AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Security Alert: ಪಾಕಿಸ್ತಾನದ ಗುಪ್ತಚರರೊಂದಿಗೆ ಭಾರತೀಯ ಸೇನಾ ಸಿಬ್ಬಂದಿ ಸಂಪರ್ಕ? ಬೆಚ್ಚಿಬೀಳಿಸುವ ವರದಿ

Pakistan Intel Officers Trap Indian Airforce, Army Personnel: ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳು ಸೋಷಿಯಲ್ ಮೀಡಿಯಾ ಮೂಲಕ ಭಾರತೀಯ ಸೇನಾ ಸಿಬ್ಬಂದಿಯನ್ನು ಟ್ರ್ಯಾಪ್ ಮಾಡಿದ್ದಾರೆ. ಫೇಸ್​ಬುಕ್ ಮೂಲಕ ಇಬ್ಬರು ಸೇನಾ ಸಿಬ್ಬಂದಿಯ ಸಂಪರ್ಕ ಪಡೆಯುವಲ್ಲಿ ಪಾಕಿಸ್ತಾನೀಯರು ಯಶಸ್ವಿಯಾಗಿದ್ದಾರೆ.

Security Alert: ಪಾಕಿಸ್ತಾನದ ಗುಪ್ತಚರರೊಂದಿಗೆ ಭಾರತೀಯ ಸೇನಾ ಸಿಬ್ಬಂದಿ ಸಂಪರ್ಕ? ಬೆಚ್ಚಿಬೀಳಿಸುವ ವರದಿ
ಸಾಂದರ್ಭಿಕ ಚಿತ್ರ
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ|

Updated on: Jan 30, 2023 | 1:31 PM

Share

ನವದೆಹಲಿ: ಭಾರತೀಯ ವಾಯು ಪಡೆ ಮತ್ತು ಸೇನಾ ಪಡೆಯ ಇಬ್ಬರು ಸಿಬ್ಬಂದಿ (Indian Airforce and Army Personnel) ಪಾಕಿಸ್ತಾನೀ ಗುಪ್ತಚರರೊಂದಿಗೆ (Pakistani Intelligence Officers) ಸಂಪರ್ಕ ಹೊಂದಿರುವ ಸ್ಫೋಟಕ ಮಾಹಿತಿ ಹೊರಬಂದಿದೆ. ಈ ವಿಚಾರವನ್ನು ಪತ್ತೆಹಚ್ಚಿರುವ ಭಾರತೀಯ ಗುಪ್ತಚರ ಸಂಸ್ಥೆಗಳು ಸೇನಾ ಪಡೆ, ಗೃಹ ಇಲಾಖೆ ಸೇರಿದಂತೆ ಸಂಬಂಧಿತ ವಿಭಾಗಗಳನ್ನು ಎಚ್ಚರಿಸಿವೆ ಎಂದು ನ್ಯೂಸ್18 ವಾಹಿನಿ ವರದಿ ಮಾಡಿದೆ.

ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ವಿದೇಶಾಂಗ ವ್ಯವಹಾರಗಳ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ವ್ಯಕ್ತಿ ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳಿಗೆ ಗೌಪ್ಯ ಮಾಹಿತಿ ಕದ್ದು ನೀಡುತ್ತಿದ್ದ ಆರೋಪದ ಮೇಲೆ ಬಂಧಿತನಾದ ಪ್ರಕರಣ ಬೆಳಕಿಗೆ ಬಂದಿತ್ತು. ಅದರ ಬೆನ್ನಲ್ಲೇ ಈಗ ಮತ್ತೊಂದು ಪ್ರಕರಣ ಕಂಡು ಬಂದಿರುವುದು ಗಮನ ಸೆಳೆದಿದೆ.

ಹೊಸ ಪ್ರಕರಣದಲ್ಲಿ, ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳು ಸೋಷಿಯಲ್ ಮೀಡಿಯಾ ಮೂಲಕ ಭಾರತೀಯ ಸೇನಾ ಸಿಬ್ಬಂದಿಯನ್ನು ಟ್ರ್ಯಾಪ್ ಮಾಡಿದ್ದಾರೆ. ಫೇಸ್​ಬುಕ್ ಮೂಲಕ ಇಬ್ಬರು ಸೇನಾ ಸಿಬ್ಬಂದಿಯ ಸಂಪರ್ಕ ಪಡೆಯುವಲ್ಲಿ ಪಾಕಿಸ್ತಾನೀಯರು ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲ ವಾಟ್ಸಾಪ್ ಮೂಲಕವೂ ಇವರ ಮಧ್ಯೆ ಸಂವಾದ ನಡೆದಿತ್ತು. ಸೇನಾ ಸಿಬ್ಬಂದಿ ಮಾತ್ರವಲ್ಲ, ಕೆಲ ಸಾಮಾನ್ಯ ನಾಗರಿಕರನ್ನೂ ಪಾಕಿಸ್ತಾನೀ ಗುಪ್ತಚರರು ತಮ್ಮ ಸಂಪರ್ಕಕ್ಕೆ ಪಡೆದಿರುವುದು ಬೆಳಕಿಗೆ ಬಂದಿದೆ. ಇನ್ನಷ್ಟು ಆಳವಾಗಿ ವಿವರ ಕಲೆಹಾಕಲಾಗುತ್ತಿದೆ ಎಂದು ನ್ಯೂಸ್18 ತನ್ನ ಮೂಲಗಳನ್ನು ಉಲ್ಲೇಖಿಸುತ್ತಾ ವರದಿ ಮಾಡಿದೆ.

ತನ್ನ ಸಿಬ್ಬಂದಿಯ ಸೋಷಿಯಲ್ ಮೀಡಿಯಾ ಮತ್ತು ಮೊಬೈಲ್ ಬಳಕೆಯ ಮೇಲೆ ಸೇನೆಗಳು ಭಾರೀ ನಿಗಾ ಇಡುತ್ತವೆ. ಇಂಥ ಸಂದರ್ಭದಲ್ಲಿ ಪಾಕಿಸ್ತಾನೀ ಗುಪ್ತಚರರ ಸಂಪರ್ಕ ನಡೆದಿರುವ ಸಂಗತಿ ತಿಳಿದುಬಂದಿದೆ.

ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳು ಹೆಚ್ಚು ಕ್ರಿಯಾಶೀಲರಾಗಿದ್ದು, ಭಾರತೀಯ ಸೇನಾ ಸಿಬ್ಬಂದಿಯ ಸಂಪರ್ಕ ಸಾಧಿಸುವ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜನೆಯಾಗಿರುವ ಅಧಿಕಾರಿಗಳನ್ನು ಹೊರಗಿನವರು ಸಂಪರ್ಕಿಸುವ ಪ್ರಕರಣಗಳು ಹೆಚ್ಚುತ್ತಿವೆ. ಮೂಲಗಳ ಪ್ರಕಾರ ಪಾಕಿಸ್ತಾನೀಯರು ಭಾರತೀಯ ಪೊಲೀಸ್ ಪಡೆಗಳ ಕಂಟ್ರೋಲ್ ರೂಮಿಗೆ ಕರೆ ಮಾಡಿ ತಾವು ಹಿರಿಯ ಅಧಿಕಾರಿಗಳೆಂದು ಹೇಳಿಕೊಂಡು ಸೇನಾ ಪಡೆಗಳ ಚಲನವಲನಗಳ ಮಾಹಿತಿ ಪಡೆಯಲು ಯತ್ನಿಸುವುದೂ ಬಹಳ ಭಾರಿ ನಡೆದಿರುವುದುಂಟು.

ಭಾರತೀಯ ಸೇನೆಯ ಸಿಎಪಿಎಫ್ ಸಿಬ್ಬಂದಿಯ ವಾಟ್ಸಾಪ್ ಗ್ರೂಪ್​ಗಳಲ್ಲಿ ಪಾಕಿಸ್ತಾನೀ ಗುಪ್ತಚರರ ಮೊಬೈಲ್ ನಂಬರ್ ಕೂಡ ಇರುವ ಕೆಲ ನಿದರ್ಶನಗಳು ಹಿಂದೆ ಕಂಡುಬಂದಿದ್ದಿವೆ.

ತನ್ನ ಸಿಬ್ಬಂದಿ ಹಾಗೂ ಅವರ ಕುಟುಂಬ ಸದಸ್ಯರ ಮೊಬೈಲ್ ಮತ್ತು ಸೋಷಿಯಲ್ ಮೀಡಿಯಾ ಬಳಕೆ ಬಗ್ಗೆ ಸೇನೆ ನಿಗಾ ವಹಿಸುತ್ತಿದ್ದರೂ ಅಲ್ಲಲ್ಲಿ ಇಂಥ ಪ್ರಕರಣಗಳು ನಡೆಯುತ್ತಲೇ ಇವೆ.