ಸರ್ಕಾರ ನನ್ನ ಫೋನ್, ಇಮೇಲ್ ಅನ್ನು ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದೆ: ಮಹುವಾ ಮೊಯಿತ್ರಾ

|

Updated on: Oct 31, 2023 | 1:03 PM

ಟಿಎಂಸಿ ಸಂಸದೆ ಮೊಯಿತ್ರಾ ಅವರಿಗೆ ಲಭಿಸಿದ ಸಂದೇಶದಲ್ಲಿ "ಎಚ್ಚರಿಕೆ: ರಾಜ್ಯ ಪ್ರಾಯೋಜಿತ ದಾಳಿಕೋರರು ನಿಮ್ಮ iPhone ಅನ್ನು ಗುರಿಯಾಗಿಸಬಹುದು" ಎಂದಿದೆ. ಶಿವಸೇನಾ ಸಂಸದ ಪ್ರಿಯಾಂಕಾ ಚತುರ್ವೇದಿ ಮತ್ತು ಇಂಡಿಯಾ ಮೈತ್ರಿಕೂಟದ ಇತರ ಕೆಲವು ನಾಯಕರಿಗೆ ಎಚ್ಚರಿಕೆಗಳು ಬಂದಿವೆ ಎಂದು ಮಹುವಾ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಸರ್ಕಾರ ನನ್ನ ಫೋನ್, ಇಮೇಲ್ ಅನ್ನು ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದೆ: ಮಹುವಾ ಮೊಯಿತ್ರಾ
ಮಹುವಾ ಮೊಯಿತ್ರಾ
Follow us on

ದೆಹಲಿ ಅಕ್ಟೋಬರ್ 31: ಕೇಂದ್ರ ಸರ್ಕಾರ ತನ್ನ ಫೋನ್ ಮತ್ತು ಇಮೇಲ್ ಅನ್ನು ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ (TMC) ಸಂಸದೆ ಮಹುವಾ ಮೊಯಿತ್ರಾ (Mahua Moitra) ಮಂಗಳವಾರ ಆರೋಪಿಸಿದ್ದಾರೆ. ತನಗೆ ಬಂದ ಎಚ್ಚರಿಕೆಯ ಸ್ಕ್ರೀನ್‌ಶಾಟ್‌ಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡ ಅವರು, “ಸರ್ಕಾರವು ನನ್ನ ಫೋನ್ ಮತ್ತು ಇಮೇಲ್ ಅನ್ನು ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದೆ ಎಂದು ನನಗೆ ಎಚ್ಚರಿಕೆ ನೀಡುವ ಪಠ್ಯ ಮತ್ತು ಇಮೇಲ್ ಅನ್ನು ಆಪಲ್‌ನಿಂದ ಸ್ವೀಕರಿಸಲಾಗಿದೆ. ಗೃಹ ಸಚಿವರ ಕಚೇರಿ (Home Minister’s Office) ನಿಮ್ಮ ಕೆಲಸ ಮಾಡಿಕೊಳ್ಳಿ. ಅದಾನಿ ಮತ್ತು ಪಿಎಂಒ ಪ್ರಾಯೋಜಿತ ಬೆದರಿಸುವವರೇ ನಿಮ್ಮ ಮೇಲೆ ಅನುಕಂಪವಿದೆ ಎಂದು ಹೇಳಿದ್ದಾರೆ.

ಟಿಎಂಸಿ ಸಂಸದೆ ಮೊಯಿತ್ರಾ ಅವರಿಗೆ ಲಭಿಸಿದ ಸಂದೇಶದಲ್ಲಿ “ಎಚ್ಚರಿಕೆ: ರಾಜ್ಯ ಪ್ರಾಯೋಜಿತ ದಾಳಿಕೋರರು ನಿಮ್ಮ iPhone ಅನ್ನು ಗುರಿಯಾಗಿಸಬಹುದು” ಎಂದಿದೆ. ಶಿವಸೇನಾ ಸಂಸದ ಪ್ರಿಯಾಂಕಾ ಚತುರ್ವೇದಿ ಮತ್ತು ಇಂಡಿಯಾ ಮೈತ್ರಿಕೂಟದ ಇತರ ಕೆಲವು ನಾಯಕರಿಗೆ ಎಚ್ಚರಿಕೆಗಳು ಬಂದಿವೆ ಎಂದು ಮಹುವಾ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.


ಹಿರಿಯ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ತಮ್ಮ ಫೋನ್ ಮತ್ತು ಇಮೇಲ್ ಅನ್ನು ಗುರಿಯಾಗಿಸಿಕೊಂಡು ಆಪಲ್‌ನಿಂದ ಅದೇ ರೀತಯ ಎಚ್ಚರಿಕೆಯನ್ನು ಸ್ವೀಕರಿಸಿದ್ದಾರೆ. ಪಿಎಂಒ ಇಂಡಿಯಾವನ್ನು ಟ್ಯಾಗ್ ಮಾಡಿದ ತಿರುವನಂತಪುರಂ ಸಂಸದರು, “ಮಾಡಲು ಪ್ರಧಾನವಾದ ಕೆಲಸ ಬೇರೆ ಏನೂ ಇಲ್ಲವೇ?” ಎಂದು ಕೇಳಿದ್ದಾರೆ.


ಪ್ರಶ್ನೆಗಾಗಿ ನಗದು ಪ್ರಕರಣದಲ್ಲಿ ಮಹುವಾ ಅವರು ಪ್ರಸ್ತುತ ಸಂಸತ್ತಿನ ನೈತಿಕ ಸಮಿತಿಯಿಂದ ತನಿಖೆ ನಡೆಸುತ್ತಿದ್ದಾರೆ. ಉದ್ಯಮಿ ಗೌತಮ್ ಅದಾನಿ ಅವರ ಬಗ್ಗೆ ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳಿದ್ದಕ್ಕಾಗಿ ಉದ್ಯಮಿ ದರ್ಶನ್ ಹಿರಾನಂದಾನಿ ಅವರ ಆಜ್ಞೆಯ ಮೇರೆಗೆ ಟಿಎಂಸಿ ನಾಯಕಿ ನಗದು ಮತ್ತುಉಡುಗೊರೆ ಸ್ವೀಕರಿಸಿದರು ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪಿಸಿದ್ದಾರೆ.

ಅಕ್ಟೋಬರ್ 31 ರಂದು ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಹೇಳಿದ ನಂತರ ನೈತಿಕ ಸಮಿತಿ ನಂತರ ನವೆಂಬರ್ 2 ರಂದು ಹಾಜರಾಗುವಂತೆ ಮಹುವಾ ಮೊಯಿತ್ರಾಗೆ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 12:59 pm, Tue, 31 October 23