Modi in Kerala: ರಾಜ್ಯದ ಜನರಿಗೆ ಮೋದಿ ಬಗ್ಗೆ ಮೆಚ್ಚುಗೆ ಇದೆ: ಕೇರಳದ ಬಿಷಪ್

ನಾವು ಹೇಳುವುದನ್ನು ಪ್ರಧಾನಮಂತ್ರಿಯವರು ಗಮನವಿಟ್ಟು ಆಲಿಸಿದ್ದು ಎಲ್ಲ ವಿಶ್ವಾಸಿಗಳಿಗೆ ರಕ್ಷಣೆ ನೀಡುವುದಾಗಿ ಭರವಸೆ ನೀಡಿದರು. ಕೇರಳದ ಜನರು ಪ್ರಧಾನಿ ಮೋದಿಯವರನ್ನು ಮೆಚ್ಚುತ್ತಿದ್ದಾರೆ. ನಾವು ಮತ್ತಷ್ಟು ಅಭಿವೃದ್ಧಿಯನ್ನು ಎದುರು ನೋಡುತ್ತಿದ್ದೇವೆ ಎಂದು ಅವರು ಹೇಳಿದರು.

Modi in Kerala: ರಾಜ್ಯದ ಜನರಿಗೆ ಮೋದಿ ಬಗ್ಗೆ ಮೆಚ್ಚುಗೆ ಇದೆ: ಕೇರಳದ ಬಿಷಪ್
ಕೇರಳದ ಕ್ರೈಸ್ತ ನಾಯಕರನ್ನು ಭೇಟಿ ಮಾಡಿದ ಮೋದಿ
ರಶ್ಮಿ ಕಲ್ಲಕಟ್ಟ

Updated on: Apr 25, 2023 | 8:30 PM

ಮುಖ್ಯಾಂಶಗಳು

  • ವಿವಿಧ ಕ್ರಿಶ್ಚಿಯನ್ ಪಂಥಗಳ ಏಳು ಬಿಷಪ್‌ಗಳೊಂದಿಗಿನ ಪ್ರಧಾನ ಮಂತ್ರಿಯ ಸಭೆ ನಡೆಸಿದ್ದಾರೆ
  • ಕೇರಳದಲ್ಲಿ ಕ್ರಿಶ್ಚಿಯನ್ನರು ಶೇಕಡಾ 18 ರಷ್ಟು ಜನಸಂಖ್ಯೆಯನ್ನು ಹೊಂದಿದ್ದಾರೆ
  • ಉತ್ತರ ಭಾರತದಲ್ಲಿ ನಮ್ಮ ಮಿಷನ್ ಕಾರ್ಯಗಳ ಬಗ್ಗೆ ನಮಗೆ ಇರುವ ಆತಂಕಗಳನ್ನು ಹಂಚಿಕೊಂಡಿದ್ದೇವೆ ಎಂದ ಬಿಷಪ್

ಪ್ರಧಾನಿ ನರೇಂದ್ರ ಮೋದಿ (Narendra Modi) ಸೋಮವಾರ ಕೇರಳದ (Kerala) ಕ್ರೈಸ್ತ ನಾಯಕರನ್ನು ಭೇಟಿ ಮಾಡಿದ್ದಾರೆ. ಭೇಟಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿರೋ-ಮಲಬಾರ್ ಚರ್ಚ್‌ನ ಆರ್ಚ್‌ಬಿಷಪ್ ಕಾರ್ಡಿನಲ್ ಜಾರ್ಜ್ ಅಲೆಂಚೇರಿ (Cardinal George Allencherry) ಕೇರಳದ ಜನರು ಪ್ರಧಾನಿ ಮೋದಿಯನ್ನು ಮೆಚ್ಚುತ್ತಿದ್ದಾರೆ ಮತ್ತು ಅಭಿವೃದ್ಧಿಯನ್ನು ಎದುರು ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ. ವಿವಿಧ ಕ್ರಿಶ್ಚಿಯನ್ ಪಂಥಗಳ ಏಳು ಬಿಷಪ್‌ಗಳೊಂದಿಗಿನ ಪ್ರಧಾನ ಮಂತ್ರಿ ಸಭೆ ನಡೆಸಿದ್ದಾರೆ. ಕೇರಳದಲ್ಲಿ ಕ್ರಿಶ್ಚಿಯನ್ನರು ಶೇಕಡಾ 18 ರಷ್ಟು ಜನಸಂಖ್ಯೆಯನ್ನು ಹೊಂದಿದ್ದಾರೆ, ಅಲ್ಲಿ ಬಿಜೆಪಿಯು ಚುನಾವಣಾ ಕ್ಷೇತ್ರದಲ್ಲಿ ಹೆಚ್ಚು ಮುನ್ನಡೆ ಸಾಧಿಸಿಲ್ಲ. ಆದರೆ ಕ್ರಿಶ್ಚಿಯನ್ ಜನಸಂಖ್ಯೆ ಮತ್ತು ಯುವಕರನ್ನು ಸಕ್ರಿಯವಾಗಿ ತಲುಪುವ ಮೂಲಕ, 2024 ರ ರಾಷ್ಟ್ರೀಯ ಚುನಾವಣೆಯಲ್ಲಿ ಇಲ್ಲಿನ ರಾಜಕೀಯ ಚಿತ್ರಣ ಬದಲಾಗಬೇಕು ಎಂದು ಬಿಜೆಪಿ ಆಶಿಸುತ್ತಿದೆ.

ನಿನ್ನೆ ಸಂಜೆ ಪ್ರಧಾನ ಮಂತ್ರಿಯನ್ನು ಭೇಟಿಯಾದ ಬಿಷಪ್‌ಗಳ ಪೈಕಿ ಸಿರೋ-ಮಲಬಾರ್ ಚರ್ಚ್‌ನ ಆರ್ಚ್‌ಬಿಷಪ್ ಕಾರ್ಡಿನಲ್ ಜಾರ್ಜ್ ಅಲೆಂಚೆರಿ ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಉತ್ತರ ಭಾರತದಲ್ಲಿ ನಮ್ಮ ಮಿಷನ್ ಕಾರ್ಯಗಳ ಬಗ್ಗೆ ನಮಗೆ ಇರುವ ಆತಂಕಗಳನ್ನು ಹಂಚಿಕೊಂಡಿದ್ದಾರೆ. ದಲಿತ ಕ್ರೈಸ್ತರು, ಬಡವರು ಮತ್ತು ಅಂಚಿನಲ್ಲಿರುವವರ ಹಕ್ಕುಗಳ ಬಗ್ಗೆಯೂ ಚರ್ಚೆಗಳು ನಡೆದವು. ನಾವು ರೈತರು, ಮೀನುಗಾರರು ಮತ್ತು ಕರಾವಳಿ ಪ್ರದೇಶದ ಜನರ ಸಂಕಷ್ಟಗಳನ್ನು ಹೇಳಿದ್ದೇವೆ ಎಂದು ಅಲೆಂಚೆರಿ ಹೇಳಿದ್ದಾರೆ.

ನಾವು ಹೇಳುವುದನ್ನು ಪ್ರಧಾನಮಂತ್ರಿಯವರು ಗಮನವಿಟ್ಟು ಆಲಿಸಿದ್ದು ಎಲ್ಲ ವಿಶ್ವಾಸಿಗಳಿಗೆ ರಕ್ಷಣೆ ನೀಡುವುದಾಗಿ ಭರವಸೆ ನೀಡಿದರು. ಕೇರಳದ ಜನರು ಪ್ರಧಾನಿ ಮೋದಿಯವರನ್ನು ಮೆಚ್ಚುತ್ತಿದ್ದಾರೆ. ನಾವು ಮತ್ತಷ್ಟು ಅಭಿವೃದ್ಧಿಯನ್ನು ಎದುರು ನೋಡುತ್ತಿದ್ದೇವೆ ಎಂದು ಅವರು ಹೇಳಿದರು.

ಪಕ್ಷದ ಕೊನೆಯ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ, ಪ್ರಧಾನಿ ಮೋದಿ ಅವರು ಅಂಚಿನಲ್ಲಿರುವ ವರ್ಗಗಳು ಮತ್ತು ಅಲ್ಪಸಂಖ್ಯಾತರನ್ನು ತಲುಪಲು ಕರೆ ನೀಡಿದ್ದರು. ಈಸ್ಟರ್ ದಿನದಂದು ಅವರು ದೆಹಲಿಯ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್‌ಗೆ ಭೇಟಿ ನೀಡಿ ಸಮುದಾಯದೊಂದಿಗೆ ಸಂವಾದ ನಡೆಸಿದರು.

ಇದನ್ನೂ ಓದಿ: Delhi liquor policy scam: ದೆಹಲಿ ಅಬಕಾರಿ ನೀತಿ ಹಗರಣ: ಮೊದಲ ಬಾರಿ ಸಿಬಿಐ ಆರೋಪಪಟ್ಟಿಯಲ್ಲಿ ಮನೀಶ್ ಸಿಸೋಡಿಯಾ ಹೆಸರು

ಕೇರಳದಲ್ಲಿ ಬಿಜೆಪಿ ನಾಯಕರು ಕ್ರೈಸ್ತ ಸಮುದಾಯದ ಪಾದ್ರಿಗಳು ಮತ್ತು ಮುಖಂಡರನ್ನು ಅವರ ಮನೆಗಳಲ್ಲಿ ಭೇಟಿ ಮಾಡಿದರು. ಮಲಯಾಳಂ ಹೊಸ ವರ್ಷದ ದಿನವಾದ ವಿಷುವಿನಂದ ಬಿಜೆಪಿ ಕಾರ್ಯಕರ್ತರು ಬಿಷಪ್‌ಗಳು ಮತ್ತು ಇತರ ಕ್ರಿಶ್ಚಿಯನ್ ನಾಯಕರಿಗೆ ತಮ್ಮ ಮನೆಯಲ್ಲಿ ಉಪಹಾರವನ್ನು ಏರ್ಪಡಿಸಿದ್ದರು. ಏತನ್ಮಧ್ಯೆ, ಬಿಜೆಪಿ ರಬ್ಬರ್ ಬೆಲೆಯನ್ನು ಬೆಂಬಲಿಸಿದರೆ ಕೇರಳ ಬಿಜೆಪಿ ಸಂಸದರಿಗೆ ಮತ ಚಲಾಯಿಸಬಹುದು ಎಂದು ತಲಶ್ಶೇರಿಯ ಬಿಷಪ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:38 pm, Tue, 25 April 23

ರಶ್ಮಿ ಕಲ್ಲಕಟ್ಟ

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Loading...
Unable to load recommendations.
Follow Us