ತಿರುಪತಿ ಲಡ್ಡು ಬಗ್ಗೆ ಹಬ್ಬಿದ್ದ ವದಂತಿಗೆ ಸ್ಪಷ್ಟನೆ ಕೊಟ್ಟ ಆಡಳಿತ ಮಂಡಳಿ

ತಿರುಪತಿ ಲಡ್ಡಿನ ಬಗ್ಗೆ ಅನುಮಾನ ಬೇಡ ನಿತ್ಯವೂ ಹೊಸದಾಗಿ ಲಡ್ಡುಗಳನ್ನು ತಯಾರಿಸಲಾಗುತ್ತದೆ, ವದಂತಿಗಳಿಗೆ ಕಿವಿಕೊಡಬೇಡಿ ಎಂದು ಆಡಳಿತ ಮಂಡಳಿ ಭಕ್ತರಲ್ಲಿ ಮನವಿ ಮಾಡಿದೆ. ಹಾಗೆಯೇ ಸುಳ್ಳು ಸುದ್ದಿಗಳನ್ನು ಹಬ್ಬಿದ್ದ ಯೂಟ್ಯೂಬ್ ಚಾನೆಲ್​ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.

ತಿರುಪತಿ ಲಡ್ಡು ಬಗ್ಗೆ ಹಬ್ಬಿದ್ದ ವದಂತಿಗೆ ಸ್ಪಷ್ಟನೆ ಕೊಟ್ಟ ಆಡಳಿತ ಮಂಡಳಿ
ಲಡ್ಡು

Updated on: Jul 18, 2024 | 10:58 AM

ತಿರುಪತಿ ಲಡ್ಡು ಬಗ್ಗೆ ಹಬ್ಬದ್ದ ವದಂತಿಗಳ ಬಗ್ಗೆ ದೇವಸ್ಥಾನದ ಮಂಡಳಿ ಸ್ಪಷ್ಟನೆ ನೀಡಿದೆ. ಹಲವಾರು ವರ್ಷಗಳಿಂದ ಲಡ್ಡುಗಳನ್ನು ವೈಷ್ಣವ ಬ್ರಾಹ್ಮಣರು ತಯಾರಿಸುತ್ತಿದ್ದಾರೆ. ನಿತ್ಯವೂ ಹೊಸತಾಗಿಯೇ ಲಡ್ಡುಗಳು ಸಿದ್ಧಗೊಳ್ಳುತ್ತವೆ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಆಡಳಿತ ತಿಳಿಸಿದೆ.

ಗುತ್ತಿಗೆದಾರರೊಬ್ಬರ ಮೇಲ್ವಿಚಾರಣೆಯಲ್ಲಿ ಲಡ್ಡುಗಳನ್ನು ತಯಾರಿಸಲಾಗುತ್ತಿದೆ, ಭಕ್ತರಿಗೆ ಹಂಚುವ ಲಡ್ಡುಗಳು ತಾಜಾ ಅಲ್ಲ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಮಾಡಿದ್ದರು ಈ ಕುರಿತು ಇದೀಗ ಆಡಳಿತ ಸ್ಪಷ್ಟನೆ ನೀಡಿದೆ.

ಶ್ರೀವಾರಿ ಲಡ್ಡು ಪ್ರಸಾದವು ಅತ್ಯುತ್ತಮ ಗುಣಮಟ್ಟದಲ್ಲಿ ತಯಾರಿಸಲಾಗುತ್ತದೆ, ಭಕ್ತರು ಸುಳ್ಳು ಸುದ್ದಿಗೆ ಮರುಳಾಗಬೇಡಿ ಎಂದು ಟಿಟಿಡಿ ಪ್ರಕಟಣೆಯಲ್ಲಿ ತಿಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಶ್ರೀವಾರಿ ಲಡ್ಡುಗಳ ಬಗ್ಗೆ ಸುಳ್ಳು ಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಂಡಳಿ ತಿಳಿಸಿದೆ .

ಮತ್ತಷ್ಟು ಓದಿ: ತಿರುಪತಿ ತಿಮ್ಮಪ್ಪನ ಹುಂಡಿಗೆ ದಾಖಲೆಯ ಆದಾಯ.. 6 ತಿಂಗಳಲ್ಲಿ ಎಷ್ಟು ಕೋಟಿ ಗೊತ್ತಾ!?

ಲಡ್ಡೂ ತಯಾರಿಕೆಯಲ್ಲಿ ಸುಮಾರು 980 ಜನರು ಕೆಲಸ ಮಾಡುತ್ತಿದ್ದಾರೆ, ಬಹಳಷ್ಟು ವರ್ಷಗಳಿಂದ ಇದೇ ಪರಂಪರೆ ಮುಂದುವರೆದಿದೆ.

ಹೆಚ್ಚುವರಿಯಾಗಿ, ಯೂಟ್ಯೂಬ್ ಚಾನೆಲ್‌ಗಳ ಕಪೋಲಕಲ್ಪಿತ ಮತ್ತು ಆಧಾರರಹಿತ ಸುದ್ದಿಗಳಿಗಾಗಿ ತಕ್ಷಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಟಿಟಿಡಿ ಎಚ್ಚರಿಸಿದೆ.

ತಿರುಮಲ ತಿರುಪತಿ ದೇವಸ್ಥಾನಗಳು ಒಂದು ಲಕ್ಷ ಪ್ರಸಿದ್ಧ ತಿರುಪತಿ ಲಡ್ಡುಗಳನ್ನು ಅಯೋಧ್ಯೆಗೆ ಕಳುಹಿಸಿತ್ತು. ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಭಕ್ತರು ತಿರುಪತಿ ಲಡ್ಡು ಪ್ರಸಾದವನ್ನು ಪಡೆದಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ