ಈ ರಾಜ್ಯದ ಸರ್ಕಾರಿ ನೌಕರರಿಗೆ ಇನ್ನು ವಾರದಲ್ಲಿ ಕೇವಲ 5 ದಿನ ಮಾತ್ರ ಕೆಲಸ

| Updated By: ಸುಷ್ಮಾ ಚಕ್ರೆ

Updated on: Jan 26, 2022 | 1:01 PM

ಇದೀಗ ಛತ್ತೀಸ್​ಗಢ ತನ್ನ ಸರ್ಕಾರದ ಸಿಬ್ಬಂದಿಗೆ ದೊಡ್ಡ ರಿಲೀಫ್ ನೀಡಿದ್ದು, ಛತ್ತೀಸ್‌ಗಢ ಸರ್ಕಾರದ ನೌಕರರಿಗೆ ವಾರದಲ್ಲಿ 5 ದಿನ ಕೆಲಸ ಮಾಡಲು ಅವಕಾಶ ನೀಡಿದೆ. ಅಂಶದಾಯಿ ಪಿಂಚಣಿ ಯೋಜನೆಯ ಭಾಗವಾಗಿ ಪಿಂಚಣಿ ಯೋಜನೆಯ ಮೊತ್ತವನ್ನು ಶೇ.10ರಿಂದ ಶೇ.14ಕ್ಕೆ ಹೆಚ್ಚಿಸಲಾಗುವುದು.

ಈ ರಾಜ್ಯದ ಸರ್ಕಾರಿ ನೌಕರರಿಗೆ ಇನ್ನು ವಾರದಲ್ಲಿ ಕೇವಲ 5 ದಿನ ಮಾತ್ರ ಕೆಲಸ
ಸಿಎಂ ಭೂಪೇಶ್ ಬಘೇಲ್
Follow us on

ಬಹುತೇಕ ಐಟಿ ಕಂಪನಿಗಳಲ್ಲಿ, ಕೆಲವು ಖಾಸಗಿ ಕಂಪನಿಗಳಲ್ಲಿ ವಾರಕ್ಕೆ 5 ದಿನ ಮಾತ್ರ ಕೆಲಸವಿರುತ್ತದೆ. ಶನಿವಾರ ಮತ್ತು ಭಾನುವಾರ ವೀಕೆಂಡ್ ರಜೆಯನ್ನು (Weekend) ಆ ಕಂಪನಿಗಳ ಉದ್ಯೋಗಿಗಳು ಎಂಜಾಯ್ ಮಾಡುತ್ತಾರೆ. ಆದರೆ, ಸರ್ಕಾರಿ ನೌಕರರಿಗೆ ವಾರದಲ್ಲಿ ಭಾನುವಾರ ಮಾತ್ರ ರಜೆ ಇರುತ್ತದೆ. ಇದೀಗ ಛತ್ತೀಸ್​ಗಢ ತನ್ನ ಸರ್ಕಾರದ ಸಿಬ್ಬಂದಿಗೆ ದೊಡ್ಡ ರಿಲೀಫ್ ನೀಡಿದ್ದು, ಛತ್ತೀಸ್‌ಗಢ ಸರ್ಕಾರದ ನೌಕರರಿಗೆ ವಾರದಲ್ಲಿ 5 ದಿನ ಕೆಲಸ ಮಾಡಲು ಅವಕಾಶ ನೀಡಿದೆ. ಅಂಶದಾಯಿ ಪಿಂಚಣಿ ಯೋಜನೆಯ (Pension Scheme) ಭಾಗವಾಗಿ ಪಿಂಚಣಿಗಾಗಿ ಛತ್ತೀಸ್​ಗಢ ರಾಜ್ಯದ ಮೊತ್ತವನ್ನು ಶೇ.10ರಿಂದ ಶೇ.14ಕ್ಕೆ ಹೆಚ್ಚಿಸುವುದಾಗಿ ಛತ್ತೀಸ್​ಗಢ ಸರ್ಕಾರ (Chhattisgarh Government) ಘೋಷಿಸಿದೆ.

ಭಾರತದ 73ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಇತರ ಪ್ರಮುಖ ಘೋಷಣೆಗಳನ್ನು ಕೂಡ ಮಾಡಿದ್ದಾರೆ. ವಸತಿ ಪ್ರದೇಶಗಳಲ್ಲಿ ನಡೆಸುವ ವ್ಯಾಪಾರ ಚಟುವಟಿಕೆಗಳನ್ನು ಕ್ರಮಬದ್ಧಗೊಳಿಸಲು ಅಗತ್ಯವಾದ ನಿಬಂಧನೆಗಳನ್ನು ಮಾಡಲಾಗುವುದು. ಎಲ್ಲಾ ಅಕ್ರಮ ಕಟ್ಟಡಗಳ ಸಕ್ರಮಕ್ಕೆ ಈ ವರ್ಷ ಕಾನೂನು ತರಲಾಗುವುದು ಎಂದು ಸಿಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುನ್ಸಿಪಲ್ ಕಾರ್ಪೊರೇಷನ್ ಹೊರಗಿನ ಹೂಡಿಕೆ ಪ್ರದೇಶಗಳಲ್ಲಿ 500 ಚದರ ಮೀಟರ್ ವಿಸ್ತೀರ್ಣದ ಪ್ಲಾಟ್‌ಗಳಿಗೆ ಯಾವುದೇ ಹಸ್ತಕ್ಷೇಪವಿಲ್ಲದೆ ಕಟ್ಟಡದ ಅನುಮತಿಯನ್ನು ನೀಡಲಾಗುತ್ತದೆ. ನಗರ ಪ್ರದೇಶಗಳಂತೆ ಗ್ರಾಮೀಣ ಪ್ರದೇಶಗಳಲ್ಲಿ ಛತ್ತೀಸ್​ಗಢ ಸರ್ಕಾರವು ಗುತ್ತಿಗೆ ಪಡೆದ ಭೂಮಿಯನ್ನು ಫ್ರೀಹೋಲ್ಡ್ ಎಂದು ಕರೆಯಲಾಗುತ್ತದೆ. ಕಲಿಕಾ ಪರವಾನಗಿ ಮಾಡುವ ಪ್ರಕ್ರಿಯೆಯನ್ನು ಸರಳಗೊಳಿಸುವುದು ಮತ್ತು ಯುವಕರ ಉದ್ಯೋಗಕ್ಕಾಗಿ ಹೆಚ್ಚಿನ ಸಂಖ್ಯೆಯ ಸಾರಿಗೆ ಸೌಲಭ್ಯ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು.

ಸರ್ಕಾರಿ ನೌಕರರ ಹಿತದೃಷ್ಟಿಯಿಂದ ‘ಕಾಂಟ್ರಿಬ್ಯೂಟರಿ ಪಿಂಚಣಿ ಯೋಜನೆ’ಯ ಅಂತರ-ಕೈಗಾರಿಕಾ ನೀತಿಯನ್ನು ತಿದ್ದುಪಡಿ ಮಾಡುವ ಮೂಲಕ ಒಬಿಸಿಗಳಲ್ಲಿ ಉದ್ಯಮಶೀಲತೆ ಅಭಿವೃದ್ಧಿಗೆ ಶೇ.10ರಷ್ಟು ಪ್ಲಾಟ್‌ಗಳನ್ನು ಕಾಯ್ದಿರಿಸಲಾಗುತ್ತದೆ. 2022-23ರ ಖಾರಿಫ್‌ನಲ್ಲಿ ದ್ವಿದಳ ಧಾನ್ಯಗಳ ಖರೀದಿಯನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಮಾಡಲಾಗುತ್ತದೆ.

ಇದನ್ನೂ ಓದಿ: Video: ಛತ್ತೀಸ್​ಗಢ್​​ನ ಹಳ್ಳಿಯೊಂದರಲ್ಲಿ ವಿವಾದಿತ ಪ್ರತಿಜ್ಞಾ ವಿಧಿ ಸ್ವೀಕಾರ; ಕಾರ್ಯಕ್ರಮ ಆಯೋಜಕರನ್ನು ಹುಡುಕುತ್ತಿರುವ ಪೊಲೀಸರು !

ಕೊವಿಡ್ ಲಸಿಕೆ ಹಾಕಿಸಿಕೊಳ್ಳದಿದ್ದರೆ ಈ ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಸಂಬಳವೇ ಸಿಗಲ್ಲ!

Published On - 12:56 pm, Wed, 26 January 22