ರಾಮ ಮಂದಿರ ಉದ್ಘಾಟನೆ ವೇಳೆ ಭಕ್ತರಿಗೆ ತಿರುಪತಿ ಲಡ್ಡು ವಿತರಣೆ, ಅಯೋಧ್ಯೆಯಲ್ಲಿ ವೆಂಕಟೇಶ್ವರ ದೇಗುಲ ನಿರ್ಮಾಣಕ್ಕೆ ಮನವಿ

|

Updated on: Jan 05, 2024 | 4:34 PM

Tirupati Laddu : ಇನ್ನು 17 ದಿನಗಳಲ್ಲಿ ಭಾರತದ ಅದ್ಭುತ ರಾಮಮಂದಿರ ಭಕ್ತರಿಗೆ ಲಭ್ಯವಾಗಲಿದೆ. ಈಗಾಗಲೇ ಪದಾಧಿಕಾರಿಗಳು ಉದ್ಘಾಟನಾ ಸಮಾರಂಭಕ್ಕಾಗಿ ಬ್ಯುಸಿಯಾಗಿದ್ದಾರೆ. ಮತ್ತೊಂದೆಡೆ, ತಿರುಪತಿ ಟ್ರಸ್ಟ್ ಅಯೋಧ್ಯೆಯಲ್ಲಿ ವೆಂಕಟೇಶ್ವರ ದೇವಾಲಯ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಲು ಉತ್ತರ ಪ್ರದೇಶ ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ.

ರಾಮ ಮಂದಿರ ಉದ್ಘಾಟನೆ ವೇಳೆ ಭಕ್ತರಿಗೆ ತಿರುಪತಿ ಲಡ್ಡು ವಿತರಣೆ, ಅಯೋಧ್ಯೆಯಲ್ಲಿ ವೆಂಕಟೇಶ್ವರ ದೇಗುಲ ನಿರ್ಮಾಣಕ್ಕೆ ಮನವಿ
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ವೇಳೆ ಭಕ್ತರಿಗೆ ತಿರುಪತಿ ಲಡ್ಡು ವಿತರಣೆ,
Follow us on

ತಿರುಮಲ ತಿರುಪತಿ ತಿಮ್ಮಪ್ಪನ ಕಾಣಿಕೆಯಾದ ಲಡ್ಡು ಪ್ರಸಾದ ಅಯೋಧ್ಯಾ ರಾಮನಿಗೆ ರವಾನೆಯಾಗುತ್ತಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿರುವ ಟಿಟಿಡಿ ಸಹ ಈ ಪ್ರತಿಷ್ಠಿತ ರಾಮ ಮಂದಿತ ಉದ್ಘಾಟನೆ ಕಾರ್ಯಕ್ರಮಕ್ಕೆ ತನ್ನ ಪಾಲನ್ನು ನೀಡುತ್ತಿದೆ. ಜನವರಿ 22 ರಂದು ನಡೆಯಲಿರುವ ಅಯೋಧ್ಯೆ ರಾಮಮಂದಿರದ ಉದ್ಘಾಟನಾ ಮಹೋತ್ಸವದ ಸಂದರ್ಭದಲ್ಲಿ ವಿಶ್ವವಿಖ್ಯಾತ ತಿರುಪತಿ ಲಡ್ಡುಗಳನ್ನು ವಿತರಿಸಲಿದೆ.

ಉದ್ಘಾಟನಾ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಲವು ವಿವಿಐಪಿಗಳು ಉಪಸ್ಥಿತರಾಗಲಿದ್ದಾರೆ. ದೇಶಾದ್ಯಂತ ಸಹ ಲಕ್ಷಾಂತರ ಭಕ್ತರು ಭಾಗವಹಿಸುತ್ತಾರೆ. ಈ ಬಗ್ಗೆ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಟಿಟಿಡಿ ಎಕ್ಸಿಕ್ಯೂಟೀವ್ ಆಫೀಸರ್​​ ಎ.ವಿ. ಧರ್ಮರೆಡ್ಡಿ ಅವರು ಲಕ್ಷ ಲಕ್ಷ ಶ್ರೀವಾರಿ ಲಡ್ಡುಗಳನ್ನು ಅಯೋಧ್ಯೆಗೆ ಕಳುಹಿಸುತ್ತಿದ್ದೇವೆ. ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಮತ್ತು ಶ್ರೀರಾಮ ಮಂದಿರದ ಉದ್ಘಾಟನಾ ಸಮಾರಂಭಕ್ಕೆ ಬರುವ ಭಕ್ತರಿಗೆ ಈ ಲಡ್ಡುಗಳನ್ನು ನೀಡಲಾಗುತ್ತದೆ. ಪ್ರತಿ ಲಡ್ಡು 25 ಗ್ರಾಂ ತೂಗುತ್ತದೆ. ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಉದ್ಘಾಟನೆಗೆ ಇಡೀ ದೇಶವೇ ಕಾತರದಿಂದ ಕಾಯುತ್ತಿದೆ ಎಂದು ಹೇಳಿದ್ದಾರೆ.

ತಿರುಮಲದ ಅನ್ನಮಯ್ಯ ಭವನದಲ್ಲಿ ಆಯೋಜಿಸಿದ್ದ ‘ಡಯಲ್ ಯುವರ್ ಇ.ವೊ.’ ಕಾರ್ಯಕ್ರಮದ ಅಂಗವಾಗಿ ಧರ್ಮಾರೆಡ್ಡಿ ಮಾತನಾಡಿದರು. ಸನಾತನ ಹಿಂದೂ ಧರ್ಮ ಅಭಿಯಾನದ ಭಾಗವಾಗಿ ಫೆಬ್ರವರಿ 3 ರಿಂದ 5 ರವರೆಗೆ ತಿರುಮಲದಲ್ಲಿ ಧಾರ್ಮಿಕ ಸಂಘಟನೆಗಳೊಂದಿಗೆ ಸಮಾವೇಶವನ್ನು ಆಯೋಜಿಸುತ್ತೇವೆ. ಈ ಸಮಾವೇಶದಲ್ಲಿ ದೇಶದ ಪ್ರಮುಖ ನಾಯಕರು ಮತ್ತು ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ. ಮತ್ತೊಂದೆಡೆ, ನಕಲಿ ವೆಬ್‌ಸೈಟ್‌ಗಳಿಂದ ಮೋಸ ಹೋಗದಂತೆ ಶ್ರೀವಾರಿ ಭಕ್ತರಿಗೆ ಸೂಚಿಸಲಾಗಿದೆ. ಸೇವೆಗಳು, ಭೇಟಿಗಳು, ವಸತಿ ಮತ್ತು ವಸತಿ ಸೌಲಭ್ಯಗಳನ್ನು ಅಧಿಕೃತ ವೆಬ್‌ಸೈಟ್ ttdevasthanams.ap.gov.in ನಲ್ಲಿ ಮಾತ್ರ ಕಾಯ್ದಿರಿಸಬೇಕು ಎಂದು ದೇವಾಲಯದ ಇಒ ಧರ್ಮಾ ರೆಡ್ಡಿ ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ವೆಂಕಟೇಶ್ವರ ದೇಗುಲ ನಿರ್ಮಾಣಕ್ಕೆ ಮನವಿ

ಇನ್ನು 17 ದಿನಗಳಲ್ಲಿ ಭಾರತದ ಅದ್ಭುತ ರಾಮಮಂದಿರ ಭಕ್ತರಿಗೆ ಲಭ್ಯವಾಗಲಿದೆ.. ಈಗಾಗಲೇ ಪದಾಧಿಕಾರಿಗಳು ಉದ್ಘಾಟನಾ ಸಮಾರಂಭಕ್ಕಾಗಿ ಬ್ಯುಸಿಯಾಗಿದ್ದಾರೆ. ಮತ್ತೊಂದೆಡೆ, ತಿರುಪತಿ ಟ್ರಸ್ಟ್ ಅಯೋಧ್ಯೆಯಲ್ಲಿ ವೆಂಕಟೇಶ್ವರ ದೇವಾಲಯ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಲು ಉತ್ತರ ಪ್ರದೇಶ ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ. ಟಿಟಿಡಿ ಟ್ರಸ್ಟ್ ದೇಶದಾದ್ಯಂತ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಶ್ರೀ ವೆಂಕಟೇಶ್ವರ ದೇವಾಲಯಗಳನ್ನು ನಿರ್ಮಿಸಲು ಯೋಜಿಸುತ್ತಿದೆ. ವಿಶೇಷವಾಗಿ ಟಿಟಿಡಿ ಈಗಾಗಲೇ ಜಮ್ಮು, ನವದೆಹಲಿ, ಹರಿಯಾಣ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ದೇವಾಲಯಗಳನ್ನು ನಿರ್ಮಿಸಿದೆ.