ಕೊವಿಡ್ ಲಾಕ್ಡೌನ್ ವೇಳೆ ಕಾರ್ಯ ನಿರ್ವಹಿಸುವ ಮುಂಬೈ ಪೊಲೀಸರಿಗೆ ಉಚಿತ ವ್ಯಾನಿಟಿ ವ್ಯಾನ್ ನೀಡಿದ ಉದ್ಯಮಿ
ಇಲ್ಲಿಯವರೆಗೆ ಕೇತನ್ ರಾವಲ್ ಹೊಂದಿರುವ 50 ವ್ಯಾನ್ಗಳಲ್ಲಿ 12 ವ್ಯಾನ್ಗಳನ್ನು ಪೊಲೀಸ್ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಒದಗಿಸಿದ್ದಾರೆ.
ಮುಂಬೈ: ನಗರದ ಉದ್ಯಮಿ ಕೇತನ್ ರಾವಲ್ ಮುಂಬೈ ಪೊಲೀಸರಿಗೆ ತಮ್ಮ ವ್ಯಾನಿಟಿ ವ್ಯಾನ್ಗಳನ್ನು ಉಚಿತವಾಗಿ ನೀಡಲು ಮುಂದಾಗಿದ್ದಾರೆ. ಪೊಲೀಸರು ಮತ್ತು ಆರೋಗ್ಯ ಕಾರ್ಯಕರ್ತರು ಲಾಕ್ಡೌನ್ ಇದ್ದ ಸಮಯದಲ್ಲಿ ಸೇವೆ ಸಲ್ಲಿಸುತ್ತಿರುವಾಗ ಆಹಾರ ಸೇವಿಸಲು ಸಹಾಯವಾಗುವುದಾಗಿ ತನ್ನಲ್ಲಿರುವ ವ್ಯಾನಿಟ್ ವ್ಯಾನ್ಗಳನ್ನು ನೀಡಿದ್ದಾರೆ. ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡಿದ ಕೇತನ್ ರಾವಲ್, ‘ನಾನು ಈ ವ್ಯಾನಿಟಿ ವ್ಯಾನ್ಗಳನ್ನು ಪೊಲೀಸ್ ಸಿಬ್ಬಂದಿಗೆ ನೀಡುತ್ತಿದ್ದೇನೆ. ಇದರಿಂದ ಅವರು ವಿಶ್ರಾಂತಿ ಪಡೆಯಬಹುದು. ವ್ಯಾನ್ನಲ್ಲಿ ಕುಳಿತು ಆಹಾರ ಸೇವಿಸಬಹುದು ಮತ್ತು ಕರ್ತವ್ಯದಲ್ಲಿದ್ದಾಗ ವಾಶ್ರೂಂಗಳನ್ನು ಬಳಸಿಕೊಳ್ಳಬಹುದು’ ಎಂದು ಹೇಳಿದ್ದಾರೆ.
‘ಈ ವ್ಯಾನಿಟಿ ವ್ಯಾನ್ಗಳಲ್ಲಿ ಮಲಗುವ ಕೋಣೆ, ವಾಶ್ರೂಂ, ಡ್ರೆಸ್ಸಿಂಗ್ ಟೇಬಲ್ ಮತ್ತು ಎಸಿ ಗಳಿವೆ. ಇವೆಲ್ಲವೂ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಸಹಾಯವಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ. ಆರೋಗ್ಯ ಕಾರ್ಯಕರ್ತರಿಗೆ ಅವರು ಹೇಗೆ ಸಹಾಯ ಮಾಡುತ್ತಿದ್ದಾರೆ ಎಂಬುದನ್ನು ತಿಳಿಸುತ್ತಿದ್ದ ಕೇತನ್ ರಾವಲ್, ತಲಾ ಮೂರು ಕೊಠಡಿಗಳನ್ನು ಹೊಂದಿರುವ ಮೂರು ವ್ಯಾನಿಟಿ ವ್ಯಾನ್ಗಳನ್ನು 24 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರಿಗೆ, ಸಹಾಯಕ ಸಿಬ್ಬಂದಿಗೆ ಮತ್ತು ಆರೋಗ್ಯ ಕಾರ್ಯಕರ್ತರಾಗಿ ಕೆಲಸ ನಿರ್ವಹಿಸುತ್ತಿರುವವರಿಗೆ ಒದಗಿಸಿದ್ದೇನೆ. ವ್ಯಾನ್ಗಳನ್ನು ಪ್ರತಿನಿತ್ಯ ಸ್ವಚ್ಛಗೊಳಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
Mumbai-based businessman Ketan Rawal has provided his vanity vans to Mumbai police for free to facilitate police personnel who are serving in scorching heat, amid partial lockdown in the city
“I am also ready to provide vans to hospitals to add a number of beds there,” he says. pic.twitter.com/7jTM0xtlyZ
— ANI (@ANI) April 25, 2021
ಆಸ್ಪತ್ರೆಗಳಿಗೂ ತನ್ನಲ್ಲಿರುವ ವ್ಯಾನಿಟಿ ವ್ಯಾನ್ಗಳನ್ನು ಒದಗಿಸಲು ಸಿದ್ಧ ಎಂದು ಕೇತನ್ ರಾವಲ್ ಹೇಳಿದ್ದಾರೆ. ಕೊವಿಡ್ ಸೋಂಕಿತ ರೋಗಿಗಳಿಗೆ ಅಗತ್ಯವಾದ ಚಿಕಿತ್ಸೆಯನ್ನು ಒದಗಿಸಿದರೆ ಜನರ ಜೀವ ಉಳಿಸಲು ನನ್ನ ವ್ಯಾನ್ಗಳನ್ನು ನೀಡಲು ನಾನು ಸಿದ್ಧನಿದ್ಧೇನೆ ಎಂದು ತಿಳಿಸಿದ್ದಾರೆ.
ಇಲ್ಲಿಯವರೆಗೆ ಅವರು ಹೊಂದಿರುವ 50 ವ್ಯಾನ್ಗಳಲ್ಲಿ 12 ವ್ಯಾನ್ಗಳನ್ನು ಪೊಲೀಸ್ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಒದಗಿಸಿದ್ದಾರೆ. ಏತನ್ಮಧ್ಯೆ, ಮುಂಬೈನಲ್ಲಿ 5,888 ಹೊಸ ಕೊವಿಡ್ ಪ್ರಕರಣಗಳು, 71 ಜನರು ಬಲಿಯಾಗಿದ್ದಾರೆ. ನಗರದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 6,66,109 ಆಗಿದೆ.
ಇದನ್ನೂ ಓದಿ: ಮುಂಬೈನಲ್ಲಿ ಕಳೆದ 24 ಗಂಟೆಗಳಲ್ಲಿ ಮೂರು ವಾರಗಳಲ್ಲೇ ಅತಿ ಕಡಿಮೆ ಕೊರೊನಾ ಸೋಂಕಿತರು ಪತ್ತೆ
Published On - 5:00 pm, Sun, 25 April 21