ ಸಂಪುಟದಲ್ಲಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ರಾಜೀವ್ ಚಂದ್ರಶೇಖರ್ ಕ್ಯಾಬಿನೆಟ್ ಸಚಿವರಾಗಿದ್ದಾರೆ. ಇನ್ನು ಕೇಂದ್ರ ಸಚಿವೆ ಸಚಿವೆ ಶೋಭಾ ಕರಂದ್ಲಾಜೆ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗುವ ಚರ್ಚೆ ನಡೆಯುತ್ತಿದೆ. ಇವರ ಬದಲಿಗೆ ಸಂಸದ ಬಿ.ವೈ ರಾಘವೇಂದ್ರ ಕೇಂದ್ರ ಮಂತ್ರಿಯಾಗುವ ಸಾಧ್ಯತೆ ಇದೆ. ಇನ್ನು ಕೇಂದ್ರ ಸಚಿವ ನಾರಾಯಣ ಸ್ವಾಮಿಯವರನ್ನು ಬದಲಾಯಿಸಿ ಬಂಜಾರ ಸಮುದಾಯದ ಉಮೇಶ್ ಜಾದವ್ ಗೆ ಸಂಪುಟದಲ್ಲಿ ಅವಕಾಶ ನೀಡುವ ಬಗ್ಗೆ ಚಿಂತನೆಗಳು ನಡೆದಿವೆ ಎಂದು ತಿಳಿದುಬಂದಿದೆ.

ತೆಲಂಗಾಣದಿಂದ ಒಬ್ಬರು ಮತ್ತು ತಮಿಳುನಾಡಿನಿಂದ ಇಬ್ಬರು ಸಚಿವರಾಗುವ ಸಾಧ್ಯತೆ ಇದೆ. ತಮಿಳುನಾಡಿನಲ್ಲಿ ಮಿತ್ರ ಪಕ್ಷ ಎಐಎಡಿಎಂಕೆಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ನಿಯಮದ ಪ್ರಕಾರ ಕೇಂದ್ರ ಸರ್ಕಾರದಲ್ಲಿ ಪ್ರಧಾನಿ ಸೇರಿದಂತೆ ಒಟ್ಟು 81 ಮಂದಿ ಸಚಿವರಾಗಬಹುದು. ಸದ್ಯ 78 ಸಚಿವರು ಸಂಪುಟಕ್ಕೆ ಸೇರ್ಪಡೆಗೊಂಡಿದ್ದು, 3 ಸ್ಥಾನಗಳು ಮಾತ್ರ ಖಾಲಿ ಇವೆ. ಕಳೆದ ಬಾರಿ ಸಂಪುಟ ವಿಸ್ತರಣೆ ವೇಳೆ 12 ಸಚಿವರು ರಾಜೀನಾಮೆ ನೀಡಿದ್ದರು.

ಬಿಜೆಪಿಯೇತರ ನಾಯಕರಾದ ಎನ್ ಸಿಪಿ ಬಂಡಾಯ ನಾಯಕ ಪ್ರಫುಲ್ ಪಟೇಲ್, ಲೋಕ ಜನಶಕ್ತಿ ಪಕ್ಷದ ರಾಮ್ ವಿಲಾಸ್ ಬಣದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಹೆಸರುಗಳು ಕ್ಯಾಬಿನೆಟ್‌ಗೆ ಸೇರ್ಪಡೆ ಯಾಗುವ ಸಾಧ್ಯತೆ ಇದೆ. ಲೋಕಸಭಾ ಚುನಾವಣೆ ಎದುರಿಸಲು ಮೋದಿ ಜಬರ್ದಸ್ತ್ ಟೀಂ ರೆಡಿ ಮಾಡುತ್ತಿದ್ದಾರೆ.

ತೆಲಂಗಾಣದಿಂದ ಸಂಜಯ್ ಬಂಡಿ, ಜನಾರ್ದನ್ ಸಿಂಗ್ ಸಿಗ್ರಿವಾಲ್, ವಿವೇಕ್ ಠಾಕೂರ್, ಸಿ.ಆರ್ ಪಾಟೀಲ್, ರಾಜ್ಯವರ್ಧನ್ ಸಿಂಗ್ ರಾಥೋಡ್, ಕೇರಳದಿಂದ ನಟ ಸುರೇಶ್ ಗೋಪಿ ಸಂಪುಟಕ್ಕೆ ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ.  2024 ರ ಲೋಕಸಭೆ ಚುನಾವಣೆಗೆ ಮುನ್ನ 15 ಕೇಂದ್ರ ಸಚಿವರನ್ನು ಕೈಬಿಟ್ಟು, ಪಕ್ಷದ ಕೆಲಸ ಮಾಡುವಂತೆ ಸೂಚನೆ ಸಿಗುವ ಸಾಧ್ಯತೆ ಇದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!