ಪುಲ್ವಾಮಾದಲ್ಲಿ ಭದ್ರತಾ ಪಡೆಗಳ ಭರ್ಜರಿ ಬೇಟೆ; ಲಷ್ಕರ್​ ಇ ತೊಯ್ಬಾದ ಮೂವರು ಉಗ್ರರ ಹತ್ಯೆ

| Updated By: Lakshmi Hegde

Updated on: Apr 24, 2022 | 6:46 PM

ಜಮ್ಮು-ಕಾಶ್ಮೀರದ ಮಿರ್ಹಾಮಾ ಎಂಬಲ್ಲಿ ನಡೆದ ಎನ್​ಕೌಂಟರ್​​ನಲ್ಲಿ ಪಾಕಿಸ್ತಾನದ ಜೈಶ್​ ಇ ಮೊಹಮ್ಮದ್​ ಭಯೋತ್ಪಾದಕ ಸಂಘಟನೆಗೆ ಸೇರಿದ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದವು

ಪುಲ್ವಾಮಾದಲ್ಲಿ ಭದ್ರತಾ ಪಡೆಗಳ ಭರ್ಜರಿ ಬೇಟೆ; ಲಷ್ಕರ್​ ಇ ತೊಯ್ಬಾದ ಮೂವರು ಉಗ್ರರ ಹತ್ಯೆ
ಸಾಂದರ್ಭಿಕ ಚಿತ್ರ
Follow us on

ಲಷ್ಕರ್​ ಇ ತೊಯ್ಬಾ (ಎಲ್​ಇಟಿ) ಉಗ್ರ ಸಂಘಟನೆಗೆ ಸೇರಿದ ಮೂವರು ಭಯೋತ್ಪಾದಕರನ್ನು ಇಂದು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿರುವ ಪಾಹೂ ಪ್ರದೇಶದಲ್ಲಿ ಭದ್ರತಾ ಪಡೆಗಳ ಸಿಬ್ಬಂದಿ ಕೊಂದುಹಾಕಿದ್ದಾರೆ.  ಇಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ್ದವು. ಉಗ್ರರನ್ನು ಬಂಧಿಸುವ ಪ್ರಯತ್ನ ನಡೆಯಿತು. ಆದರೆ ರಕ್ಷಣಾ ಪಡೆಗಳು ಸುತ್ತುವರಿದ್ದನ್ನು ನೋಡಿದ ಉಗ್ರರು ಗುಂಡು ಹಾರಿಸಲು ಶುರುಮಾಡಿದರು. ಪ್ರತಿರೋಧ ಒಡ್ಡುವ ಸಲುವಾಗಿ ನಾವೂ ಕೂಡ ಗುಂಡಿನ ದಾಳಿ ನಡೆಸಿದೆವು. ಇದರಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ. 

ಶನಿವಾರ ಜಮ್ಮು-ಕಾಶ್ಮೀರದ ಮಿರ್ಹಾಮಾ ಎಂಬಲ್ಲಿ ನಡೆದ ಎನ್​ಕೌಂಟರ್​​ನಲ್ಲಿ ಪಾಕಿಸ್ತಾನದ ಜೈಶ್​ ಇ ಮೊಹಮ್ಮದ್​ ಭಯೋತ್ಪಾದಕ ಸಂಘಟನೆಗೆ ಸೇರಿದ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದವು. ಮೃತರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು.

ಇದನ್ನೂ ಓದಿ: ನಾನು ನೊಂದ ಸಮಾಜದ ಪರವಾಗಿದ್ದೇನೆ ಎಂದು ಹೇಳಲು ಇಲ್ಲಿಗೆ ಬಂದಿದ್ದೇನೆ; ಡಿ.ಕೆ. ಶಿವಕುಮಾರ