ಇದೇ ಮೊದಲ ಬಾರಿಗೆ ಆಸ್ತಿ ಘೋಷಿಸಿದ TTD, ಅಬ್ಬಬ್ಬಾ…ತಿರುಪತಿ ತಿಮ್ಮಪ್ಪ ಎಷ್ಟು ಶ್ರೀಮಂತ ಗೊತ್ತಾ?

| Updated By: Digi Tech Desk

Updated on: Sep 26, 2022 | 11:50 AM

ಜಗತ್ತಿನ ಅತ್ಯಂತ ಶ್ರೀಮಂತ ಎಂಬ ಖ್ಯಾತಿ ಗಳಿಸಿರುವ ತಿರುಪತಿ ತಿಮ್ಮಪ್ಪನ ಆಸ್ತಿ ಎಷ್ಟು ಎನ್ನುವ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

ಇದೇ ಮೊದಲ ಬಾರಿಗೆ ಆಸ್ತಿ ಘೋಷಿಸಿದ TTD, ಅಬ್ಬಬ್ಬಾ...ತಿರುಪತಿ ತಿಮ್ಮಪ್ಪ ಎಷ್ಟು ಶ್ರೀಮಂತ ಗೊತ್ತಾ?
Tirupathi
Follow us on

ಹೈದರಾಬಾದ್‌: ವಿಶ್ವದ ಅತಿ ಸಿರಿವಂತ ಹಿಂದೂ ದೇವಾಲಯ ಎಂಬ ಖ್ಯಾತಿ ತಿರುಪತಿ ತಿಮ್ಮಪ್ಪನ(Tirupati Timmappa) ಪಡೆದುಕೊಂಡಿದ್ದಾನೆ. ಆದ್ರೆ, ಇದುವರೆಗೂ ತಿಮ್ಮಪ್ಪನ ಆಸ್ತಿ ಎಷ್ಟು ಎನ್ನುವ ನಿಖರವಾಗಿ ಎಲ್ಲೂ ಇಲ್ಲ. ಈ ಹಿನ್ನೆಲೆಯಲ್ಲಿ ತಿರುಪತಿ ತಿಮ್ಮಪ್ಪನ ಆಸ್ತಿ ಅಷ್ಟಿದೆ. ಇಷ್ಟಿದೆ ಅಂತೆಲ್ಲಾ ಅಂತೆ-ಕಂತೆ ಸುದ್ದಿಗಳು ಹರಿದಾಡುತ್ತಿದ್ದವು.

ಆದ್ರೆ, ಇದೀಗ, ತಿಮ್ಮಪ್ಪನ ಆಸ್ತಿ ಎಷ್ಟಿದೆ ಎನ್ನುವುದನ್ನು ಟಿಟಿಡಿ(Tirumala Tirupati Devasthanams (TTD) ಇದೇ ಮೊದಲ ಬಾರಿಗೆ ಬಹಿರಂಗಪಡಿಸಿದೆ. ದೇಗುಲದ ಒಟ್ಟು ಸ್ಥಿರಾಸ್ತಿ ಕುರಿತು ಟಿಟಿಡಿ ಶ್ವೇತಪತ್ರ ಬಿಡುಗಡೆ ಮಾಡಿದೆ.

ಹೌದು…ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬ ರಾವ್‌ ನೀಡಿದ ಮಾಹಿತಿ ಪ್ರಕಾರ, ವಿಶ್ವದ ಅತ್ಯಂತ ಶ್ರೀಮಂತ ದೇಗುಲಗಳ ಪೈಕಿ ಒಂದಾದ ತಿರುಪತಿ ತಿಮ್ಮಪ್ಪ ದೇವಾಲಯ, ಜಮೀನು ಸೇರಿದಂತೆ ಒಟ್ಟು 85,705 ಕೋಟಿ ರು. ಮೌಲ್ಯದಷ್ಟು ಸ್ಥಿರಾಸ್ತಿ ಹೊಂದಿದೆ. ಅಲ್ಲದೇ ದೇಶದ ವಿವಿಧ ಕಡೆ ಒಟ್ಟು 7123 ಎಕರೆ ಪ್ರದೇಶದಲ್ಲಿ ತಿರುಪತಿ ದೇಗುಲದ 960 ಸ್ಥಿರಾಸ್ತಿಗಳಿವೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ತಿರುಪತಿ ತಿಮ್ಮಪ್ಪನಿಗೆ ಧರ್ಮರಥ ಕೊಡುಗೆ ನೀಡಿದ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ

ದೇಗುಲ ಆಡಳಿತ ಮಂಡಳಿ ದೇಶದಲ್ಲಿ 960 ಆಸ್ತಿಗಳನ್ನು ಹೊಂದಿದೆ. ಅವುಗಳ ವ್ಯಾಪ್ತಿ 7,123 ಎಕರೆ. ಅವುಗಳ ಮಾರುಕಟ್ಟೆ ಮೌಲ್ಯ ಬರೋಬ್ಬರಿ 85,705 ಕೋಟಿ ರೂ. 1974ರಿಂದ 2014ರವರೆಗೆ ವಿವಿಧ ಕಾರಣಗಳಿಗಾಗಿ ಟಿಟಿಡಿಯ ಆಡಳಿತದ ಚುಕ್ಕಾಣಿ ಹೊಂದಿದ್ದ ಟ್ರಸ್ಟ್‌ನ ವ್ಯಕ್ತಿಗಳು ಬೇರೆ ಬೇರೆ ಸರ್ಕಾರದ ಅವಧಿಯಲ್ಲಿ 113 ಆಸ್ತಿಯನ್ನು ವಿವಿಧ ಕಾರಣಗಳಿಗಾಗಿ ವಿಲೇವಾರಿ ಮಾಡಿದ್ದಾರೆ. 2014ರಿಂದೀಚೆಗೆ ಟಿಟಿಡಿ ಆಸ್ತಿ ವಿಲೇವಾರಿ ಆಗಿಲ್ಲ ಎಂದೂ ಅವರು ಹೇಳಿದ್ದಾರೆ.

14 ಟನ್‌ ಚಿನ್ನ
ಕೇವಲ ಆಸ್ತಿ ಮಾತ್ರವಲ್ಲ ದೇಶದ ವಿವಿಧ ಸರ್ಕಾರಿ ಬ್ಯಾಂಕ್‌ಗಳಲ್ಲಿ 14 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತವನ್ನು ಠೇವಣಿ ಮಾಡಲಾದೆ. ಅಲ್ಲದೇ ಪ್ರಮುಖವಾಗಿ, ತಿಮ್ಮಪ್ಪನ ಭಂಡಾರದಲ್ಲಿ 14 ಸಾವಿರ ಕೇಜಿ ಚಿನ್ನ ಇದೆ.

ದೇಗುಲದ ಆಡಳಿತದಲ್ಲಿ ಪಾರದರ್ಶಕತೆ ತರಲು 2020ರಲ್ಲೇ ದೇಗುಲದ ಆಸ್ತಿ ಕುರಿತು ಶ್ವೇತಪತ್ರ ಹೊರಡಿಸಲು ಟಿಟಿಡಿ ನಿರ್ಧರಿಸಿತ್ತು. ಆದರೆ ಕೋವಿಡ್‌ ಮತ್ತಿತರ ಕಾರಣಗಳಿಂದಾಗಿ ಆಸ್ತಿ ಸಮೀಕ್ಷೆ ಮತ್ತು ಸರ್ವೇ ಸಾಧ್ಯವಾಗಿರಲಿಲ್ಲ. ಇದೀಗ ಆ ಕಾರ್ಯ ಪೂರ್ಣಗೊಂಡಿದ್ದು, ದೇಗುಲವು ಜಮೀನು ಸೇರಿದಂತೆ ಒಟ್ಟು 85,705 ಕೋಟಿ ರು.ಮೌಲ್ಯದ ಸ್ಥಿರಾಸ್ತಿ ಹೊಂದಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಸುಬ್ಬಾರೆಡ್ಡಿ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಅವರು ತಿರುಪತಿ ತಿಮ್ಮಪ್ಪನಿಗೆ 42 ಲಕ್ಷ ವೆಚ್ಚದ ಧರ್ಮರಥ ಕೊಡುಗೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

Published On - 11:45 am, Mon, 26 September 22