AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Raayan Raj Sarja: ಚಿರು ಪುತ್ರ ರಾಯನ್​ ರಾಜ್​ ಸರ್ಜಾ ಜನ್ಮದಿನ: ಮೇಘನಾ ರಾಜ್​ ಮನೆಯಲ್ಲಿ ಸಂಭ್ರಮವೋ ಸಂಭ್ರಮ

Happy Birthday Raayan Raj Sarja: ರಾಯನ್​ ರಾಜ್​ ಸರ್ಜಾ ಜನ್ಮದಿನವನ್ನು ಮೇಘನಾ ರಾಜ್​ ಸಖತ್​ ಖುಷಿಯಿಂದ ಆಚರಿಸುತ್ತಿದ್ದಾರೆ. ಮಗನ ಜೊತೆಗಿರುವ ಕೆಲವು ಫೋಟೋಗಳನ್ನು ಹಂಚಿಕೊಂಡು ಅವರು ವಿಶ್​ ಮಾಡಿದ್ದಾರೆ. ಅಭಿಮಾನಿಗಳಿಂದಲೂ ಶುಭಾಶಯಗಳ ಮಳೆ ಸುರಿಸಲಾಗುತ್ತಿದೆ.

Raayan Raj Sarja: ಚಿರು ಪುತ್ರ ರಾಯನ್​ ರಾಜ್​ ಸರ್ಜಾ ಜನ್ಮದಿನ: ಮೇಘನಾ ರಾಜ್​ ಮನೆಯಲ್ಲಿ ಸಂಭ್ರಮವೋ ಸಂಭ್ರಮ
ರಾಯನ್ ರಾಜ್ ಸರ್ಜಾ, ಮೇಘನಾ ರಾಜ್
TV9 Web
| Updated By: ಮದನ್​ ಕುಮಾರ್​|

Updated on:Oct 22, 2021 | 9:52 AM

Share

ನಟಿ ಮೇಘನಾ ರಾಜ್​ ಅವರ ಖುಷಿಗೆ ಪಾರವೇ ಇಲ್ಲ. ಈ ಅಪರಿಮಿತ ಖುಷಿಗೆ ಕಾರಣ ಅವರ ಪುತ್ರ ರಾಯನ್​ ರಾಜ್​ ಸರ್ಜಾ ಹುಟ್ಟುಹಬ್ಬ. ಚಿರಂಜೀವಿ ಸರ್ಜಾ-ಮೇಘನಾ ರಾಜ್​ ಮಗ ರಾಯನ್​ಗೆ ಇಂದು (ಅ.22) ಮೊದಲ ವರ್ಷದ ಜನ್ಮದಿನ. ಈ ಸಂಭ್ರಮದಲ್ಲಿ ಅವರ ಇಡೀ ಕುಟುಂಬ ಮುಳುಗೇಳುತ್ತಿದೆ. ಒಂದು ವರ್ಷ ತುಂಬಿರುವ ಕಂದನಿಗೆ ಎಲ್ಲರಿಂದಲೂ ಶುಭಾಶಯಗಳು, ಉಡುಗೊರೆಗಳು ಹರಿದುಬರುತ್ತಿವೆ. ಚಿರಂಜೀವಿ ಸರ್ಜಾ ಅಭಿಮಾನಿಗಳು ರಾಯನ್​ ಫೋಟೋವನ್ನು ಶೇರ್​ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ.

ಅ.22, ಈ ದಿನ ಮೇಘನಾ ರಾಜ್​ ಪಾಲಿಗೆ ಅತ್ಯಮೂಲ್ಯ. ಅವರ ಬಾಳಿನಲ್ಲಿ ಮತ್ತೆ ನಗು ಅರಳಿದ ದಿನವದು. ರಾಯನ್​ ರಾಜ್​ ಸರ್ಜಾ ಆಗಮನದಿಂದ ಅವರ ಬದುಕು ಹೊಸ ಅರ್ಥ ಪಡೆದುಕೊಂಡಿತು. ಪತಿಯನ್ನು ಕಳೆದುಕೊಂಡಿದ್ದ ಮೇಘನಾ ಬದುಕಿನಲ್ಲಿ ಮತ್ತೆ ಭರವಸೆ ಮೂಡಿಸಿದ್ದೇ ರಾಯನ್​ ರಾಜ್​ ಸರ್ಜಾ. ಇಂದು ಆತನ ಜನ್ಮದಿನವನ್ನು ಅವರು ಸಖತ್​ ಖುಷಿಯಿಂದ ಆಚರಿಸುತ್ತಿದ್ದಾರೆ. ಮಗನ ಜೊತೆಗಿರುವ ಕೆಲವು ಫೋಟೋಗಳನ್ನು ಹಂಚಿಕೊಂಡು ಅವರು ವಿಶ್​ ಮಾಡಿದ್ದಾರೆ.

‘ನಮ್ಮ ಮಗು, ನಮ್ಮ ಪ್ರಪಂಚ, ನಮ್ಮ ಜಗತ್ತು, ನಮ್ಮ ಸರ್ವಸ್ವ! ಚಿರು.. ನಮ್ಮ ಪುಟಾಣಿ ರಾಜಕುಮಾರನಿಗೆ ಈಗ ಒಂದು ವರ್ಷ’ ಎಂಬ ಕ್ಯಾಪ್ಷನ್​ನೊಂದಿಗೆ ಮಗನ ಹುಟ್ಟುಹಬ್ಬದ ಸಂದೇಶವನ್ನು ಚಿರು ಜೊತೆ ಮೇಘನಾ ಹಂಚಿಕೊಂಡಿದ್ದಾರೆ. ಪನ್ನಗ ಭರಣ, ಕೃಷಿ ತಾಪಂಡ, ಅದ್ವಿತಿ ಶೆಟ್ಟಿ, ಸೋನು ಗೌಡ, ಆಶಿತಾ ಚಂದ್ರಪ್ಪ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ಪೋಸ್ಟ್​ಗೆ ಕಮೆಂಟ್​ ಮಾಡುವ ಮೂಲಕ ಚಿರು ಪುತ್ರನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

View this post on Instagram

A post shared by Meghana Raj Sarja (@megsraj)

ಅಕ್ಟೋಬರ್​ ತಿಂಗಳು ಎಂದರೆ ಮೇಘನಾ ರಾಜ್​ ಫ್ಯಾಮಿಲಿಗೆ ತುಂಬ ವಿಶೇಷ. ಯಾಕೆಂದರೆ, ಅ.17ರಂದು ಚಿರಂಜೀವಿ ಸರ್ಜಾ ಬರ್ತ್​ಡೇ. ಆ ಪ್ರಯುಕ್ತ ಅವರು ವಿಶೇಷ ಫೋಟೋಶೂಟ್​ ಮೂಲಕ ಚಿರು ನೆನಪು ಮಾಡಿಕೊಂಡಿದ್ದರು. ಇನ್ನು, ಅದೇ ದಿನ ಅವರ ಹೊಸ ಸಿನಿಮಾ ಲಾಂಚ್​ ಆಗಿದ್ದು ಕೂಡ ವಿಶೇಷವಾಗಿತ್ತು. ದೊಡ್ಡ ಗ್ಯಾಪ್​ ಬಳಿಕ ಮೇಘನಾ ರಾಜ್​ ಮತ್ತೆ ನಟನೆಗೆ ಮರಳಿದ್ದಾರೆ. ಚಿರು ಸ್ನೇಹಿತ ಪನ್ನಗ ಭರಣ ನಿರ್ಮಾಣ ಮಾಡುತ್ತಿರುವ ಈ ಚಿತ್ರದಲ್ಲಿ ಮೇಘನಾ ಮುಖ್ಯಭೂಮಿಕೆ ನಿಭಾಯಿಸುತ್ತಿದ್ದಾರೆ.

ಇದನ್ನೂ ಓದಿ:

Chiranjeevi Sarja: ಚಿರು ಹುಟ್ಟುಹಬ್ಬಕ್ಕೆ ಮೇಘನಾ ರಾಜ್​ ವಿಶೇಷ ಫೋಟೋಶೂಟ್​; ಇಲ್ಲಿದೆ ರಾಣಿ ಗೆಟಪ್​ನ ಫೋಟೋ ಆಲ್ಬಂ

Meghana Raj: 45 ವರ್ಷ ಹಳೇ ಗೊಂಬೆಗಳ ಜತೆ ರಾಯನ್​ ರಾಜ್​ ಸರ್ಜಾ; ಮೇಘನಾ ರಾಜ್-ಚಿರು ಪುತ್ರನಿಗೆ ಮೊದಲ ದಸರಾ

Published On - 9:39 am, Fri, 22 October 21

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ