ಛತ್ತೀಸ್ಗಢದಲ್ಲಿ ಹುತಾತ್ಮರಾದ ಗದಗದ ಬಿಎಸ್ಎಫ್ ಯೋಧ
ಸೈನಿಕ ಲಕ್ಷ್ಮಣ ಗೌರಣ್ಣವ ಪಾರ್ಥಿವ ಶರೀರ ಇಂದು ಹುಟ್ಟೂರಿಗೆ ಬರುವ ಸಾಧ್ಯತೆ ಹೆಚ್ಚಿದ್ದು, ಸಂಜೆಯೇ ಯೋಧನ ಅಂತ್ಯಸಂಸ್ಕಾರ ಮಾಡಲು ಸಿದ್ಧತೆ ನಡೆಯುತ್ತಿದೆ. ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಗುತ್ತದೆ.
ಗದಗ: ಛತ್ತೀಸ್ಗಢದಲ್ಲಿ ಜಿಲ್ಲೆಯ ಬಿಎಸ್ಎಫ್ ಯೋಧ ಹುತಾತ್ಮರಾಗಿದ್ದಾರೆ. ಸರ್ವಿಸ್ ರೈಫಲ್ನಿಂದ ಆಕಸ್ಮಿಕವಾಗಿ ಗುಂಡು ಹಾರಿ ಬಿಎಸ್ಎಫ್ ಸೈನಿಕ ಲಕ್ಷ್ಮಣ ಗೌರಣ್ಣವರ (31) ಸಾವನ್ನಪ್ಪಿದ್ದಾರೆ. ಲಕ್ಷ್ಮಣ ಗೌರಣ್ಣವರ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋಜನೂರು ಗ್ರಾಮದ ನಿವಾಸಿಯಾಗಿದ್ದು, ಯೋಧ ಹುತಾತ್ಮರಾಗಿರುವ ಬಗ್ಗೆ ಬಿಎಸ್ಎಫ್ನಿಂದ ಮಾಹಿತಿ ಬಂದಿದೆ. ಯೋಧನ ಪಾರ್ಥಿವ ಶರೀರ ಇಂದು (ಜುಲೈ 21) ಹುಟ್ಟೂರಿಗೆ ಬರುವ ನಿರೀಕ್ಷೆಯಿದೆ.
ಸೈನಿಕ ಲಕ್ಷ್ಮಣ ಗೌರಣ್ಣವ ಪಾರ್ಥಿವ ಶರೀರ ಇಂದು ಹುಟ್ಟೂರಿಗೆ ಬರುವ ಸಾಧ್ಯತೆ ಹೆಚ್ಚಿದ್ದು, ಸಂಜೆಯೇ ಯೋಧನ ಅಂತ್ಯಸಂಸ್ಕಾರ ಮಾಡಲು ಸಿದ್ಧತೆ ನಡೆಯುತ್ತಿದೆ. ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಮಾಹಿತಿ ನೀಡಿದ್ದಾರೆ. ಸೈನಿಕ ಲಕ್ಷ್ಮಣ ಗೌರಣ್ಣವ ಕಳೆದ 12 ವರ್ಷಗಳಿಂದ ಬಿಎಸ್ಎಫ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚೆಗೆ ಅಂದರೆ ಎರಡು ತಿಂಗಳು ಹಿಂದಷ್ಟೆ ಊರಿಗೆ ಬಂದಿದ್ದರು.
ಸೇನೆಯ ಸಮವಸ್ತ್ರ ಧರಿಸಿ ಸ್ವಾಗತಿಸಿದ 5 ವರ್ಷದ ಮಗ ಬೆಳಗಾವಿ: ನಾಗಾಲ್ಯಾಂಡ್ನಲ್ಲಿ ಕರ್ತವ್ಯ ನಿರತರಾಗಿದ್ದ ವೇಳೆ ಅಪಘಾತವಾಗಿ ಮೃತಪಟ್ಟಿದ್ದ ಯೋಧನ ಪಾರ್ಥಿವ ಶರೀರ ಜುಲೈ 13ಕ್ಕೆ ಸ್ವಗ್ರಾಮಕ್ಕೆ ಆಗಮಿಸಿತ್ತು. ತಂದೆಯ ಪಾರ್ಥಿವ ಶರೀರವನ್ನು ಯೊಧನ ಮಗ ಸೇನೆಯ ಸಮವಸ್ತ್ರ ಧರಿಸಿ ಸ್ವಾಗತಿಸಿದ್ದ. ಜಿಲ್ಲೆಯ ಗೋಕಾಕ್ ತಾಲೂಕಿನ ಶಿವಾಪುರ ಗ್ರಾಮದ ಮಂಜುನಾಥ ಗೌಡನ್ನವರ ಮೃತ ಯೋಧ. ಗ್ರಾಮಕ್ಕೆ ಪಾರ್ಥಿವ ಶರೀರ ಬರುತ್ತಿದ್ದಂತೆ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದ್ದು, ಪಾರ್ಥಿವ ಶರೀರ ಬರುವ ದಾರಿಯಲ್ಲಿ ಹೂವನ್ನು ಹಾಕಿ, ಕೈಯಲ್ಲಿ ದೇಶದ ಭಾವುಟ ಹಿಡಿದು ಊರಿನ ಜನ ಸ್ವಾಗತಿಸಿದ್ದರು.
ಇದನ್ನೂ ಓದಿ
ಅಪ್ಪನ ಪಾರ್ಥಿವ ಶರೀರವನ್ನು ಸೇನೆಯ ಸಮವಸ್ತ್ರ ಧರಿಸಿ ಸ್ವಾಗತಿಸಿದ 5 ವರ್ಷದ ಮಗ
ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಭಯೋತ್ಪಾದಕರ ದಾಳಿ: ಸೇನಾ ಕ್ಯಾಪ್ಟನ್ ಸೇರಿ 11 ಯೋಧರ ಸಾವು
(BSF soldier in has died in Chhattisgarh and funeral takes place today in Gadag)