12 ವರ್ಷದ ಬಾಲಕನ ಕತ್ತು ಸೀಳಿದ ಗಾಳಿಪಟದ ದಾರ, ಪ್ರತ್ಯೇಕ ಘಟನೆಯಲ್ಲಿ ಐವರಿಗೆ ಗಾಯ

|

Updated on: Jan 16, 2024 | 2:08 PM

ಗಾಳಿಪಟದ ಮಾಂಜಾ ದಾರ 12 ವರ್ಷದ ಬಾಲಕನ ಕತ್ತು ಸೀಳಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ. ಜಿಲ್ಲೆಯಲ್ಲಿ ಇದೇ ರೀತಿಯ ಘಟನೆಗಳಲ್ಲಿ ಐವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ. 5ನೇ ತರಗತಿಯ ವಿದ್ಯಾರ್ಥಿ ಸುರೇಂದ್ರ ಭೀಲ್ ಸೋಮವಾರ ಸಂಜೆ ತನ್ನ ಸ್ನೇಹಿತರೊಂದಿಗೆ ತನ್ನ ಮನೆಯ ಮೇಲ್ಛಾವಣಿಯಲ್ಲಿ ಗಾಳಿಪಟ ಹಾರಿಸುತ್ತಿದ್ದಾಗ ಈ ಘಟನೆ ನಡೆದಿದೆ.

12 ವರ್ಷದ ಬಾಲಕನ ಕತ್ತು ಸೀಳಿದ ಗಾಳಿಪಟದ ದಾರ, ಪ್ರತ್ಯೇಕ ಘಟನೆಯಲ್ಲಿ ಐವರಿಗೆ ಗಾಯ
ಮಾಂಜಾ ದಾರ
Follow us on

ಗಾಳಿಪಟ(Kite)ದ ಮಾಂಜಾ ದಾರ 12 ವರ್ಷದ ಬಾಲಕನ ಕತ್ತು ಸೀಳಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ. ಜಿಲ್ಲೆಯಲ್ಲಿ ಇದೇ ರೀತಿಯ ಘಟನೆಗಳಲ್ಲಿ ಐವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ. 5ನೇ ತರಗತಿಯ ವಿದ್ಯಾರ್ಥಿ ಸುರೇಂದ್ರ ಭೀಲ್ ಸೋಮವಾರ ಸಂಜೆ ತನ್ನ ಸ್ನೇಹಿತರೊಂದಿಗೆ ತನ್ನ ಮನೆಯ ಮೇಲ್ಛಾವಣಿಯಲ್ಲಿ ಗಾಳಿಪಟ ಹಾರಿಸುತ್ತಿದ್ದಾಗ ಈ ಘಟನೆ ನಡೆದಿದೆ.

ಕೂಡಲೇ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ ಎಂದು ಸಹಾಯಕ ಸಬ್ ಇನ್ಸ್‌ಪೆಕ್ಟರ್ ಭನ್ವರ್ ಸಿಂಗ್ ತಿಳಿಸಿದ್ದಾರೆ. ಮಕರ ಸಂಕ್ರಾಂತಿ ಸಂದರ್ಭದಲ್ಲಿ ನಿಷೇಧಿತ ಗಾಳಿಪಟದ ದಾರದಿಂದ 60 ವರ್ಷದ ವ್ಯಕ್ತಿ ಸೇರಿದಂತೆ ಇತರ ಐವರಿಗೆ ಗಂಭೀರ ಗಾಯಗಳಾಗಿವೆ.

ರಾಮ್‌ಲಾಲ್ ಮೀನಾ ಎಂದು ಗುರುತಿಸಲಾದ ವ್ಯಕ್ತಿ ಭಾನುವಾರ ಮೋಟಾರ್‌ಸೈಕಲ್‌ನಲ್ಲಿ ಮನೆಗೆ ಮರಳುತ್ತಿದ್ದಾಗ ಸಾತೂರ್ ಗ್ರಾಮದಲ್ಲಿ ಗಾಳಿಪಟದ ದಾರವು ಕುತ್ತಿಗೆಯನ್ನು ಸೀಳಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಮತ್ತಷ್ಟು ಓದಿ: ಮಧ್ಯಪ್ರದೇಶ: ಕತ್ತು ಸೀಳಿದ ಗಾಳಿಪಟ ದಾರ, 7 ವರ್ಷದ ಬಾಲಕ ಸಾವು

ಮಕರ ಸಂಕ್ರಾಂತಿ ಹಬ್ಬದ ಮುನ್ನ ಕೋಟಾ, ಬಂಡಿ ಮತ್ತು ಝಾಲಾವರ್ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಗಾಜಿನ ಲೇಪಿತ ದಾರ ಅಥವಾ ಚೈನೀಸ್ ದಾರಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರು. ಮಕರ ಸಂಕ್ರಾಂತಿ ಎಂದೂ ಕರೆಯಲ್ಪಡುವ ಉತ್ತರಾಯಣ ಹಬ್ಬವು ಸಾಂಪ್ರದಾಯಿಕವಾಗಿ ಗಾಳಿಪಟದೊಂದಿಗೆ ಸಂಬಂಧಿಸಿದೆ.

ಗಾಯಗೊಂಡ ಪಕ್ಷಿಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುವ ಎನ್‌ಜಿಒ ಅಧ್ಯಕ್ಷರ ಪ್ರಕಾರ, ಹರಿತವಾದ ಗಾಳಿಪಟದ ತಂತಿಗಳಿಂದ ಕೋಟಾ ನಗರದಲ್ಲಿ ಏಳು ಪಕ್ಷಿಗಳು ಸತ್ತಿವೆ ಮತ್ತು 34  ಪಕ್ಷಿಗಳಿಗೆ ಗಾಯಗಳಾಗಿವೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ