ಮೊನ್ನೆಯಷ್ಟೇ ಮತದಾನ ಮುಗಿದಿತ್ತು, ಇಂದು ಅಭ್ಯರ್ಥಿಯೇ ಇಲ್ಲ; ಕೊರೊನಾಕ್ಕೆ ಬಲಿಯಾದ ತೃಣಮೂಲ ಕಾಂಗ್ರೆಸ್ ಮುಖಂಡ ಕಾಜಲ್ ಸಿನ್ಹಾ

|

Updated on: Apr 25, 2021 | 5:31 PM

ಖರ್ದಾ ವಿಧಾನಸಭಾ ಕ್ಷೇತ್ರದಲ್ಲಿ ಏಪ್ರಿಲ್​ 22ರಂದು ಮತದಾನ ಮುಗಿದಿದೆ. ಈ ಕ್ಷೇತ್ರದಲ್ಲಿ ಮತ್ತೊಮ್ಮೆ ಮತದಾನ ನಡೆಯಲಿದೆಯಾ? ಎಂಬುದು ಇನ್ನು ಮೇಲೆ ನಿರ್ಧಾರವಾಗಲಿದೆ.

ಮೊನ್ನೆಯಷ್ಟೇ ಮತದಾನ ಮುಗಿದಿತ್ತು, ಇಂದು ಅಭ್ಯರ್ಥಿಯೇ ಇಲ್ಲ; ಕೊರೊನಾಕ್ಕೆ ಬಲಿಯಾದ ತೃಣಮೂಲ ಕಾಂಗ್ರೆಸ್ ಮುಖಂಡ ಕಾಜಲ್ ಸಿನ್ಹಾ
ಕಾಜಲ್ ಸಿನ್ಹಾ
Follow us on

ಕೋಲ್ಕತ್ತ: ಪಶ್ಚಿಮಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ಉತ್ತರ 24 ಪರಗಣದ ಖರ್ದಾ ಕ್ಷೇತ್ರದ ತೃಣಮೂಲ ಕಾಂಗ್ರೆಸ್​ ಅಭ್ಯರ್ಥಿ ಕಾಜಲ್​ ಸಿನ್ಹಾ ಕೊರೊನಾ ಸೋಂಕಿನಿಂದ ಇಂದು ಮೃತಪಟ್ಟಿದ್ದಾರೆ.
ಸದ್ಯ ಪಶ್ಚಿಮಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ. 59 ವರ್ಷದ ಕಾಜಲ್ ಸಿನ್ಹಾರಿಗೆ 2 ದಿನಗಳ ಹಿಂದಷ್ಟೇ ಸೋಂಕು ದೃಢಪಟ್ಟಿತ್ತು. ಬೇಲಿಯಾಘಾಟಾದ ಐಡಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ಕಾಜಲ್ ಸಿನ್ಹಾ ಸಾವಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ. ಇದು ನಿಜಕ್ಕೂ ಶಾಕ್​ ಆಗುವಂತಹ ವಿಷಯ ಎಂದು ಹೇಳಿದ್ದಾರೆ. ಟ್ವೀಟ್ ಮಾಡಿರುವ ಮಮತಾ ಬ್ಯಾನರ್ಜಿ, ಕಾಜಲ್ ಸಿನ್ಹಾ ಸಾವಿನ ಸುದ್ದಿ ಕೇಳಿ ತುಂಬತುಂಬ ನೋವಾಗಿದೆ. ಈ ವಿಧಾನಸಭೆ ಚುನಾವಣೆಯಲ್ಲಿ ಖಾರ್ದಾದಿಂದ ನಮ್ಮ ಅಭ್ಯರ್ಥಿಯಾಗಿದ್ದರು. ತಮ್ಮ ಇಡೀ ಜೀವನವನ್ನು ಜನಸೇವೆಗಾಗಿ ಮುಡಿಪಾಗಿಟ್ಟವರಾಗಿದ್ದರು. ನಾವು ಅವರನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಖರ್ದಾ ವಿಧಾನಸಭಾ ಕ್ಷೇತ್ರದಲ್ಲಿ ಏಪ್ರಿಲ್​ 22ರಂದು ಮತದಾನ ಮುಗಿದಿದೆ. ಈ ಕ್ಷೇತ್ರದಲ್ಲಿ ಮತ್ತೊಮ್ಮೆ ಮತದಾನ ನಡೆಯಲಿದೆಯಾ? ಚುನಾವಣಾ ಫಲಿತಾಂಶ ಬಂದ ಮೇಲಷ್ಟೇ ನಿರ್ಧಾರ ಮಾಡಲಾಗುತ್ತದಾ ಎಂಬುದು ಇನ್ನು ಮುಂದೆ ಗೊತ್ತಾಗಲಿದೆ.

ಇದನ್ನೂ ಓದಿ: ಕೊವಿಡ್ ಲಾಕ್​ಡೌನ್ ವೇಳೆ ಕಾರ್ಯ ನಿರ್ವಹಿಸುವ ಮುಂಬೈ ಪೊಲೀಸರಿಗೆ ಉಚಿತ ವ್ಯಾನಿಟಿ ವ್ಯಾನ್​ ನೀಡಿದ ಉದ್ಯಮಿ

‘ಅರ್ಜೆಂಟ್ ಆಗಿ ಸರ್ಜರಿ ಮಾಡಿ.. ಇಲ್ಲದೆ ಇದ್ರೆ ಕೊಂದು ಬಿಡಿ’- ಆಸ್ಪತ್ರೆ ಎದುರು ಕೈದಿಯ ಗೋಳಾಟ; ಯಾವುದನ್ನೂ ಒಪ್ಪುತ್ತಿಲ್ಲ ವೈದ್ಯರು