Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾನವರ ಮೇಲೆ ಹೆಚ್ಚಾದ ಚಿರತೆ ದಾಳಿ: ಅರಣ್ಯಾಧಿಕಾರಿ ನೇತೃತ್ವದಲ್ಲಿ ಚಿರತೆ ಸೆರೆಗೆ ಮುಂದಾದ ಲೆಪರ್ಡ್ ಟಾಸ್ಕ್ ಫೋರ್ಸ್

ದಿನದಿಂದ ದಿನಕ್ಕೆ ಮಾನವರ ಮೇಲೆ ಚಿರತೆ ದಾಳಿ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಮಲ್ಲಿಗೆಹಳ್ಳಿಯಲ್ಲಿ ಬಾಲಕನ ಮೇಲೆ ಚಿರತೆ ದಾಳಿ ಮಾಡಿತ್ತು. ಹಾಗಾಗಿ ಚಿರತೆ ಸೆರೆ ಹಿಡಿಯಲು ಅರಣ್ಯಾಧಿಕಾರಿ ನೇತೃತ್ವದಲ್ಲಿ ನುರಿತ ಲೆಪರ್ಡ್ ಟಾಸ್ಕ್ ಫೋರ್ಸ್​ನೊಂದಿಗೆ ಕೂಂಬಿಂಗ್ ಕಾರ್ಯಚರಣೆ ಶುರು ಮಾಡಲಾಗಿದೆ.

ಮಾನವರ ಮೇಲೆ ಹೆಚ್ಚಾದ ಚಿರತೆ ದಾಳಿ: ಅರಣ್ಯಾಧಿಕಾರಿ ನೇತೃತ್ವದಲ್ಲಿ ಚಿರತೆ ಸೆರೆಗೆ ಮುಂದಾದ ಲೆಪರ್ಡ್ ಟಾಸ್ಕ್ ಫೋರ್ಸ್
ಚಿರತೆಗಾಗಿ ಶೋಧ ಕಾರ್ಯಾಚರಣೆ
Follow us
ಸೂರಜ್ ಪ್ರಸಾದ್ ಎಸ್.ಎನ್
| Updated By: ಗಂಗಾಧರ​ ಬ. ಸಾಬೋಜಿ

Updated on: Jul 27, 2023 | 7:30 PM

ಚಾಮರಾಜನಗರ, ಜುಲೈ 27: ಜಿಲ್ಲೆಯ ಯಳಂದೂರು ತಾಲೂಕಿನ ಮಲ್ಲಿಗೆಹಳ್ಳಿಯಲ್ಲಿ ಬಾಲಕನ ಮೇಲೆ ಚಿರತೆ (Leopard) ದಾಳಿ ಪ್ರಕರಣ ಹಿನ್ನೆಲೆ ಗ್ರಾಮದ ಸುತ್ತಮುತ್ತ ಚಿರತೆಗಾಗಿ ಶೋಧ ಕಾರ್ಯಾಚರಣೆ ಮಾಡಲಾಗುತ್ತಿದೆ. ಮೈಸೂರಿನಿಂದ ಆಗಮಿಸಿರುವ ಟಾಸ್ಕ್​ಫೋರ್ಸ್​ನಿಂದ ಶೋಧ ಮಾಡಲಾಗಿದೆ. ಅರಣ್ಯ ಸಿಬ್ಬಂದಿ ಎಷ್ಟೇ ಹುಡುಕಾಡಿದರೂ ಚಿರತೆ ಪತ್ತೆಯಾಗಿಲ್ಲ. ಆದರೆ ಶತಾಯಗತಾಯ ಚಿರತೆ ಸೆರೆಗಾಗಿ ಟಾಸ್ಕ್​ಫೋರ್ಸ್ ಪಣ ತೊಟ್ಟಿದೆ.

ಮಲ್ಲಿಗೆಹಳ್ಳಿ ಸುತ್ತಮುತ್ತ 60 ಸಿಸಿಕ್ಯಾಮರಾ, 2 ದೊಡ್ಡ ಬೋನ್​ ಸೇರಿದಂತೆ 9 ಬೋನ್​ಗಳನ್ನು ಸಿಬ್ಬಂದಿ ಅಳವಡಿಸಿದ್ದಾರೆ. ಅರಣ್ಯ ಇಲಾಖೆಯ 70ಕ್ಕೂ ಹೆಚ್ಚು ಸಿಬ್ಬಂದಿಯಿಂದ ಕೂಂಬಿಂಗ್​ ಕಾರ್ಯಚರಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ ಏರಿಕೆ, ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದ 435 ಹುಲಿಗಳು: ಈಶ್ವರ ಖಂಡ್ರೆ

ಚಿರತೆ ದಾಳಿಗೆ ಬಲಿಯಾಯ್ತು 8 ಕುರಿಮರಿಗಳು

ಕಳೆದ 4 ವರ್ಷಗಳಿಂದ ಒಂದಲ್ಲ ಒಂದು ಕಡೆ ದಾಳಿಗಳು ನಡಿತಾನೆ ಇದೆ. ಇತ್ತೀಚೆಗೆ ಕುರಿಕೊಟ್ಟಿಗೆ ಮೇಲೆ ದಾಳಿ ನಡೆಸಿದ ಚಿರತೆ ಬರೋಬ್ಬರಿ 8 ಮರಿಗಳನ್ನ ತಿಂದು ತೇಗಿತ್ತು. ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಶಿವಪುರದಲ್ಲಿ ಘಟನೆ ನಡೆದಿತ್ತು. ಚಿರತೆಯ ಅಟ್ಟಹಾಸಕ್ಕೆ ರೈತ ಗೋಪಿ ಸಾಕಿದ್ದ 8 ಕುರಿಮರಿಗಳು ಸತ್ತು ಹೋಗಿದ್ದವು. ಬೆಳ್ಳಂಬೆಳಗ್ಗೆ ಕೊಟ್ಟಿಗೆ ಒಳ ಹೊಕ್ಕ ಚಿರತೆ 6 ಮರಿಗಳ ರಕ್ತ ಹೀರಿ ಕೊಂದಾಕಿದ್ರೆ ಇನ್ನೆರೆಡು ಕುರಿ ಮರಿಗಳನ್ನ ಹೊತ್ತೊಯ್ದಿತ್ತು.

ಇದನ್ನೂ ಓದಿ: Chamarajanagar: ಕೊನೆಗೂ ಖೆಡ್ಡಾಗೆ ಬಿದ್ದ ಒಂಟಿಸಲಗ; ಸತತ ಮೂರು ಅರವಳಿಕೆ ಮದ್ದು ನೀಡಿ ಸೆರೆ

ಅರಣ್ಯಾಧಿಕಾರಿಗಳಿಗೆ ಸುದ್ದಿ ತಿಳಿಸಿದರು ಸಕಾಲಕ್ಕೆ ಅಧಿಕಾರಿಗಳು ಆಗಮಿಸಿಲ್ಲ ಎಂದು ಅರಣ್ಯಾಧಿಕಾರಿಗಳ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಕಳೆದ 4 ವರ್ಷದ ಹಿಂದೆಯೂ ಇದೆ ರೀತಿ ದಾಳಿಯಾಗಿತ್ತು. ಆಗ ಬೋನಿಟ್ಟ ಅರಣ್ಯಾಧಿಕಾರಿಗಳು ಚಿರತೆಯನ್ನ ಸೆರೆ ಹಿಡಿದು ಕಾಡಿಗೆ ಹೋಗಿ ಬಿಟ್ಟಿದ್ರು. ಈಗ ಮತ್ತದೆ ರೀತಿಯ ಸಮಸ್ಯೆ ಎದುರಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.