ತಿರುಪತಿ: ಬಾಲಕನ ಮೇಲೆ ಚಿರತೆ ದಾಳಿ ನಡೆಸಿದ ಒಂದು ತಿಂಗಳ ಬಳಿಕ ಅಲಿಪಿರಿ-ತಿರುಮಲ ಕಾಲು ಹಾದಿಯಲ್ಲಿ ಪ್ರತ್ಯಕ್ಷವಾದ ಕರಡಿ

|

Updated on: Aug 01, 2023 | 2:37 PM

ತಿರುಪತಿಯ ಅಲಿಪಿರಿ-ತಿರುಮಲ ಕಾಲು ಹಾದಿಯಲ್ಲಿ ಮಂಗಳವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಜಿಂಕೆ ಪಾರ್ಕ್ ಬಳಿ ಕರಡಿ ಕಾಣಿಸಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ.

ತಿರುಪತಿ: ಬಾಲಕನ ಮೇಲೆ ಚಿರತೆ ದಾಳಿ ನಡೆಸಿದ ಒಂದು ತಿಂಗಳ ಬಳಿಕ ಅಲಿಪಿರಿ-ತಿರುಮಲ ಕಾಲು ಹಾದಿಯಲ್ಲಿ ಪ್ರತ್ಯಕ್ಷವಾದ ಕರಡಿ
ಕರಡಿ
Image Credit source: News 9
Follow us on

ತಿರುಪತಿಯ ಅಲಿಪಿರಿ-ತಿರುಮಲ ಕಾಲು ಹಾದಿಯಲ್ಲಿ ಮಂಗಳವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಜಿಂಕೆ ಪಾರ್ಕ್ ಬಳಿ ಕರಡಿ ಕಾಣಿಸಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ. ಆನ್​ಲೈನ್​ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಕರಡಿಯು ರಾತ್ರಿ ಹೊತ್ತು ಅಲಿಪಿರಿ ರಸ್ತೆಯನ್ನು ಪ್ರವೇಶಿಸುತ್ತಿರುವುದು ದಾಟಿ ಹೋಗುತ್ತಿರುವುದನ್ನು ಕಾಣಬಹುದು. ಆ ಸಮಯದಲ್ಲಿ ಈ ಮಾರ್ಗದ ಮೂಲಕ ಯಾತ್ರೆ ಕೈಗೊಳ್ಳುವ ಭಕ್ತರ್ಯಾರೂ ಅಲ್ಲಿರಲಿಲ್ಲ.

ಕಳೆದ ಒಂದು ತಿಂಗಳ ಹಿಂದಷ್ಟೇ ಅದೇ ದಾರಿಯಲ್ಲಿ ಚಿರತೆ ಕಾಣಿಸಿಕೊಂಡು 3 ವರ್ಷದ ಬಾಲಕನನ್ನು ಕಾಡಿಗೆ ಎಳೆದೊಯ್ಯಲು ಯತ್ನಿಸಿತ್ತು. ಅಲಿಪಿರಿ-ತಿರುಮಲ ಮಾರ್ಗದ ಏಳನೇ ಮೈಲಿ ಬಳಿ ಈ ಘಟನೆ ನಡೆದಿದೆ.

ಮತ್ತಷ್ಟು ಓದಿ: ಮಾನವರ ಮೇಲೆ ಹೆಚ್ಚಾದ ಚಿರತೆ ದಾಳಿ: ಅರಣ್ಯಾಧಿಕಾರಿ ನೇತೃತ್ವದಲ್ಲಿ ಚಿರತೆ ಸೆರೆಗೆ ಮುಂದಾದ ಲೆಪರ್ಡ್ ಟಾಸ್ಕ್ ಫೋರ್ಸ್

ಚಿರತೆ ಮರಿಯನ್ನು ಸೆರೆಹಿಡಿದು ನಂತರ ದೇವಾಲಯದಿಂದ 40 ಕಿಲೋಮೀಟರ್ ದೂರದಲ್ಲಿರುವ ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ಬಿಡಲಾಗಿತ್ತು.
ಭಕ್ತರು ಅಲಿಪಿರಿ-ತಿರುಮಲ ಕಾಲು ಹಾದಿಯಲ್ಲಿ ಸುಸಜ್ಜಿತ ಕಲ್ಲಿನ ಮೆಟ್ಟಿಲುಗಳನ್ನು ಸಾಮಾನ್ಯವಾಗಿ ಬಳಸುತ್ತಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ