ಪ್ರಶ್ನೆಗಾಗಿ ನಗದು ಪ್ರಕರಣ: ಸಂಸತ್​ ಲಾಗಿನ್, ಪಾಸ್ವರ್ಡ್ ಸ್ನೇಹಿತನಿಗೆ ನೀಡಿದ್ದಾಗಿ ಒಪ್ಪಿದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ

|

Updated on: Oct 28, 2023 | 2:43 PM

ಯಾವ ಸಂಸದರೂ ಅವರ ಪ್ರಶ್ನೆಗಳನ್ನು ಅವರೇ ಟೈಪ್ ಮಾಡುವುದಿಲ್ಲ. ಅದೇ ರೀತಿ ನಾನು ಅವರಿಗೆ (ದರ್ಶನ್) ಪಾಸ್‌ವರ್ಡ್ ನೀಡಿದ್ದೇನೆ ಮತ್ತು ಅದನ್ನು (ಪ್ರಶ್ನೆಗಳನ್ನು) ಟೈಪ್ ಮಾಡಲು ಮತ್ತು ಅಪ್‌ಲೋಡ್ ಮಾಡಲು ಅವರ ಕಚೇರಿಯಲ್ಲಿ ಲಾಗಿನ್ ಮಾಡಿಸಿದ್ದೇನೆ ಎಂದು ಮಹುವಾ ಮೊಯಿತ್ರಾ ಹೇಳಿದ್ದಾರೆ.

ಪ್ರಶ್ನೆಗಾಗಿ ನಗದು ಪ್ರಕರಣ: ಸಂಸತ್​ ಲಾಗಿನ್, ಪಾಸ್ವರ್ಡ್ ಸ್ನೇಹಿತನಿಗೆ ನೀಡಿದ್ದಾಗಿ ಒಪ್ಪಿದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ
ಮಹುವಾ ಮೊಯಿತ್ರಾ
Follow us on

ನವದೆಹಲಿ, ಅಕ್ಟೋಬರ್ 28: ಸಂಸತ್ತಿನ ಲಾಗಿನ್ ಮತ್ತು ಪಾಸ್‌ವರ್ಡ್ ವಿವರಗಳನ್ನು ಸ್ನೇಹಿತ ಮತ್ತು ಉದ್ಯಮಿ ದರ್ಶನ್ ಹಿರಾನಂದನಿಗೆ ನೀಡಿರುವುದಾಗಿ ತೃಣಮೂಲ ಕಾಂಗ್ರೆಸ್ ಸಂಸದೆ (TMC MP) ಮಹುವಾ ಮೊಯಿತ್ರಾ (Mahua Moitra) ಅವರು ಶುಕ್ರವಾರ ಒಪ್ಪಿಕೊಂಡಿದ್ದಾರೆ. ಆದರೆ ಅವರಿಂದ ಯಾವುದೇ ಹಣವನ್ನು ತೆಗೆದುಕೊಳ್ಳಲಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ, ಸುಪ್ರೀಂ ಕೋರ್ಟ್ ವಕೀಲ ಜೈ ಅನಂತ್ ದೇಹದ್ರಾಯಿ ಅವರು ಕೇಂದ್ರೀಯ ತನಿಖಾ ದಳಕ್ಕೆ ನೀಡಿದ ದೂರಿನಲ್ಲಿ ಮಾಡಿರುವ ಆರೋಪವನ್ನು ತಿರಸ್ಕರಿಸಿದ್ದಾರೆ. ಮಹುವಾ ಮೊಯಿತ್ರಾ ಅವರು ‘ಪ್ರಶ್ನೆಗಾಗಿ ನಗದು ಪ್ರಕರಣ’ದಿಂದ ಸದ್ಯ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದಾರೆ.

ಲೋಕಸಭೆಯ ನೈತಿಕ ಸಮಿತಿಯು ತಮ್ಮ ವಿರುದ್ಧದ ಪ್ರಶ್ನೆಗಾಗಿ ನಗದು ಆರೋಪಗಳ ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಯಾವ ಸಂಸದರೂ ಅವರ ಪ್ರಶ್ನೆಗಳನ್ನು ಅವರೇ ಟೈಪ್ ಮಾಡುವುದಿಲ್ಲ. ಅದೇ ರೀತಿ ನಾನು ಅವರಿಗೆ (ದರ್ಶನ್) ಪಾಸ್‌ವರ್ಡ್ ನೀಡಿದ್ದೇನೆ ಮತ್ತು ಅದನ್ನು (ಪ್ರಶ್ನೆಗಳನ್ನು) ಟೈಪ್ ಮಾಡಲು ಮತ್ತು ಅಪ್‌ಲೋಡ್ ಮಾಡಲು ಅವರ ಕಚೇರಿಯಲ್ಲಿ ಲಾಗಿನ್ ಮಾಡಿಸಿದ್ದೇನೆ ಎಂದು ಹೇಳಿದ್ದಾರೆ.

ಪ್ರಶ್ನೆಯನ್ನು ಅಪ್‌ಲೋಡ್ ಮಾಡಲು, ಒಟಿಪಿ (ಒನ್-ಟೈಮ್ ಪಾಸ್‌ವರ್ಡ್) ಅಗತ್ಯವಿದೆ. ನನ್ನ ಫೋನ್ ಸಂಖ್ಯೆಯನ್ನು ನೀಡಲಾಗಿದೆ (ಒಟಿಪಿಗಾಗಿ). ಹಾಗೆಂದು ದರ್ಶನ್ ಅಥವಾ ನನಗೆ ಗೊತ್ತಿಲ್ಲದೆ ಯಾರಾದರೂ ಅದನ್ನು ಬಳಸುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಪ್ರಶ್ನೆಗಾಗಿ ನಗದು: ನೈತಿಕ ಸಮಿತಿ ಮುಂದೆ ವಿಚಾರಣೆಗೆ ಹಾಜರಾಗುವುದಿಲ್ಲ ಎಂದ ಮಹುವಾ ಮೊಯಿತ್ರಾ

ಈ ಮಧ್ಯೆ, ಲೋಕಸಭೆಯ ನೈತಿಕ ಸಮಿತಿಯ ಮುಂದೆ ಅಕ್ಟೋಬರ್ 31 ರಂದು ತನಗೆ ಹಾಜರಾಗಲು ಏಕೆ ಸಾಧ್ಯವಾಗುವುದಿಲ್ಲ ಎಂದು ವಿವರಿಸಿದ ಮೊಯಿತ್ರಾ, ನವೆಂಬರ್ 4 ರಂದು ತಮ್ಮ ಕ್ಷೇತ್ರದಲ್ಲಿ ಪೂರ್ವ ನಿಗದಿತ ಕಾರ್ಯಕ್ರಮಗಳು ಮುಗಿದ ನಂತರ ತಕ್ಷಣವೇ ಸಮಿತಿಯ ಮುಂದೆ ಹಾಜರಾಗುವುದಾಗಿ ಹೇಳಿದ್ದಾರೆ.

ಏನೇನು ಉಡುಗೊರೆ ನೀಡಿದ್ದರು ದರ್ಶನ್ ಹಿರಾನಂದಾನಿ?

ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ ಕಂಪನಿ ಹೀರಾನಂದಾನಿ ಗ್ರೂಪ್‌ನ ಸಿಇಒ ದರ್ಶನ್ ಹಿರಾನಂದಾನಿ ಅವರು ಮಹುವಾ ಮೊಯಿತ್ರಾ ಅವರಿಗೆ “ಕೇವಲ ಸ್ಕಾರ್ಫ್, ಕೆಲವು ಲಿಪ್‌ಸ್ಟಿಕ್‌ಗಳು ಮತ್ತು ಮೇಕಪ್ ವಸ್ತುಗಳನ್ನು” ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ, ಆದರೆ ವಕೀಲ ಜೈ ಅನಂತ್ ದೆಹದ್ರಾಯಿ ಮತ್ತು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಹೇಳಿಕೊಂಡಂತೆ ದುಬಾರಿ ಉಡುಗೊರೆಗಳು ಇಲ್ಲ,ಆದರೆ ದರ್ಶನ್ ಅವರ ಕಾರು ಮುಂಬೈನಲ್ಲಿದ್ದಾಗ ತೃಣಮೂಲ ಲೋಕಸಭಾ ಸಂಸದರನ್ನು “ಪಿಕ್ ಅಂಡ್ ಡ್ರಾಪ್” ಮಾಡುತ್ತಿತ್ತು. ದರ್ಶನ್ ಹಿರಾನಂದಾನಿ ಅವರಿಂದ ನಾನು ಸ್ವೀಕರಿಸಿದ ವಸ್ತುಗಳು ಕೇವಲ ಸ್ಕಾರ್ಫ್ ಮತ್ತು ಕೆಲವು ಲಿಪ್‌ಸ್ಟಿಕ್‌ಗಳು, ಮೇಕಪ್ ವಸ್ತುಗಳು. ಅದನ್ನು ಅವರು ದುಬೈ ವಿಮಾನ ನಿಲ್ದಾಣದಿಂದ ಸುಂಕ ರಹಿತವಾಗಿ ತೆಗೆದುಕೊಳ್ಳುತ್ತಿದ್ದರು. ಮನಾನು ಮುಂಬೈಗೆ ಹೋದಾಗ, ಅವನ ಕಾರು ನನ್ನನ್ನು ಕರೆದುಕೊಂಡು ಬರುತ್ತದೆ. ನಾನು ಅವನೊಂದಿಗೆ ಉಳಿದುಕೊಂಡಿಲ್ಲ ಎಂದು ಮಹುವಾ ಮೊಯಿತ್ರಾ ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ದರ್ಶನ್ ಅವರ ‘ಐಷಾರಾಮಿ’ ಉಡುಗೊರೆಗಳ ಪಟ್ಟಿಯನ್ನು ವಿವರಿಸುತ್ತಾ, ಮೊಯಿತ್ರಾ ಅವರು ರಾಜಕೀಯಕ್ಕೆ ಸೇರುವ ಮೊದಲು ನಾನು ಬ್ಯಾಂಕರ್ ಆಗಿದ್ದೆ 2 ಕೋಟಿ ರೂ.ಗಿಂತ ಹೆಚ್ಚು ಸಂಪಾದಿಸುತ್ತಿದ್ದೆ ಎಂದಿದ್ದಾರೆ.

“ಅವರು ನನಗೆ ಹಣ ನೀಡಿದ್ದರು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. 2008 ರಲ್ಲಿ ನಾನು ತಳಮಟ್ಟದ ರಾಜಕೀಯಕ್ಕೆ ಪ್ರವೇಶಿಸಿದಾಗ ನಾನು ಬ್ಯಾಂಕರ್ ಆಗಿದ್ದೆ. ಆ ಸಮಯದಲ್ಲಿ 2 ಕೋಟಿ ರೂಪಾಯಿಗಳನ್ನು ಅನೇಕ ಬಾರಿ ಸಂಪಾದಿಸುತ್ತಿದ್ದೆ. ನಾನು ಸಾಬೀತಾಗದ 2 ಕೋಟಿ ನಗದು ತೆಗೆದುಕೊಳ್ಳುತ್ತೇನೆ ಎಂಬ ಆರೋಪವು ಹಾಸ್ಯಾಸ್ಪದವಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಸಂಸದರು ಹೇಳಿದ್ದಾರೆ.

ಪ್ರಶ್ನೆಗಾಗಿ ನಗದು ಪ್ರಕರಣದಲ್ಲಿ ದರ್ಶನ್ ಹಿರಾನಂದಾನಿ ಅವರು ಒದಗಿಸಿದ್ದಾರೆ ಎಂದು ಹೇಳಿಕೊಳ್ಳುವ ಉಡುಗೊರೆಗಳ ಪಟ್ಟಿಯನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು.

ಮಹುವಾ ಮೊಯಿತ್ರಾ ಅವರ ಬಂಗಲೆ ರಿಪೇರಿಯಾಗಿದೆಯೇ?

ದರ್ಶನ್ ಅವರನ್ನು “ಆಪ್ತ ಸ್ನೇಹಿತ” ಎಂದು ಕರೆದ ಟಿಎಂಸಿ ಸಂಸದರು, ಒಬ್ಬ ವ್ಯಕ್ತಿಯು ಅಗತ್ಯವಿರುವ ಸ್ನೇಹಿತನ ಬಳಿಗೆ ಹೋಗುತ್ತಾನೆಯೇ ಹೊರತು ನಿಶಿಕಾಂತ್ ದುಬೆಯ ಬಳಿಗೆ ಹೋಗುವುದಿಲ್ಲ. ದುಬೆಯನ್ನು ‘ಜಾರ್ಖಂಡಿ ಪಿಟ್‌ಬುಲ್’ ಎಂದು ಕರೆದಿದ್ದಾರೆ ಮೊಯಿತ್ರಾ

“ದರ್ಶನ್ ನನ್ನ ಆಪ್ತ ವೈಯಕ್ತಿಕ ಸ್ನೇಹಿತ, ಸಂಸದೆ ಆಗುವುದಕ್ಕಿಂತ ಮುಂಚೆಯೇ ಆತ ಸ್ನೇಹಿತ. ದರ್ಶನ್ ಹಿರಾನಂದಾನಿ ಅವರ ತಂದೆ ಮತ್ತು ಅವರು ದೊಡ್ಡ ರಿಯಲ್ ಎಸ್ಟೇಟ್ ಕಂಪನಿಯನ್ನು ಹೊಂದಿದ್ದಾರೆ. ನನ್ನ ಸರ್ಕಾರಿ ಬಂಗಲೆ ಮಂಜೂರು ಮಾಡಿದಾಗ ಅದು ಶಿಥಿಲಾವಸ್ಥೆಯಲ್ಲಿತ್ತು. ಐದು ಫಾಲ್ಸ್ ಸೀಲಿಂಗ್‌ಗಳಿದ್ದವು ಮತ್ತು ಬೆಳಕು ಬರಲಿಲ್ಲ. ಹೆಚ್ಚಿನ ದೀಪಗಳನ್ನು ಅನುಮತಿಸಲು ಬಂಗಲೆಯನ್ನು ಹೇಗೆ ಮರುವಿನ್ಯಾಸಗೊಳಿಸಬಹುದು ಮತ್ತು ಸಿಪಿಡಬ್ಲ್ಯೂಡಿ ಅದನ್ನು ಹೇಗೆ ಮಾಡಬಹುದು ಎಂಬುದನ್ನು ತಿಳಿಸಲು ಅವರ ವಾಸ್ತುಶಿಲ್ಪಿಗಳಲ್ಲಿ ಸಂಪರ್ಕಿಸುವುದಕ್ಕಾಗಿ ನಾನು ದರ್ಶನ್‌ಗೆ ಹೇಳಿದೆಎಂದು ಮಹುವಾ ಮೊಯಿತ್ರಾ ಹೇಳಿದರು.

ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ, ದರ್ಶನ್ ಹಿರಾನಂದಾನಿ ನೀಡಿದ ವಿನ್ಯಾಸಗಳನ್ನು ಸಹ ಅವರು ತೋರಿಸಿದರು. “CPWD ಇದನ್ನು ವಿನ್ಯಾಸಗೊಳಿಸಿದೆ ಮತ್ತು ಯಾವುದೇ ಖಾಸಗಿ ಘಟಕವು ಇಲ್ಲಿ ಪ್ರವೇಶಿಸಿಲ್ಲ. ನಿಸ್ಸಂಶಯವಾಗಿ, ನನ್ನ ಮನೆಯ ವಿನ್ಯಾಸವನ್ನು ಪಡೆಯಲು ನಾನು ನಿಶಿಕಾಂತ್ ದುಬೆಯ ಬಳಿಗೆ ಹೋಗುವುದಿಲ್ಲ. ನಾನು ಸ್ನೇಹಿತನ ಬಳಿಗೆ ಹೋಗುತ್ತೇನೆ ಎಂದಿದ್ದಾರೆ ಮೊಯಿತ್ರಾ

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:42 am, Sat, 28 October 23