High Court: ಬಿಜೆಪಿ ರ‍್ಯಾಲಿಗೆ ನಿರ್ಬಂಧ ಹೇರಿದ ಟಿಎಂಸಿ ಸರ್ಕಾರ, ವರದಿ ಕೇಳಿದ ಹೈಕೋರ್ಟ್

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 14, 2022 | 11:22 AM

ಬಿಜೆಪಿ ನಡೆಸುತ್ತಿರುವ ರ್ಯಾಲಿಯಲ್ಲಿ ಬಿಜೆಪಿ ಬೆಂಬಲಿಗರನ್ನು ಬಲವಂತವಾಗಿ ತಡೆದ ಆರೋಪದ ಮೇಲೆ ಕಲ್ಕತ್ತಾ ಹೈಕೋರ್ಟ್ ನಿನ್ನೆ ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಯಿಂದ ವರದಿ ಕೇಳಿದೆ. ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ಆರ್ ಭಾರದ್ವಾಜ್ ಅವರನ್ನೊಳಗೊಂಡ ವಿಭಾಗೀಯ ಪೀಠ ವಿಚಾರಣೆ ನಡೆಸಿದೆ.

High Court: ಬಿಜೆಪಿ ರ‍್ಯಾಲಿಗೆ ನಿರ್ಬಂಧ ಹೇರಿದ ಟಿಎಂಸಿ ಸರ್ಕಾರ, ವರದಿ ಕೇಳಿದ ಹೈಕೋರ್ಟ್
Follow us on

ಕೋಲ್ಕತ್ತಾ: ಕೋಲ್ಕತ್ತಾದಲ್ಲಿ ಬಿಜೆಪಿ ನಡೆಸುತ್ತಿರುವ ರ್ಯಾಲಿಯಲ್ಲಿ ಬಿಜೆಪಿ ಬೆಂಬಲಿಗರನ್ನು ಬಲವಂತವಾಗಿ ತಡೆದ ಆರೋಪದ ಮೇಲೆ ಕಲ್ಕತ್ತಾ ಹೈಕೋರ್ಟ್ ನಿನ್ನೆ ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಯಿಂದ ವರದಿ ಕೇಳಿದೆ. ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ಆರ್ ಭಾರದ್ವಾಜ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಕೋಲ್ಕತ್ತಾದಲ್ಲಿರುವ ಬಿಜೆಪಿ ರಾಜ್ಯ ಪ್ರಧಾನ ಕಚೇರಿಗೆ ರಕ್ಷಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ರ್ಯಾಲಿಗೆ ಸಂಬಂಧಿಸಿದಂತೆ ಯಾವುದೇ ಅನಗತ್ಯ ಬಂಧನವನ್ನು ಮಾಡದಂತೆ ಪೀಠವು ರಾಜ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ರ್ಯಾಲಿಯಲ್ಲಿ ಪಾಲ್ಗೊಳ್ಳದಂತೆ ಬಿಜೆಪಿ ಬೆಂಬಲಿಗರನ್ನು ಬಲವಂತವಾಗಿ ತಡೆದಿರುವ ಆರೋಪದ ಕುರಿತು ಸೋಮವಾರದೊಳಗೆ ವರದಿ ಸಲ್ಲಿಸುವಂತೆ ರಾಜ್ಯ ಗೃಹ ಕಾರ್ಯದರ್ಶಿಗೆ ನ್ಯಾಯಾಲಯ ಸೂಚಿಸಿದೆ. ಶಾಂತಿಯನ್ನು ಕಾಪಾಡುವ ಅಗತ್ಯವಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಮಂಗಳವಾರದ ರ್ಯಾಲಿಯಲ್ಲಿ ಪಾಲ್ಗೊಳ್ಳದಂತೆ ಬಿಜೆಪಿ ಕಾರ್ಯಕರ್ತರನ್ನು ಬಲವಂತವಾಗಿ ತಡೆಯಲಾಯಿತು ಮತ್ತು ಪಕ್ಷದ ಮುಖಂಡರ ಮೇಲೆ ಹಲ್ಲೆ ನಡೆಸಲಾಯಿತು ಎಂದು ಅರ್ಜಿದಾರರು ತಮ್ಮ ಪಿಐಎಲ್‌ನಲ್ಲಿ ಹೇಳಿದ್ದಾರೆ.

ಬಿಜೆಪಿ ಕಾರ್ಯಕರ್ತರನ್ನು ರೈಲು ಹತ್ತದಂತೆ ನಿರ್ಬಂಧಿಸಲಾಗಿದೆ ಮತ್ತು ರ್ಯಾಲಿಯಲ್ಲಿ ಭಾಗವಹಿಸಲು ಕೋಲ್ಕತ್ತಾ ಮತ್ತು ಹೌರಾ ಮಾರ್ಗದಲ್ಲಿ ವಾಹನಗಳನ್ನು ನಿಲ್ಲಿಸಲಾಗಿದೆ ಎಂದು ಹೇಳಲಾಗಿದೆ. ಮುರಳೀಧರ್ ಸೇನ್ ಲೇನ್‌ನಲ್ಲಿರುವ ಬಿಜೆಪಿ ರಾಜ್ಯ ಪ್ರಧಾನ ಕಛೇರಿಯೊಳಗೆ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಯಿತು ಮತ್ತು ಪ್ರವೇಶಿಸದಂತೆ ತಡೆಯಲಾಗಿದೆ ಎಂದು ಆರೋಪಿಸಲಾಗಿದೆ.
ಅರ್ಜಿದಾರರ ಪರ ವಕೀಲ ಸುಬೀರ್ ಸನ್ಯಾಲ್ ಅವರು ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿ ಅವರನ್ನು ಹೈಕೋರ್ಟ್‌ನ ಹಿಂದಿನ ಏಕ ಪೀಠದ ಆದೇಶದ ಹೊರತಾಗಿಯೂ ಬಂಧಿಸಲಾಯಿತು.

ಹೌರಾದ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ವಿಧಿಸಲಾದ ಸೆಕ್ಷನ್ 144 ಜಾರಿಯಲ್ಲಿದೆ ಮತ್ತು ರ್ಯಾಲಿಗೆ ಅನುಮತಿ ನೀಡಲಾಗಿಲ್ಲ ಎಂದು ಅಡ್ವೊಕೇಟ್ ಜನರಲ್ ಎಸ್‌ಎನ್ ಮುಖರ್ಜಿ ಪ್ರತಿಪಾದಿಸಿದರು. ರ್ಯಾಲಿಯಲ್ಲಿ ಕೆಲವರು ಭಾಗವಹಿಸುವ ಮೂಲಕ ಹಿಂಸಾತ್ಮಕ ಚಟುವಟಿಕೆಗಳನ್ನು ಉತ್ತೇಜನ ನೀಡಿದಂತಾಗಿದೆ ಎಂದು ಆರೋಪಿಸಲಾಗಿದೆ. ಸುವೇಂದು ಅಧಿಕಾರಿಗೆ ರಕ್ಷಣೆ ನೀಡುವಂತೆ ಏಕ ಪೀಠದ ಆದೇಶವು ಅದರಲ್ಲಿ ಇದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಪ್ರತಿಭಟನೆಯ ಸಂದರ್ಭದಲ್ಲಿ ಬಂಧಿತರಾದ ನಾಯಕರನ್ನು ಶೀಘ್ರದಲ್ಲೇ ವೈಯಕ್ತಿಕ ಬಾಂಡ್ ಮೇಲೆ ಬಿಡುಗಡೆ ಮಾಡಲಾಗುವುದು ಎಂದು ಶ್ರೀ ಮುಖರ್ಜಿ ನ್ಯಾಯಾಲಯದ ಮುಂದೆ ಹೇಳಿದ್ದಾರೆ. ಸುವೇಂದು ಅಧಿಕಾರಿ, ಬಿಜೆಪಿ ಸಂಸದ ಲಾಕೆಟ್ ಚಟರ್ಜಿ ಮತ್ತು ಇತರ ನಾಯಕರನ್ನು ಸಂಜೆ ಕೋಲ್ಕತ್ತಾ ಪೊಲೀಸ್ ಪ್ರಧಾನ ಕಛೇರಿಯಾದ ಲಾಲ್ಬಜಾರ್‌ನಿಂದ ವೈಯಕ್ತಿಕ ಬಾಂಡ್ ಮೇಲೆ ಬಿಡುಗಡೆ ಮಾಡಲಾಯಿತು.