ಕೊವಿಡ್ 3ನೇ ಅಲೆ ಬಂದಿದೆ, ಜಾಗರೂಕರಾಗಿರಿ ಎಂದ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್

ಕೊವಿಡ್ 3ನೇ ಅಲೆ ಬಂದಿದೆ, ಜಾಗರೂಕರಾಗಿರಿ ಎಂದ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್
ಶಿವರಾಜ್ ಸಿಂಗ್ ಚೌಹಾಣ್

ಕಳೆದ 24 ಗಂಟೆಗಳಲ್ಲಿ ಮಧ್ಯಪ್ರದೇಶದಲ್ಲಿ 124 ಕೊವಿಡ್-19 ಪ್ರಕರಣಗಳು ವರದಿಯಾಗಿವೆ. ರಾಜ್ಯದ ಅತಿ ಹೆಚ್ಚು ಜನನಿಬಿಡ ನಗರವಾದ ಇಂದೋರ್‌ನಲ್ಲಿ 62 ಪ್ರಕರಣಗಳು ವರದಿಯಾಗಿವೆ, ಭೋಪಾಲ್ ಒಂದೇ ದಿನದಲ್ಲಿ 27 ಪ್ರಕರಣಗಳನ್ನು ವರದಿ ಮಾಡಿದೆ. 

TV9kannada Web Team

| Edited By: Rashmi Kallakatta

Jan 02, 2022 | 1:23 PM

ಭೋಪಾಲ್: ಕೊವಿಡ್-19 ಮೂರನೇ ಅಲೆ (Covid-19 3rd Wave) ಬಂದಿದೆ ಜನರು ಹೆಚ್ಚು ಜಾಗರೂಕರಾಗಿರಿ ಎಂದು ಮಧ್ಯಪ್ರದೇಶ (Madhya Pradesh)ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan)ಅವರು ತಮ್ಮ ರಾಜ್ಯದ ಜನರಿಗೆ ಹೇಳಿದ್ದಾರೆ. ಜನರ ಸಕ್ರಿಯ ಸಹಭಾಗಿತ್ವ ಮತ್ತು ಸಹಕಾರದೊಂದಿಗೆ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವುದು ಅಗತ್ಯವಾಗಿದೆ, ಇಲ್ಲದಿದ್ದರೆ ಯುದ್ಧವು ಸರಿಯಾಗಿ ನಡೆಯುವುದಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. “ಕೊರೊನಾವೈರಸ್​​ನ (Coronavirus) ಮೂರನೇ ಅಲೆ ಬಂದಿದೆ ಮತ್ತು ಅದರ ವಿರುದ್ಧ ಜನರು ಹೋರಾಡಬೇಕಾಗಿದೆ. ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ, ಆದರೆ ಅತ್ಯಂತ ಜಾಗರೂಕರಾಗಿರಬೇಕು” ಎಂದು ಚೌಹಾಣ್ ಶನಿವಾರ ಹೇಳಿದ್ದಾರೆ.  ಕಳೆದ 24 ಗಂಟೆಗಳಲ್ಲಿ ಮಧ್ಯಪ್ರದೇಶದಲ್ಲಿ 124 ಕೊವಿಡ್-19 ಪ್ರಕರಣಗಳು ವರದಿಯಾಗಿವೆ. ರಾಜ್ಯದ ಅತಿ ಹೆಚ್ಚು ಜನನಿಬಿಡ ನಗರವಾದ ಇಂದೋರ್‌ನಲ್ಲಿ 62 ಪ್ರಕರಣಗಳು ವರದಿಯಾಗಿವೆ, ಭೋಪಾಲ್ ಒಂದೇ ದಿನದಲ್ಲಿ 27 ಪ್ರಕರಣಗಳನ್ನು ವರದಿ ಮಾಡಿದೆ. 

ದೇಶಾದ್ಯಂತ, ಕೊವಿಡ್-19 ಪ್ರಕರಣಗಳು ಹೆಚ್ಚುತ್ತಲೇ ಇರುವುದರಿಂದ ದೆಹಲಿ ಮತ್ತು ಹರ್ಯಾಣದಂತಹ ಹಲವಾರು ರಾಜ್ಯಗಳು ರಾತ್ರಿ ಕರ್ಫ್ಯೂವನ್ನು ಪ್ರಾರಂಭಿಸಿವೆ. ಹೆಚ್ಚು ಹರಡುವ ಒಮಿಕ್ರಾನ್ ರೂಪಾಂತರಿಯಿಂದ ಆತಂಕವೂ ಹೆಚ್ಚಿದೆ.

ಇಪ್ಪತ್ಮೂರು ರಾಜ್ಯಗಳು ಇಲ್ಲಿಯವರೆಗೆ ಒಮಿಕ್ರಾನ್ ರೂಪಾಂತರವನ್ನು ವರದಿ ಮಾಡಿದೆ. ಅತಿ ಹೆಚ್ಚು ಕೋವಿಡ್-19 ಪ್ರಕರಣಗಳನ್ನು ವರದಿ ಮಾಡಿರುವ ಮಹಾರಾಷ್ಟ್ರದಲ್ಲಿ 460 ಒಮಿಕ್ರಾನ್ ಪ್ರಕರಣಗಳಿದ್ದು, ದೆಹಲಿಯಲ್ಲಿ 351 ಸೋಂಕುಗಳಿವೆ. ರಾಷ್ಟ್ರೀಯ ರಾಜಧಾನಿ ನವದೆಹಲಿ, ಹಣಕಾಸು ಕೇಂದ್ರ ಮುಂಬೈ ಮತ್ತು ಕೋಲ್ಕತ್ತಾದಂತಹ ದಟ್ಟವಾದ ಜನಸಂಖ್ಯೆಯ ಮೆಟ್ರೋಗಳು ಕೆಲವು ತೀವ್ರ ಏರಿಕೆಗಳನ್ನು ಕಾಣುತ್ತಿವೆ ಎಂದು ಆರೋಗ್ಯ ಸಚಿವಾಲಯದ ಡೇಟಾ ಸೂಚಿಸುತ್ತದೆ.

ರಾಷ್ಟ್ರವ್ಯಾಪಿ ಎಚ್ಚರಿಕೆಯ ಮಧ್ಯೆ, ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ತಾತ್ಕಾಲಿಕ ಆಸ್ಪತ್ರೆಗಳನ್ನು ಸ್ಥಾಪಿಸಲು ಮತ್ತು ವಿಶೇಷ ತಂಡಗಳನ್ನು ರಚಿಸಲು ಕೇಂದ್ರವು ರಾಜ್ಯಗಳನ್ನು ಕೇಳಿದೆ.

ಭಾರತದಲ್ಲಿ ಭಾನುವಾರ 27,533 ಹೊಸ ಕೊವಿಡ್ -19 (Covid-19) ಪ್ರಕರಣಗಳು ಮತ್ತು 284 ಸಾವುಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳು 1,22,801 ರಷ್ಟಿದೆ. ದೇಶದಲ್ಲಿ ಇದುವರೆಗೆ ದಾಖಲಾದ ಒಟ್ಟು 1,525 ಒಮಿಕ್ರಾನ್ ಪ್ರಕರಣಗಳಲ್ಲಿ ಮಹಾರಾಷ್ಟ್ರ (Maharashtra) ಮತ್ತು ದೆಹಲಿ (Delhi) ಕ್ರಮವಾಗಿ 460 ಮತ್ತು 351 ಸೋಂಕುಗಳನ್ನು ದಾಖಲಿಸಿದೆ. ಆರೋಗ್ಯ ಸಚಿವಾಲಯದ ಇತ್ತೀಚಿನ ನವೀಕರಣದ ಪ್ರಕಾರ, 1,525 ರೋಗಿಗಳಲ್ಲಿ 560 ಜನರು ಇಲ್ಲಿಯವರೆಗೆ ಹೆಚ್ಚು ಸಾಂಕ್ರಾಮಿಕ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.

ಗುಜರಾತ್ (136), ತಮಿಳುನಾಡು (117) ಮತ್ತು ಕೇರಳ (109), ನಂತರದ ಸ್ಥಾನಗಳಲ್ಲಿ ರಾಜಸ್ಥಾನ (69), ತೆಲಂಗಾಣ (67), ಕರ್ನಾಟಕ (64) ಮತ್ತು ಹರಿಯಾಣ (63) ಒಮಿಕ್ರಾನ್‌ನಿಂದ ಹೆಚ್ಚು ಹಾನಿಗೊಳಗಾದ ಇತರ ರಾಜ್ಯಗಳಾಗಿವೆ. ಹದಗೆಡುತ್ತಿರುವ ಸನ್ನಿವೇಶದ ದೃಷ್ಟಿಯಿಂದ ಸರ್ಕಾರವು ಹಬ್ಬದ ವರ್ಷಾಂತ್ಯದ ವಾರದಲ್ಲಿ ಹಲವಾರು ಹೊಸ ನಿರ್ಬಂಧಗಳನ್ನು ವಿಧಿಸಿದೆ.

ವಿದೇಶಿ ಪ್ರಯಾಣದ ನಂತರ ಒಮಿಕ್ರಾನ್ ಸೋಂಕಿತ ಮಹಿಳೆ ಪತ್ತೆ ನೆದರ್‌ಲ್ಯಾಂಡ್‌ನಿಂದ ಇತ್ತೀಚೆಗೆ ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಗೆ ಹಿಂದಿರುಗಿದ 26 ವರ್ಷದ ಮಹಿಳೆಯೊಬ್ಬರು ಕೊರೊನಾವೈರಸ್ ನ ಒಮಿಕ್ರಾನ್ ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಇಂದೋರ್‌ನ ಹೊರಗೆ ಮಧ್ಯಪ್ರದೇಶಯಲ್ಲಿ ಇದು ಮೊದಲ ಒಮಿಕ್ರಾನ್ ಪ್ರಕರಣವಾಗಿದೆ. ಈ ಹಿಂದೆ, ರಾಜ್ಯದ ಕೈಗಾರಿಕಾ ಕೇಂದ್ರವಾದ ಇಂದೋರ್‌ನಲ್ಲಿ ಹೊಸ ರೂಪಾಂತರದ ಒಂಬತ್ತು ಪ್ರಕರಣಗಳು ಕಂಡುಬಂದಿವೆ. ಇತ್ತೀಚಿನ ಪ್ರಕರಣದೊಂದಿಗೆ, ರಾಜ್ಯದಲ್ಲಿ ಒಮಿಕ್ರಾನ್ ಸೋಂಕಿನ ಸಂಖ್ಯೆ 10 ಕ್ಕೆ ಏರಿದೆ. ಡಿಸೆಂಬರ್ 26 ರಂದು ನೆದರ್​​ಲ್ಯಾಂಡ್​​ನಿಂದ ನವದೆಹಲಿಗೆ ಆಗಮಿಸಿದಾಗ ಕೊವಿಡ್-19 ಪರೀಕ್ಷೆಗಾಗಿ ಮಹಿಳೆಯ ಮಾದರಿಯನ್ನು ಸಂಗ್ರಹಿಸಲಾಗಿದೆ. ಅವರು ಚಿಂದ್ವಾರಾ ತಲುಪಿದ ನಂತರ ಆಕೆಯನ್ನು ಮನೆಯಲ್ಲಿಯೇ ಕ್ವಾರಂಟೈನ್ ಆಗಿರಲು ಹೇಳಲಾಗಿತ್ತು ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅತುಲ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ:  Omicron ಭಾರತದಲ್ಲಿ 1,500 ಗಡಿ ದಾಟಿದ ಒಮಿಕ್ರಾನ್ ಪ್ರಕರಣ; 23 ರಾಜ್ಯಗಳಲ್ಲಿ ಸೋಂಕು ಪತ್ತೆ

Follow us on

Related Stories

Most Read Stories

Click on your DTH Provider to Add TV9 Kannada