ತಿರುಪತಿ: ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳ ವಿಶೇಷ ಪ್ರವೇಶ ದರ್ಶನ (SED) ಟಿಕೆಟ್ಗಳನ್ನು ಇಂದು ಬೆಳಗ್ಗೆ 9ಗಂಟೆಗೆ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡುವುದಾಗಿ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ತಿಳಿಸಿದೆ. ಇದು ಒಂದು ಟಿಕೆಟ್ಗೆ 300 ರೂಪಾಯಿ ಇರುತ್ತದೆ. ಹಾಗೇ, ಹಾಗೇ ನವೆಂಬರ್ ಕೋಟಾದ ಸರ್ವ ದರ್ಶನ ಟಿಕೆಟ್ ಸ್ಲಾಟ್ ಭಾನುವಾರ ಬೆಳಗ್ಗೆ 9ಗಂಟೆಗೆ ತೆರೆಯಲಿದ್ದು, ಭಕ್ತರು ಆನ್ಲೈನ್ ಮೂಲಕ ಬುಕಿಂಗ್ ಮಾಡಬಹುದು.
ಟಿಟಿಡಿ ಟಿಕೆಟ್ಗಳು ಬಿಡುಗಡೆಯಾಗುವ ಬಗ್ಗೆ ಮಾಹಿತಿ ನೀಡಿದ್ದರೂ, ಎಷ್ಟು ಟಿಕೆಟ್ಗಳು ಬಿಡುಗಡೆಯಾಗುತ್ತವೆ ಎಂದು ನಿಖರ ಸಂಖ್ಯೆ ಹೇಳಿಲ್ಲ. ಹಾಗಾಗಿ ಆನ್ಲೈನ್ ಬುಕ್ಕಿಂಗ್ ಮಾಡುವ ಭಕ್ತರಿಗೆ ಸಹಜವಾಗಿಯೇ ಗೊಂದಲ ಉಂಟಾಗಿದೆ. ದೇವರ ದರ್ಶನಕ್ಕೆ ಬರುವ ಭಕ್ತರು ಎರಡೂ ಡೋಸ್ ಕೊವಿಡ್ 19 ಲಸಿಕೆ ಪಡೆದಿರುವ ಪ್ರಮಾಣಪತ್ರ, ಕೊವಿಡ್ 19 ನೆಗೆಟಿವ್ ವರದಿ ತರುವುದು ಕಡ್ಡಾಯ ಎಂಬ ನಿಯಮವನ್ನು ಈಗಾಗಲೇ ಟಿಟಿಡಿ ಜಾರಿಗೊಳಿಸಿದೆ. ಈ ಮಧ್ಯೆ ದೇಗುಲಕ್ಕೆ ಭೇಟಿ ನೀಡಲು ಹೇರಿರುವ ಭಕ್ತರ ಸಂಖ್ಯಾ ಮಿತಿಯನ್ನು ಹೆಚ್ಚುಗೊಳಿಸಬೇಕು ಎಂಬ ಒತ್ತಡವೂ ಅದರ ಮೇಲೆ ಜಾಸ್ತಿಯಾಗುತ್ತಿದೆ. ಹಾಗಾಗಿ ಈ ಬಾರಿ ಕೋಟಾದಲ್ಲಿ ಜಾಸ್ತಿ ಟಿಕೆಟ್ ಬಿಡುಗಡೆ ಮಾಡಬಹುದಾ ಎಂಬ ಕುತೂಹಲವೂ ಸಹಜವಾಗಿಯೇ ಎದ್ದಿದೆ. ಸದ್ಯ ಒಂದು ದಿನಕ್ಕೆ 30,000ಕ್ಕಿಂತಲೂ ಕಡಿಮೆ ಭಕ್ತರು ತಿರುಮಲ ದೇವರ ದರ್ಶನಕ್ಕೆ ಆಗಮಿಸಬಹುದಾಗಿದೆ. ಕೊವಿಡ್ 19 ಸಾಂಕ್ರಾಮಿಕಕ್ಕೂ ಪೂರ್ವ ಈ ದೇವಾಲಯದಲ್ಲಿ ಒಂದು ದಿನಕ್ಕೆ 79-80 ಸಾವಿರ ಯಾತ್ರಾರ್ಥಿಗಳಿಗೆ ಅವಕಾಶ ಇತ್ತು.
ಇದನ್ನೂ ಓದಿ: Raayan Raj Sarja: ಚಿರು ಪುತ್ರ ರಾಯನ್ ರಾಜ್ ಸರ್ಜಾ ಜನ್ಮದಿನ: ಮೇಘನಾ ರಾಜ್ ಮನೆಯಲ್ಲಿ ಸಂಭ್ರಮವೋ ಸಂಭ್ರಮ