ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಮಂಗಳವಾರ ಮುಂಜಾನೆ ಟಿಎಂಸಿಯ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಪ್ರೊಫೈಲ್ ಫೋಟೋ ಮತ್ತು ಹೆಸರನ್ನು ಬದಲಾಯಿಸಲಾಗಿದೆ ಹ್ಯಾಕರ್‌ಗಳು ಟಿಎಂಸಿಯ ಪ್ರೊಫೈಲ್ ಚಿತ್ರ ಮತ್ತು ಹೆಸರನ್ನು ಬದಲಾಯಿಸಿದ್ದಾರೆ. ಪ್ರೊಫೈಲ್‌ನಲ್ಲಿ ಟಿಎಂಸಿ ಬದಲಿಗೆ ಯುಗಾ ಲ್ಯಾಬ್ಸ್ ಎಂದು ಬರೆಯಲಾಗಿದೆ. ಈ ಬಗ್ಗೆ ಟಿಎಂಸಿ ನಾಯಕರಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಹ್ಯಾಕ್ ಆದ ಬಳಿಕ ಯಾವುದೇ ಹೊಸ ಟ್ವೀಟ್ನ್ನು ಪೋಸ್ಟ್ ಮಾಡಿಲ್ಲ, ಈ ಬಗ್ಗೆ ಟ್ವಿಟ್ಟರ್ಗೆ ಮಾಹಿತಿ ನೀಡಲಾಗಿದ್ದು, ಸರಿಪಡಿಸುವಂತೆ ಕೇಳಿಕೊಳ್ಳಲಾಗಿದೆ. ಇದು 2020 ರ ಪ್ರಕರಣಕ್ಕೆ ಹೋಲುತ್ತದೆ, ಇದರಲ್ಲಿ ಯುಎಸ್‌ನ ಹಲವಾರು ಪ್ರಮುಖ ವ್ಯಕ್ತಿಗಳ ಟ್ವಿಟರ್ ಹ್ಯಾಂಡಲ್‌ಗಳು ಹ್ಯಾಕ್ ಆಗಿದ್ದವು.
ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ಗೆ ಧಕ್ಕೆಯಾಗಿದೆ. ಸಮಸ್ಯೆಯನ್ನು ಸರಿಪಡಿಸಲು ಕೆಲಸ ಮಾಡುತ್ತಿರುವ ಟ್ವಿಟರ್‌ನ ಅಧಿಕಾರಿಗಳೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ. ಅವರು ತ್ವರಿತ ಕ್ರಮದ ಭರವಸೆ ನೀಡಿದ್ದಾರೆ ಎಂದು ತೃಣಮೂಲ ನಾಯಕ ಡೆರೆಕ್ ಒಬ್ರಿಯಾನ್ ಹೇಳಿದ್ದಾರೆ.
ಎಲಾನ್ ಮಸ್ಕ್, ಜೆಫ್ ಬೆಜೋಸ್, ಬಿಲ್ ಗೇಟ್ಸ್, ಬರಾಕ್ ಒಬಾಮಾ, ಜೋ ಬೈಡನ್ ಅವರ ಟ್ವಿಟ್ಟರ್ ಖಾತೆಯೂ ಹ್ಯಾಕ್ ಆಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:38 am, Tue, 28 February 23