ದರ್ಭಾಂಗಾ: ‘ಜನಪ್ರಿಯವಲ್ಲದ’ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರೊಂದಿಗೆ ಮತ್ತೊಮ್ಮೆ ಮೈತ್ರಿ ಮಾಡುವ ಪ್ರಶ್ನೆಯೇ ಇಲ್ಲ ಎಂದು ಬಿಹಾರದಾದ್ಯಂತ ಬಿಜೆಪಿ (BJP) ಕಾರ್ಯಕರ್ತರಿಗೆ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಸಂಜಯ್ ಜೈಸ್ವಾಲ್ (Sanjay Jaiswal) ಭಾನುವಾರ ಹೇಳಿದ್ದಾರೆ.ಉತ್ತರ ಬಿಹಾರ ಜಿಲ್ಲೆಯ ದರ್ಭಾಂಗಾದಲ್ಲಿ ಪಕ್ಷದ ಎರಡು ದಿನಗಳ ರಾಜ್ಯ ಕಾರ್ಯಕಾರಿಣಿ ಸಭೆಯ ಮುಕ್ತಾಯದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ.”ನಮ್ಮ ಪಕ್ಷದ ಕಾರ್ಯಕರ್ತರಲ್ಲಿ ಇಂತಹ ಮರು ಮೈತ್ರಿ ಬಗ್ಗೆ ವದಂತಿಗಳನ್ನು ಹತ್ತಿಕ್ಕಲು ನಾವು ಪ್ರಯತ್ನಿಸಿದ್ದೇವೆ. ಸಿಎಂ ಪೆಂಡುಲಮ್ನಂತೆ ಅತ್ತಿತ್ತ ಅಲುಗಾಡುತ್ತಿರುತ್ತಾರೆ. ಆದರೆ ನಾವು ಮತ್ತೆ ಅವರಿಂದ ಮೋಸ ಹೋಗುವುದಿಲ್ಲ” ಎಂದು ಬಿಜೆಪಿ ನಾಯಕ ಹೇಳಿದ್ದಾರೆ. ಕುಮಾರ್ ಅವರ ಜೆಡಿಯು ಬಿಜೆಪಿ ಮೈತ್ರಿಯಿಂದ ಹೊರಬಂದು ಆರ್‌ಜೆಡಿ ಮತ್ತು ಕಾಂಗ್ರೆಸ್‌ನೊಂದಿಗೆ ಹೊಸ ಮೈತ್ರಿ ಮಾಡಿಕೊಂಡಿತ್ತು.
ನಿತೀಶ್ ಕುಮಾರ್ ಜನರಿಂದ ಪ್ರೀತಿಗಳಿಸಿಲ್ಲ. 2020 ರ ವಿಧಾನಸಭಾ ಚುನಾವಣೆಯಲ್ಲಿ ನಾವು ಉತ್ತಮವಾಗಿ ಕಾರ್ಯನಿರ್ವಹಿಸಿದಾಗ ಅದೇ ಜೆಡಿಯು ಪಕ್ಷದ ಕಳಪೆ ಪ್ರದರ್ಶನಕ್ಕೆ ಕಾರಣವಾಯಿತು” ಎಂದು ಜೈಸ್ವಾಲ್ ಹೇಳಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಗೆ ಮುನ್ನ ನೀಡಿದ ಭರವಸೆಗೆ ಬದ್ಧರಾಗಿರಲು ನಿರ್ಧರಿಸುವಲ್ಲಿ ಉದಾರತೆ ತೋರಿಸಿದ್ದು ನಿತೀಶ್ ಕುಮಾರ್ ಅವರು ಮತ್ತೊಂದು ಅವಧಿಯ ಅಧಿಕಾರವನ್ನು ಅನುಭವಿಸಿದರು. ಆದರೆ, ಮೋಸ ಮಾಡುವ ಬುದ್ಧಿ ಇರುವ ಕುಮಾರ್ ಅವರು ಪ್ರಧಾನಿ ಅವರ ಮೇಲೆ ಇರಿಸಿದ್ದ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡರು ಎಂದು ಬಿಹಾರ ಬಿಜೆಪಿ ಮುಖ್ಯಸ್ಥರು ಆರೋಪಿಸಿದ್ದಾರೆ.
ತಮ್ಮ ಮಾಜಿ ಆಪ್ತ ಸಹಾಯಕ ಆರ್‌ಸಿಪಿ ಸಿಂಗ್ ಅವರ ಸಹಾಯದಿಂದ ಜೆಡಿಯು ಅನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ನಿತೀಶ್ ಕುಮಾರ್ ಬಿಜೆಪಿ ಮೇಲೆ ಆರೋಪ ಹೊರಿಸಿದ್ದರು.
ಇದನ್ನೂ ಓದಿ:Bharat Jodo Yatra Highlights: ಸಮಾರೋಪ ಇಂದು; ರಾಹುಲ್ ಪಾದಯಾತ್ರೆಯ ಮುಖ್ಯಾಂಶಗಳಿವು
ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷವು ಜೆಡಿಯು ಅಭ್ಯರ್ಥಿಗಳ ವಿರುದ್ಧ ಅನೇಕ ಬಿಜೆಪಿ ಬಂಡುಕೋರರನ್ನು ಕಣಕ್ಕಿಳಿಸಿದಾಗ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತಮ್ಮ ಪಕ್ಷವನ್ನು ಒಡೆಯುವ ಪ್ರಯತ್ನ ಮಾಡಿದೆ ಎಂದು ಪಕ್ಷ ಆರೋಪಿಸಿದೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ನಂತರ ಬಿಜೆಪಿ ಈಗ ಬಿಹಾರದಲ್ಲಿ ತನ್ನದೇ ಆದ ಸರ್ಕಾರವನ್ನು ರಚಿಸುವ ಗುರಿಯನ್ನು ಹೊಂದಿದೆ ಎಂದು ಜೈಸ್ವಾಲ್ ಹೇಳಿದ್ದಾರೆ. ಮುಂದಿನ ವರ್ಷ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 40 ಸ್ಥಾನಗಳಲ್ಲಿ 35 ಸ್ಥಾನ ಪಡೆಯುವ ಗುರಿಯನ್ನು ಹೊಂದಿದ್ದೇವೆ ಎಂದು ಅವರು ಹೇಳಿದ್ದಾರೆ.
“ಇಂದು ನಿತೀಶ್‌ಗೆ ಮಾರ್ಗದರ್ಶಕರಾಗಿದ್ದ ಜಾರ್ಜ್ ಫರ್ನಾಂಡಿಸ್ ಅವರ ಜನ್ಮದಿನವಾಗಿದೆ. ನಿತೀಶ್ ಅವರಿಗೆ ದ್ರೋಹ ಮಾಡಲು ಹಿಂಜರಿಯದಿದ್ದಾಗ ಅವರು ಬೇರೆಯವರಿಗೂ ಮೋಸ ಮಾಡಬಹುದು ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:41 pm, Mon, 30 January 23