₹12 ಕೋಟಿ ಗೆದ್ದ ಆಟೋ ಚಾಲಕ; ಕೇರಳ ತಿರುವೋಣಂ ಬಂಪರ್ ಲಾಟರಿ ವಿಜೇತ ಯಾರು ಎಂಬ ಪ್ರಶ್ನೆಗೆ  ಕೊನೆಗೂ ಸಿಕ್ಕಿತು ಉತ್ತರ

ನಿಜವಾಗಿಯೂ ಜಯಪಾಲನ್ ಅವರು ಖರೀದಿಸಿದ ಲಾಟರಿಗೆ ಮೊದಲ ಬಹುಮಾನ ಸಿಕ್ಕಿತ್ತು. ತಿರುವೋಣಂ ಬಂಪರ್ ಲಾಟರಿಯ ಮೊತ್ತ 12 ಕೋಟಿ!. ಬಡತನದಲ್ಲಿದ್ದ ಜಯಪಾಲನ್ ಈಗ ಕೋಟ್ಯಧಿಪತಿ

₹12 ಕೋಟಿ ಗೆದ್ದ ಆಟೋ ಚಾಲಕ; ಕೇರಳ ತಿರುವೋಣಂ ಬಂಪರ್ ಲಾಟರಿ ವಿಜೇತ ಯಾರು ಎಂಬ ಪ್ರಶ್ನೆಗೆ  ಕೊನೆಗೂ ಸಿಕ್ಕಿತು ಉತ್ತರ
ತಿರುವೋಣಂ ಬಂಪರ್ ಲಾಟರಿ (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Sep 21, 2021 | 4:38 PM

ತಿರುವನಂತಪುರಂ: ಕೇರಳ ಸರ್ಕಾರದ ತಿರುವೋಣಂ ಬಂಪರ್ ಲಾಟರಿ (Thiruvonam Bumper Lottery) ಫಲಿತಾಂಶ ಪ್ರಕಟವಾದೊಡನೆ ವಯನಾಡಿನ ವ್ಯಕ್ತಿಯೊಬ್ಬರು ತನ್ನ ಲಾಟರಿ ಟಿಕೆಟ್ ಗೆ ಮೊದಲ ಬಹುಮಾನ ಸಿಕ್ಕಿದೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ , ಕೇರಳದ ಎರ್ನಾಕುಲಂ ಜಿಲ್ಲೆಯ 58 ವರ್ಷದ ಆಟೋ ರಿಕ್ಷಾ ಚಾಲಕ ಕೊಚ್ಚಿಯ ಮರಡು ನಿವಾಸಿ ಜಯಪಾಲನ್ ಪಿ ಆರ್ ಬಹುಮಾನ ಪಡೆದ ಲಾಟರಿ ನನ್ನದೇ ಎಂದು ಲಾಟರಿಯನ್ನು ಹತ್ತಿರದ ಬ್ಯಾಂಕ್ ಶಾಖೆಗೆ ಸಲ್ಲಿಸಿದ್ದರು. ನಿಜವಾಗಿಯೂ ಜಯಪಾಲನ್ ಅವರು ಖರೀದಿಸಿದ ಲಾಟರಿಗೆ ಮೊದಲ ಬಹುಮಾನ ಸಿಕ್ಕಿತ್ತು. ತಿರುವೋಣಂ ಬಂಪರ್ ಲಾಟರಿಯ ಮೊತ್ತ ₹12 ಕೋಟಿ!. ಬಡತನದಲ್ಲಿದ್ದ ಜಯಪಾಲನ್ ಈಗ ಕೋಟ್ಯಧಿಪತಿ. ಬಹುಮಾನ ಮೊತ್ತದಿಂದ ತೆರಿಗೆಗಳನ್ನು ಮತ್ತು ಏಜೆನ್ಸಿಯ ಕಮಿಷನ್ ಅನ್ನು ಕಡಿತಗೊಳಿಸಿದ ನಂತರ, ಜಯಪಾಲನ್ ಗೆ ಸುಮಾರು ₹7.4 ಕೋಟಿ ಬಹುಮಾನವಾಗಿ ಕೈಸೇರಲಿದೆ.

ಜಯಪಾಲನ್ ಅವರು ಮೀನಾಕ್ಷಿ ಲಕ್ಕಿ ಸೆಂಟರ್‌ನಿಂದ ಟಿಕೆಟ್ ಖರೀದಿಸಿರುವುದಾಗಿ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದರು. ಸೆಪ್ಟೆಂಬರ್ 10 ರಂದು ತೃಪ್ಪೂಣಿತ್ತುರದಲ್ಲಿಅನೇಕರಿಗೆ ಅದೃಷ್ಟವನ್ನು ತಂದಿರುವ ಏಜೆನ್ಸಿಯಿಂದ ಅವರು ಟಿಕೆಟ್ ಖರೀದಿಸಿದ್ದರು.ತಿರುವೋಣಂ ಬಂಪರ್ ಟಿಕೆಟ್ ದರ ರೂ. 300. ಜಯಪಾಲನ್ ನಿಯಮಿತವಾಗಿ ಲಾಟರಿ ಟಿಕೆಟ್ ಖರೀದಿಸುವವರಾಗಿದ್ದು ಈ ಹಿಂದೆ ರೂ 5,000 ಗೆದ್ದಿದ್ದರು.

ತಿರುವನಂತಪುರಂನಲ್ಲಿ ರಾಜ್ಯ ಸರ್ಕಾರದ ಇಬ್ಬರು ಮಂತ್ರಿಗಳ ಮೇಲ್ವಿಚಾರಣೆಯಲ್ಲಿ ಆಯ್ಕೆಯಾದ ಮೊದಲ ಬಹುಮಾನ ಪಡೆದ ಲಾಟರಿ ಸಂಖ್ಯೆ ಟಿವಿ ಪರದೆಯ ಮೇಲೆ ಕಾಣಿಸಿಕೊಂಡಾಗ ಅದು ನನ್ನದೇ ಲಾಟರಿ ಸಂಖ್ಯೆ ಎಂಬುದು ಗೊತ್ತಾಯಿತು. ನಾನು ನನ್ನ ಮಗನಿಗೆ ಟಿಕೆಟ್ ಬಗ್ಗೆ ಹೇಳಿದೆ, ಆದರೆ ತನ್ನ ಸ್ನೇಹಿತರಿಗೆ ಅಥವಾ ಕುಟುಂಬದವರಿಗೆ ಸುದ್ದಿ ತಿಳಿಸಲಿಲ್ಲ. ಸೋಮವಾರ ಟಿಕೆಟ್ ಸಂಖ್ಯೆ ಪತ್ರಿಕೆಯಲ್ಲಿ ಕಂಡು ಕ್ರಾಸ್ ಚೆಕ್ ಮಾಡಿದ ನಂತರವೇ ಬ್ಯಾಂಕ್ ಗೆ ಹೋಗಿದ್ದೆ ಎಂದು ಜಯಪಾಲನ್ ಹೇಳಿದ್ದಾರೆ.

ಬಹುಮಾನದ ಹಣವನ್ನು ಏನು ಮಾಡುತ್ತೀರಿ ಎಂದು ಸುದ್ದಿ ವಾಹಿನಿಯೊಂದ ಪತ್ರಕರ್ತರು ಕೇಳಿದಾಗ, “ನಾನು ತೀರಿಸಲು ಬಯಸುವ ಕೆಲವು ಸಾಲಗಳಿವೆ. ನಾನು ನ್ಯಾಯಾಲಯದಲ್ಲಿ ನಡೆಯುತ್ತಿರುವ ಎರಡು ಸಿವಿಲ್ ಪ್ರಕರಣಗಳನ್ನು ಸಹ ಹೊಂದಿದ್ದೇನೆ ಅದನ್ನು ನಾನು ತೆರವುಗೊಳಿಸಲು ಬಯಸುತ್ತೇನೆ. ನಾನು ನನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮತ್ತು ನನ್ನ ಸಹೋದರಿಯರಿಗೆ ಆರ್ಥಿಕವಾಗಿ ಬೆಂಬಲಿಸಲು ಬಯಸುತ್ತೇನೆ ಎಂದಿದ್ದಾರೆ. ಈ ಬಗ್ಗೆ ಅವರ ಅಮ್ಮನಲ್ಲಿ ಕೇಳಿದಾಗ, “ನಾವು ಸಾಲದಲ್ಲಿ ಮುಳುಗಿದ್ದೆವು. ಈ ಲಾಟರಿ ಇಲ್ಲದಿದ್ದರೆ ನನ್ನ ಮಗನಿಗೆ ಅವುಗಳನ್ನು ತೀರಿಸಲು ಸಾಧ್ಯವಾಗುತ್ತಿರಲಿಲ್ಲ. ದೇವರು ನನ್ನ ಕಣ್ಣೀರನ್ನು ನೋಡಿ ನಮಗೆ ಸಹಾಯ ಮಾಡಿದನೆಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಈ ಹಿಂದೆ ಕೇರಳದ ವಯನಾಡ್ ಜಿಲ್ಲೆಯವರಾದ ದುಬೈನ ಹೋಟೆಲ್‌ನಲ್ಲಿ ಅಡುಗೆಯವರಾದ ಸೈಯದ್ ಅಲವಿ ತಾನು ವಿಜೇತ ಎಂದು ಹೇಳಿಕೊಂಡ ನಂತರ ಲಾಟರಿ ವಿಜೇತರ ಬಗ್ಗೆ ಗೊಂದಲವಿತ್ತು. ತನಗಾಗಿ ಟಿಕೆಟ್ ಖರೀದಿಸಿದ ಕೇರಳದಲ್ಲಿರುವ ತನ್ನ ಸ್ನೇಹಿತ, ಗೆಲುವಿನ ಟಿಕೆಟ್ ನ ಛಾಯಾಚಿತ್ರವನ್ನು ಕಳುಹಿಸಿದ್ದಾನೆ ಎಂದು ಅವರು ಹೇಳಿದರು. ಆದರೆ ಅಲವಿಯ ಸ್ನೇಹಿತ ತಪ್ಪಾದ ಫೋಟೊ ಕಳಿಸಿ ಮೋಸಗೊಳಿಸಿದನೆಂದು ನಂತರ ತಿಳಿದುಬಂದಿದೆ. ಲಾಟರಿ ಡ್ರಾ ನಡೆದ ಕೆಲವು ಗಂಟೆಗಳಲ್ಲಿ ಟಿವಿ ಚಾನೆಲ್‌ಗಳು ಮತ್ತು ಸಾವಿರಾರು ಜನರು ಸಾಮಾಜಿಕ ಮಾಧ್ಯಮದಲ್ಲಿ ಅಲವಿ ಅವರೇ ವಿಜೇತರು ಎಂದು ಹೇಳಿದ್ದರು.

12 ಕೋಟಿ ಜಾಕ್ ಪಾಟ್ ಹೊರತಾಗಿ ಲಾಟರಿಯು ಆರು ವಿಜೇತರಿಗೆ ತಲಾ 1 ಕೋಟಿ, 12 ವಿಜೇತರಿಗೆ ತಲಾ 10 ಲಕ್ಷ, 12 ವಿಜೇತರಿಗೆ ತಲಾ 5 ಲಕ್ಷ ಮತ್ತು 108 ವಿಜೇತರಿಗೆ ತಲಾ 1 ಲಕ್ಷ ಬಹುಮಾನಗಳನ್ನು ಸಹ ಹೊಂದಿದೆ. ಬಹುಮಾನದ ಹಣವನ್ನು ಏಜೆನ್ಸಿ ಮತ್ತು ಟಿಕೆಟ್ ಮಾರಾಟಗಾರರಿಗೆ ತೆರಿಗೆ ಮತ್ತು ಕಮಿಷನ್ ಕಡಿತಗೊಳಿಸಿದ ನಂತರ ಲೆಕ್ಕಹಾಕಲಾಗುತ್ತದೆ.

ರಾಜ್ಯ ಸರ್ಕಾರದ ಲಾಟರಿ ವಿಭಾಗವು ತಿರುವೋಣಂ ಬಂಪರ್ ಲಾಟರಿಗಾಗಿ ಈ ವರ್ಷ 54 ಲಕ್ಷ ಟಿಕೆಟ್‌ಗಳನ್ನು ಮುದ್ರಿಸಿದ್ದು, ಎಲ್ಲವೂ ಮಾರಾಟವಾಗಿದೆ. ಇಲಾಖೆಯು ಕಳೆದ ವರ್ಷಕ್ಕಿಂತ 10 ಲಕ್ಷ ಟಿಕೆಟ್‌ಗಳನ್ನು ಹೆಚ್ಚು ಮುದ್ರಿಸಿದೆ. ಈ ವರ್ಷ  ಒಟ್ಟು   126 ಕೋಟಿ ರೂ. ಮೌಲ್ಯದ ಬಂಪರ್‌ ಲಾಟರಿ ಮಾರಾಟವಾಗಿದೆ.

ಇದನ್ನೂ ಓದಿ: Justin Trudeau ಮೂರನೇ ಬಾರಿ ಕೆನಡಾ ಪ್ರಧಾನಿಯಾಗಿ ಅಧಿಕಾರಕ್ಕೇರಿದ ಜಸ್ಟಿನ್‌ ಟ್ರುಡೊ, ಸ್ಪಷ್ಟ ಬಹುಮತ ಪಡೆಯಲು ವಿಫಲ

(Thiruvonam Bumper Lottery Auto-rickshaw driver from Ernakulam won Rs 12 crore)

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್