ಹಿಮಾಚಲ ಪ್ರದೇಶ ವಿಧಾನಸಭೆಯ ಮುಖ್ಯ ಗೇಟ್​​ನಲ್ಲಿ ಖಲಿಸ್ತಾನ್ ಧ್ವಜ; ಕಠಿಣ ಕ್ರಮ ಕೈಗೊಳ್ಳುವುದಾಗಿ ಸಿಎಂ ಎಚ್ಚರಿಕೆ

| Updated By: ರಶ್ಮಿ ಕಲ್ಲಕಟ್ಟ

Updated on: May 08, 2022 | 1:43 PM

"ಧರ್ಮಶಾಲಾ ವಿಧಾನಸಭೆಯ ಆವರಣದ ಗೇಟ್‌ನಲ್ಲಿ ಖಲಿಸ್ತಾನ್ ಧ್ವಜಗಳನ್ನು ಕಟ್ಟಿರುವ ಹೇಡಿತನದ ಕೃತ್ಯವನ್ನು ಖಂಡಿಸಿ" ಎಂದು ಧ್ವಜಗಳು ಪತ್ತೆಯಾದ ಕೂಡಲೇ ಠಾಕೂರ್ ಶುಕ್ರವಾರ ಟ್ವೀಟ್ ಮಾಡಿದ್ದಾರೆ.

ಹಿಮಾಚಲ ಪ್ರದೇಶ ವಿಧಾನಸಭೆಯ ಮುಖ್ಯ ಗೇಟ್​​ನಲ್ಲಿ ಖಲಿಸ್ತಾನ್ ಧ್ವಜ; ಕಠಿಣ ಕ್ರಮ ಕೈಗೊಳ್ಳುವುದಾಗಿ ಸಿಎಂ ಎಚ್ಚರಿಕೆ
ಹಿಮಾಚಲ ಪ್ರದೇಶ ವಿಧಾನಸಭೆ
Follow us on

ಧರ್ಮಶಾಲಾ:  ಶುಕ್ರವಾರ ಬೆಳಗ್ಗೆ ಧರ್ಮಶಾಲಾದಲ್ಲಿ ಹಿಮಾಚಲ ಪ್ರದೇಶ (Himachal Pradesh) ವಿಧಾನಸಭೆಯ ಮುಖ್ಯ ಗೇಟ್ ಮತ್ತು ಗಡಿ ಗೋಡೆಗೆ ಮೂರು ಖಲಿಸ್ತಾನ್ (Khalistan )ಧ್ವಜಗಳನ್ನು ಕಟ್ಟಿರುವುದು ಕಂಡುಬಂದಿದ್ದು, ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ (Jairam Thakur) ಹೇಳಿದ್ದಾರೆ. “ಧರ್ಮಶಾಲಾ ವಿಧಾನಸಭೆಯ ಆವರಣದ ಗೇಟ್‌ನಲ್ಲಿ ಖಲಿಸ್ತಾನ್ ಧ್ವಜಗಳನ್ನು ಕಟ್ಟಿರುವ  ಹೇಡಿತನದ ಕೃತ್ಯವನ್ನು ಖಂಡಿಸಿ” ಎಂದು ಧ್ವಜಗಳು ಪತ್ತೆಯಾಗಿರುವ ಬಗ್ಗೆ ಠಾಕೂರ್ ಶುಕ್ರವಾರ ಟ್ವೀಟ್ ಮಾಡಿದ್ದಾರೆ. “ಈ ಅಸೆಂಬ್ಲಿಯಲ್ಲಿ ಚಳಿಗಾಲದ ಅಧಿವೇಶನವನ್ನು ಮಾತ್ರ ನಡೆಸಲಾಗುತ್ತದೆ, ಆದ್ದರಿಂದ ಆ ಸಮಯದಲ್ಲಿ ಇಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆಗಳ ಅವಶ್ಯಕತೆಯಿದೆ. ಘಟನೆಯ ಬಗ್ಗೆ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಸಿಎಂ ಹೇಳಿದ್ದಾರೆ. ಹಿಮಾಚಲ ಪ್ರದೇಶ ತೆರೆದ ಸ್ಥಳಗಳ (ಅಂದಗೆಡಿಸುವುದನ್ನು ತಡೆಗಟ್ಟುವಿಕೆ) ಕಾಯಿದೆ, 1985 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗುವುದು ಎಂದು ಧರ್ಮಶಾಲಾ ಎಸ್ ಡಿಎಂ ಶಿಲ್ಪಿ ಬೀಕ್ತಾ ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ. “ಇದು ಹೆಚ್ಚು ಜಾಗರೂಕತೆಯಿಂದ ಕೆಲಸ ಮಾಡಲು ನಮಗೆ ಎಚ್ಚರಿಕೆಯ ಕರೆ” ಎಂದು ಅವರು ಹೇಳಿದರು.


ಖಲಿಸ್ತಾನ್ ಪರ ಗ್ರಾಫಿಟಿಗಳನ್ನು   ಗೋಡೆಗಳಲ್ಲಿ ಚಿತ್ರಿಸಲಾಗಿದೆ. ಪಂಜಾಬ್‌ನ ಪ್ರವಾಸಿಗರು ಭಾಗಿಯಾಗಿರುವ ಶಂಕೆ ಇದೆ ಎಂದು ರಾಜ್ಯ ಪೊಲೀಸರು ತಿಳಿಸಿದ್ದಾರೆ. ನೆರೆಯ ರಾಜ್ಯಗಳಾದ ಜಮ್ಮು ಮತ್ತು ಕಾಶ್ಮೀರ, ಲಡಾಖ್, ಉತ್ತರಾಖಂಡ, ಹರ್ಯಾಣ ಮತ್ತು ಪಂಜಾಬ್‌ನ ಗಡಿಯಲ್ಲಿ ಭದ್ರತೆಯನ್ನು ಪರಿಶೀಲಿಸಲಾಗುವುದು ಎಂದು  ಮುಖ್ಯಮಂತ್ರಿ ಠಾಕೂರ್ ಹೇಳಿದ್ದಾರೆ.

ಏಪ್ರಿಲ್ 26 ರಂದು ನೀಡಲಾದ ಗುಪ್ತಚರ ಎಚ್ಚರಿಕೆಯು ಇಂತಹ ಘಟನೆಯ ಬಗ್ಗೆ ಎಚ್ಚರಿಸಿದೆ ಎಂದು ಮೂಲಗಳು ತಿಳಿಸಿವೆ. ಶಿಮ್ಲಾದಲ್ಲಿ ಭಿಂದ್ರನ್‌ವಾಲೆ ಮತ್ತು ಖಲಿಸ್ತಾನ ಧ್ವಜವನ್ನು ಹಾರಿಸಲಾಗುವುದು ಎಂದು ಸಿಖ್ಸ್ಸ್ ಫಾರ್ ಜಸ್ಟೀಸ್ ಮುಖ್ಯಸ್ಥ ಗುರುಪತ್‌ವಂತ್ ಸಿಂಗ್ ಪನ್ನು ಅವರು ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗೆ ಪತ್ರವೊಂದನ್ನು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಿಮಾಚಲ ಪ್ರದೇಶವು ಭಿಂದ್ರನ್‌ವಾಲೆ ಮತ್ತು ಖಲಿಸ್ತಾನಿ ಧ್ವಜಗಳನ್ನು ಹೊತ್ತ ವಾಹನಗಳನ್ನು ನಿಷೇಧಿಸಿತ್ತು. ಇದು ಎಸ್ಎಫ್​​ಜೆಯನ್ನು ಪ್ರಚೋದಿಸಿತು. ಮಾರ್ಚ್ 29 ರಂದು ಖಲಿಸ್ತಾನಿ ಧ್ವಜಾರೋಹಣ ಮಾಡುವುದಾಗಿ ಸಂಘಟನೆ ಘೋಷಿಸಿತ್ತು. ಆದರೆ ಭಾರೀ ಭದ್ರತೆಯಿಂದಾಗಿ ಅದು ಸಾಧ್ಯವಾಗಲಿಲ್ಲ.

ಧ್ವಜಗಳನ್ನು ತಡರಾತ್ರಿ ಅಥವಾ ಮುಂಜಾನೆ ಹಾರಿಸಲಾಗಿದೆ. ನಂತರ ತೆಗೆದುಹಾಕಲಾಗಿದೆ. ಇದು ಪಂಜಾಬ್‌ನ ಕೆಲವು ಪ್ರವಾಸಿಗರ ಕೃತ್ಯವಾಗಿರಬಹುದು. ನಾವು ಇಂದು ಪ್ರಕರಣವನ್ನು ದಾಖಲಿಸಲಿದ್ದೇವೆ ಎಂದು ಕಂಗ್ರಾ ಎಸ್​​ಪಿ ಕುಶಾಲ್ ಶರ್ಮಾ ಎಎನ್ಐಗೆ ತಿಳಿಸಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

 

Published On - 1:36 pm, Sun, 8 May 22