ಸೀರೆಯುಟ್ಟು, ಸನ್​​​ ಗ್ಲಾಸ್​​ ಧರಿಸಿ ಫುಟ್‌ಬಾಲ್​​ ಆಡಿದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ನೆಟ್ಟಿಗರಿಂದ ಮೆಚ್ಚುಗೆ

ಕೃಷ್ಣನಗರ ಎಂಪಿ ಕಪ್ ಟೂರ್ನಮೆಂಟ್ 2022 ರ ಫೈನಲ್‌ನ ಮೋಜಿನ ಕ್ಷಣಗಳು. ಹೌದು, ನಾನು ಸೀರೆಯಲ್ಲಿ ಆಡುತ್ತೇನೆ" ಎಂದು ಮಹುವಾ ಟ್ವೀಟ್ ಮಾಡಿದ್ದಾರೆ.

ಸೀರೆಯುಟ್ಟು, ಸನ್​​​ ಗ್ಲಾಸ್​​ ಧರಿಸಿ ಫುಟ್‌ಬಾಲ್​​ ಆಡಿದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ನೆಟ್ಟಿಗರಿಂದ ಮೆಚ್ಚುಗೆ
ಮಹುವಾ ಮೊಯಿತ್ರಾ
Updated By: ರಶ್ಮಿ ಕಲ್ಲಕಟ್ಟ

Updated on: Sep 19, 2022 | 5:40 PM

ದೆಹಲಿ: ತೃಣಮೂಲ ಕಾಂಗ್ರೆಸ್ (TMC) ಸಂಸದೆ ಮಹುವಾ ಮೊಯಿತ್ರಾ (Mahua Moitra) ಅವರು ಇಂದು ಕೃಷ್ಣಾನಗರ ಎಂಪಿ ಕಪ್ ಟೂರ್ನಮೆಂಟ್‌ನಲ್ಲಿ ಸೀರೆಯುಟ್ಟು ಫುಟ್‌ಬಾಲ್ (Football) ಆಡುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.ಮೊಯಿತ್ರಾ ಅವರು ಟ್ವಿಟರ್​​​ ನಲ್ಲಿ ಅಪ್‌ಲೋಡ್ ಮಾಡಿದ ಚಿತ್ರಗಳಲ್ಲಿ, ಅವರು ಕೆಂಪು-ಕಿತ್ತಳೆ ಬಣ್ಣದ ಸೀರೆಯುಟ್ಟಿದ್ದು ಸ್ಫೋರ್ಟ್ಸ್ ಶೂ ಧರಿಸಿದ್ದಾರೆ. ಕಣ್ಣಿಗೆ ಸನ್‌ಗ್ಲಾಸ್‌ಗಳನ್ನು ಧರಿಸಿದ್ದಾರೆ. ಮೊದಲ ಚಿತ್ರದಲ್ಲಿ ಅವರು ಚೆಂಡನ್ನು ಕಿಕ್ ಮಾಡುತ್ತಿದ್ದು, ಇನ್ನೊಂದು ಚಿತ್ರದಲ್ಲಿ ಅವರು ಗೋಲ್ ಕೀಪರ್ ಆಗಿ ಚೆಂಡು ಗೋಲ್ ಪೋಸ್ಟ್ ಗೆ ಹೋಗದಂತೆ ತಡೆಯುತ್ತಿರುವುದನ್ನು ಕಾಣಬಹುದು.  “ಕೃಷ್ಣನಗರ ಎಂಪಿ ಕಪ್ ಟೂರ್ನಮೆಂಟ್ 2022 ರ ಫೈನಲ್‌ನ ಮೋಜಿನ ಕ್ಷಣಗಳು. ಹೌದು, ನಾನು ಸೀರೆಯಲ್ಲಿ ಆಡುತ್ತೇನೆ” ಎಂದು ಮಹುವಾ ಟ್ವೀಟ್ ಮಾಡಿದ್ದಾರೆ. ಸಂಸದೆ ಸೀರೆ ಉಟ್ಟುಕೊಂಡು ಆಟವಾಡುತ್ತಿರುವುದನ್ನು ನೋಡಿ ಸಾಮಾಜಿಕ ಜಾಲತಾಣಗಳ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದರು.


ರಾಜಕಾರಣಿ ಮತ್ತು ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ, ಮಹುವಾ ಟ್ವೀಟ್ ಗೆ ಕಾಮೆಂಟ್ ಮಾಡಿದ್ದು ಕೂಲ್, ಲವ್ ದಿ ಶಾಟ್ ಎಂದು  ಹೇಳಿದ್ದಾರೆ


ಇದು ಅದ್ಭುತವಾಗಿದೆ, ನೀವು ತುಂಬಾ ಪ್ರಶಂಸನೀಯರು ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ.

ಸಂಸದೆ ಮಹುವಾ ಮೊಯಿತ್ರಾ ಅವರು ಫುಟ್‌ಬಾಲ್ ಮೈದಾನದಲ್ಲಿ ಸೀರೆಯುಟ್ಟು ಆಡಿದ್ದು ಇದೇ ಮೊದಲಲ್ಲ. ತೃಣಮೂಲ ಕಾಂಗ್ರೆಸ್ ಖೇಲಾ ಹೋಬ್ ದಿಬಸ್ ಅನ್ನು ಆಚರಿಸಿದಾಗ ಮತ್ತು ಕ್ರೀಡೆಗಳನ್ನು ಉತ್ತೇಜಿಸಲು ಪಶ್ಚಿಮ ಬಂಗಾಳದಾದ್ಯಂತ ಪಂದ್ಯಗಳನ್ನು ಆಯೋಜಿಸಿದಾಗ ಅವರು ಈ ಹಿಂದೆ ಫುಟ್ಬಾಲ್ ಆಡುವ ಚಿತ್ರಗಳನ್ನು ಹಂಚಿಕೊಂಡಿದ್ದರು.

Published On - 4:57 pm, Mon, 19 September 22