ತಿರುಪತಿ ತಿಮ್ಮಪ್ಪನ ಭಕ್ತರ ಸಂಖ್ಯೆ ಅಗಾಧವಾದುದು. ಭಕ್ತರ ಇಷ್ಟಾರ್ಥ ಈಡೇರಿಸುತ್ತಾನೆ, ಭಕ್ತರ ಕಷ್ಟಗಳನ್ನು ಕರಗಿಸುತ್ತಾನೆ. ಜಗತ್ತಿನಾದ್ಯಂತ ಜನರು ತಿರುಪತಿ ಸನ್ನಿಧಾನಕ್ಕೆ ಬಂದು ಹೋಗುತ್ತಾರೆ. ಜನಸಾಮಾನ್ಯರಿಂದ ಹಿಡಿದು ರಾಜಕಾರಣಿಗಳು, ಸೆಲಬ್ರಿಟಿಗಳು ತಿರುಪತಿ ಬಾಲಾಜಿ (Tirupati Balaji) ಕಂಡು ಸಂತೃಪ್ತರಾಗುತ್ತಾರೆ. ಹಿಂದೆಲ್ಲಾ ರಾಜ ಮಹಾರಾಜರು ವೆಂಕಟೇಶ್ವರನಿಗೆ ಜಮೀನು, ಬಂಗಾರ, ವಜ್ರ ವೈಡೂರ್ಯಗಳನ್ನು ಸಮರ್ಪಿಸುತ್ತಿದ್ದರು. ನಮ್ಮ ಜನಾರ್ದನ ರೆಡ್ಡಿ ಚಿನ್ನದ ಕಿರೀಟವನ್ನೇ ಕೊಟ್ಟು ಸುದ್ದಿ ಮಾಡಿದ್ದರು. ಇದೀಗ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿ (Infosys Murthy Couple) ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಹೋಗಿ ಬೆಲೆಬಾಳುವ ಕಾಣಿಕೆಗಳನ್ನು ಸಮರ್ಪಿಸಿದ್ದಾರೆ.
ಸುಧಾ ಮೂರ್ತಿ ಮತ್ತು ನಾರಾಯಣಮೂರ್ತಿ ದಂಪತಿ ಸಮರ್ಪಿಸಿದ 2 ಕಿಲೋ ಕಾಣಿಕೆಗಳ ಮೌಲ್ಯ 1.25 ಕೋಟಿ ರೂ ಎನ್ನಲಾಗಿದೆ. ಶ್ರೀವಾರಿ ಪೂಜೆಗೆ ಬಳಸುವ ಅಭಿಷೇಕದ ಶಂಖ ಹಾಗೂ ಕೂರ್ಮಪೀಠವನ್ನು ದಾನವಾಗಿ ಕೊಟ್ಟಿದ್ದಾರೆ. ಎರಡೂ ಕೂಡ ಚಿನ್ನದಿಂದ ಮಾಡಿದುದಾಗಿದೆ. ಟಿಟಿಡಿ ಸಿಇಒ ಧರ್ಮ ರೆಡ್ಡಿ ಅವರು ಈ ಸಂದರ್ಭದಲ್ಲಿ ಮೂರ್ತಿ ದಂಪತಿಗೆ ಶೇಷವಸ್ತ್ರ ತೊಡಿಸಿ ಪ್ರಸಾದ ಕೊಟ್ಟರು.
ಇದನ್ನೂ ಓದಿ: Tamil Nadu: ಉನ್ನತ ಶಿಕ್ಷಣ ಸಚಿವ ಕೆ ಪೊನ್ಮುಡಿ ಮೇಲೆ ಇ.ಡಿ ದಾಳಿ, 9 ಸ್ಥಳಗಳಲ್ಲಿ ಶೋಧ
ಸುಧಾ ಮೂರ್ತಿ ಮತ್ತು ನಾರಾಯಣಮೂರ್ತಿ ಇಬ್ಬರೂ ಕೂಡ ತಿರುಪತಿ ತಿಮ್ಮಪ್ಪನ ಭಕ್ತರು. ಸುಧಾ ಮೂರ್ತಿ ಅವರು ಎರಡು ಬಾರಿ ಟಿಟಿಡಿ ಟ್ರಸ್ಟ್ ಬೋರ್ಡ್ನ ಛೇರ್ಮನ್ ಆಗಿದ್ದರು. ಅವರ ಅವಧಿಯಲ್ಲಿ ತಿರುಪತಿ, ತಿರುಮಲದಲ್ಲಿ ಸೌಕರ್ಯವ್ಯವಸ್ಥೆಯನ್ನು ಉನ್ನತೀಕರಿಲಾಗಿತ್ತು. ಜಗನ್ಮೋಹನ್ ರೆಡ್ಡಿ ಸಿಎ ಆದ ಬಳಿಕ ಸುಧಾ ಮೂರ್ತಿ ಅವರು ಬೋರ್ಡ್ ಛೇರ್ಮನ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ