AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಪ್ರೀಂ ಶಾಕ್​: ಡಿಕೆ ಶಿವಕುಮಾರ್​ ವಿರುದ್ಧದ ಹೈಕೋರ್ಟ್‌ ಆದೇಶಕ್ಕೆ ತಡೆಯಾಜ್ಞೆ ನೀಡಿದ ಸುಪ್ರೀಂಕೋರ್ಟ್‌

ಅರ್ಜಿ ವಿಚಾರಣೆ ನಡೆಸಿದ ಪೀಠ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿ ಡಿ.ಕೆ ಶಿವಕುಮಾರ್​ಗೆ ಪ್ರತಿಕ್ರಿಯೆ ನೀಡುವಂತೆ ಕೋರಿ ನೋಟಿಸ್ ಜಾರಿ ಮಾಡಲಾಗಿದೆ.

ಸುಪ್ರೀಂ ಶಾಕ್​: ಡಿಕೆ ಶಿವಕುಮಾರ್​ ವಿರುದ್ಧದ ಹೈಕೋರ್ಟ್‌ ಆದೇಶಕ್ಕೆ ತಡೆಯಾಜ್ಞೆ ನೀಡಿದ ಸುಪ್ರೀಂಕೋರ್ಟ್‌
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
TV9 Web
| Edited By: |

Updated on:Sep 19, 2022 | 5:50 PM

Share

ದೆಹಲಿ: ಡಿಕೆ ಶಿವಕುಮಾರ್​ (DK Shivakumar) ವಿರುದ್ಧದ ಕೇಸ್ ರದ್ದುಪಡಿಸಿದ್ದ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂಕೋರ್ಟ್‌ ತಡೆಯಾಜ್ಞೆ ನೀಡಿದೆ. ನ್ಯಾ. ಸಂಜೀವ್‌ ಖನ್ನಾ ನೇತೃತ್ವದ ದ್ವಿಸದಸ್ಯ ಪೀಠದಿಂದ ತಡೆ ನೀಡಲಾಗಿದೆ. 2018ರಲ್ಲಿ ಡಿಕೆ ಶಿವಕುಮಾರ್​ ಬಳಿ ಐಟಿ ದಾಖಲೆ ವಶಪಡಿಸಿಕೊಳ್ಳಲಾಗಿತ್ತು. ಈಗಲ್‌ಟನ್ ರೆಸಾರ್ಟ್‌ನಲ್ಲಿ ಐಟಿ ಅಧಿಕಾರಿಗಳಿಂದ ಜಪ್ತಿ ಮಾಡಲಾಗಿತ್ತು. ಡಿಕೆ ಶಿವಕುಮಾರ್​ ಇದ್ದ ರೂಂನಲ್ಲಿ ಹಣಕಾಸು ವರ್ಗಾವಣೆ ದಾಖಲೆ ವಶ ಪಡಿಸಿಕೊಳ್ಳಲಾಗಿತ್ತು. ಐಟಿ ಇಲಾಖೆ ಅಧಿಕಾರಿಗಳ ತನಿಖೆಗೆ ಹೈಕೋರ್ಟ್‌ ತಡೆ ನೀಡಿದ್ದು, ಬರೀ ಹಣಕಾಸು ವ್ಯವಹಾರ ನಡೆದಿದ್ರೆ ಕೇಸ್ ದಾಖಲಿಸಲಾಗಲ್ಲ. ಲೆಕ್ಕವಿಲ್ಲದ ವಹಿವಾಟು ನಡೆದಿದ್ದರೂ ಹೊಣೆಗಾರರಾಗಿದ್ದಾರೆಂದು ನಿರ್ಧರಿಸುವವರೆಗೆ ಕಾನೂನು ಕ್ರಮ ಆರಂಭಿಸಲಾಗಲ್ಲವೆಂದು ಡಿ.ಕೆ.ಶಿವಕುಮಾರ್‌ ವಿರುದ್ಧದ ಕೇಸ್​ ಹೈಕೋರ್ಟ್‌ ವಜಾಗೊಳಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಐಟಿ ‘ಸುಪ್ರೀಂ’ ಮೊರೆ ಹೋಗಿತ್ತು. ಐಟಿ ಇಲಾಖೆಯ ಅರ್ಜಿ ವಿಚಾರಣೆ ನಡೆಸಿ ಆದೇಶಕ್ಕೆ ತಡೆಯಾಜ್ಞೆ ನೀಡಲಾಗಿದೆ.

ಅರ್ಜಿ ವಿಚಾರಣೆ ನಡೆಸಿದ ಪೀಠ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿ ಡಿ.ಕೆ ಶಿವಕುಮಾರ್​ಗೆ ಪ್ರತಿಕ್ರಿಯೆ ನೀಡುವಂತೆ ಕೋರಿ ನೋಟಿಸ್ ಜಾರಿ ಮಾಡಲಾಗಿದೆ. ಇತ್ತ ಐಟಿಗೆ ನಾಲ್ಕು ವಾರಗಳಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದ್ದು, ಆರು ವಾರಗಳಿಗೆ ಪ್ರಕರಣದ ವಿಚಾರಣೆ ಮುಂದೂಡಲಾಗಿದೆ.

ಭಾರತ್ ಜೋಡೊ ಯಾತ್ರೆ ತಯಾರಿಯಲ್ಲಿರುವ ಡಿಕೆಶಿಗೆ ಇಡಿ ಶಾಕ್ ಕೊಟ್ಟಿದೆ. ವಿಧಾನಸಭೆ ಚುನಾವಣೆ ಸನಿಹವಾಗುತ್ತಿರುವ ಹೊತ್ತಲ್ಲೆ ಇಡಿ ಸಮನ್ಸ್ ನೀಡಿದೆ. ಅಕ್ರಮ ಹಣ ವರ್ಗಾವಣೆ ವಿಚಾರವಾಗಿ ಡಿಕೆ ಶಿವಕುಮಾರ್‌ಗೆ ಇಡಿ ಸಮನ್ಸ್ ಜಾರಿ ಮಾಡಲಾಗಿದ್ದು ಇಂದು ವಿಚಾರಣೆಗೆ ಡಿಕೆಶಿ ಹಾಜರಾಗಿದ್ದರು. ದೆಹಲಿಯ ವಿದ್ಯುತ್ ಲೇನ್ ನಲ್ಲಿರುವ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಈಗಾಗಲೇ ಒಂದು ಪ್ರಕರಣ ಇಡಿ ತನಿಖೆ ನಡೆಸಲಾಗಿದ್ದು, ಅಧಿಕಾರಿಗಳು ಇಡಿ ವಿಶೇಷ ನ್ಯಾಯಲಯಕ್ಕೆ ಜಾರ್ಜ್ ಶೀಟ್ ಸಲ್ಲಿಸಿದ್ದಾರೆ. ಈ ಜಾರ್ಜ್ ಶೀಟ್ ಬೆನ್ನಲೆ ಡಿಕೆಶಿ ರೆಗ್ಯೂಲರ್ ಬೆಲ್ ಪಡೆದುಕೊಂಡಿದ್ದಾರೆ. ಈ ನಡುವೆ ಮತ್ತೊಮ್ಮೆ ಅಧಿಕಾರಿಗಳಿಂದ ಬುಲಾವ್ ಬಂದಿರುವುದರಿಂದ ಯಾವ ಪ್ರಕರಣಕ್ಕೆ ಸಮನ್ಸ್ ನೀಡಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.

ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ಸಂಸದ ಡಿ.ಕೆ.ಸುರೇಶ್

ಇನ್ನು ಕೇಂದ್ರ ಸರ್ಕಾರದ ವಿರುದ್ಧ ಸಂಸದ ಡಿ.ಕೆ.ಸುರೇಶ್ ಕಿಡಿಕಾರಿದ್ದು, ಕೇಂದ್ರ ಸರ್ಕಾರ ಸಾಂವಿಧಾನಿಕ ಸಂಸ್ಥೆ ದುರ್ಬಳಕೆ ಮಾಡಿಕೊಳ್ತಿದೆ. ಕಳೆದ ಎರಡು ವರ್ಷದ ಹಿಂದೆ ಸಂಪೂರ್ಣ ಆಸ್ತಿ ವಿವರ ನೀಡಿದೆ. ಡಿ.ಕೆ.ಶಿವಕುಮಾರ್ ಕುಟುಂಬದ ಎಲ್ಲ ಸದಸ್ಯರ ಮಾಹಿತಿ ನೀಡಿದೆ. ಇದು ರಾಜಕೀಯ ಪ್ರಚೋದನೆಯಿಂದ ದಾಖಲಿಸಿರುವ ದೂರು. ಮತ್ತೊಮ್ಮೆ ದಾಖಲೆ ಕೇಳಿದ್ದಾರೆ, ನೀಡಲಿದ್ದೇವೆ. ಇಡಿಯಿಂದ ಸಿಬಿಐ, ಸಿಬಿಐಯಿಂದ ಇಡಿಗೆ ಕೇಸ್ ವರ್ಗಾವಣೆ ಮಾಡಲಾಗುತ್ತಿದೆ. ಕಾಂಗ್ರೆಸ್ ಕಟ್ಟಿಹಾಕಲು ಪ್ರಯತ್ನ ನಡೆಯುತ್ತಿದೆ, ಅದು ಆಗಲ್ಲ. ಎಲ್ಲ ರೀತಿಯ ಬೆದರಿಕೆಗಳಿಗೂ ನಾವು ಸಿದ್ಧವಾಗಿದ್ದೇವೆ. ಬಂಧಿಸಲಿ, ಜೈಲಿಗೆ ಹಾಕಲಿ, ನಾವು ಯಾವುದಕ್ಕೂ ಹೆದರಲ್ಲ. ಈ ಪ್ರಕರಣದ ಬಗ್ಗೆ ನಮಗೂ ಪೂರ್ಣ ಮಾಹಿತಿ ಇಲ್ಲ. ಇಡಿಯವರು ಸಮನ್ಸ್ ಕೊಟ್ಟಿದ್ರು ವಿಚಾರಣೆಗೆ ಬಂದಿದ್ದೇವೆ ಎಂದು ಹೇಳಿದರು.

ಇಡಿ ಸಿಬಿಐ ಬಿಜೆಪಿಯ ಡ್ರಾಮಾ ಕಂಪನಿ:

ಈಗಾಗಲೇ ಸೋನಿಯಾಗಾಂಧಿ, ರಾಹುಲ್ ಗಾಂಧಿಗೂ ಕಿರುಕುಳ ನೀಡಿದ್ದಾರೆ. ಇಡಿ ಬಳಸಿಕೊಂಡು 240 ಶಾಸಕರನ್ನು ಪಕ್ಷಾಂತರ ಮಾಡಿದ್ದಾರೆ. ಜನಾಭಿಪ್ರಾಯ ಮೇಲೆ ವಿಪಕ್ಷಗಳನ್ನು ಮಣಿಸಲು ಬಿಜೆಪಿಗೆ ಸಾಧ್ಯವಾಗ್ತಿಲ್ಲ. ಹೀಗಾಗಿ ಇಡಿ ಸಿಬಿಐ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಡಿ ಸಿಬಿಐ ಬಿಜೆಪಿಯ ಡ್ರಾಮಾ ಕಂಪನಿ. ಬಿಜೆಪಿ ಸ್ಕ್ರಿಪ್ಟ್ ಹೇಗೆ ಬರಿತಾರೋ ಹಾಗೂ ಇವು ನಾಟಕ ಮಾಡುತ್ತವೆ ಎಂದು ಸಂಸದ ಡಿ.ಕೆ.ಸುರೇಶ್ ಗುಡುಗಿದರು.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:03 pm, Mon, 19 September 22