National Conference: ವಿಶ್ವವೇ ಭಾರತದತ್ತ ಎದುರು ನೋಡುತ್ತಿದೆ, ಈ 4 ಅಭಿವೃದ್ಧಿ ಸ್ತಂಭಗಳಿಗೆ ಒತ್ತು ನೀಡಲು ಮೋದಿ ಕರೆ

| Updated By: ನಯನಾ ರಾಜೀವ್

Updated on: Jan 08, 2023 | 9:37 AM

ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಮೂಲಸೌಕರ್ಯ, ಹೂಡಿಕೆ, ನಾವೀನ್ಯತೆ ಮತ್ತು ಒಳಗೊಳ್ಳುವಿಕೆ ಈ ನಾಲ್ಕು ಅಭಿವೃದ್ಧಿ ಸ್ತಂಭಗಳು ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

National Conference: ವಿಶ್ವವೇ ಭಾರತದತ್ತ ಎದುರು ನೋಡುತ್ತಿದೆ, ಈ 4 ಅಭಿವೃದ್ಧಿ ಸ್ತಂಭಗಳಿಗೆ ಒತ್ತು ನೀಡಲು ಮೋದಿ ಕರೆ
ನರೇಂದ್ರ ಮೋದಿ
Follow us on

ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಮೂಲಸೌಕರ್ಯ, ಹೂಡಿಕೆ, ನಾವೀನ್ಯತೆ ಮತ್ತು ಒಳಗೊಳ್ಳುವಿಕೆ ಈ ನಾಲ್ಕು ಅಭಿವೃದ್ಧಿ ಸ್ತಂಭಗಳು ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಎರಡನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು, ಈ ನಾಲ್ಕು ಆಧಾರ ಸ್ತಂಭಗಳತ್ತ ಗಮನಹರಿಸಲಾಗುತ್ತಿದೆ, ಜಾಗತಿಕ ಪೂರೈಕೆಯ ಸರಪಳಿಯಲ್ಲಿ ಸ್ಥಿರತೆ ತರಲು ಇಡೀ ಜಗತ್ತು ಭಾರತದತ್ತ ನೋಡುತ್ತಿದೆ ಎಂದರು.
ಇದಕ್ಕೂ ಮೊದಲು ಜನರ ಜೀವನವನ್ನು ಸುಧಾರಿಸಲು ಮತ್ತು ಭಾರತದ ಬೆಳವಣಿಗೆಯ ಪಥವನ್ನು ಬಲಪಡಿಸುವ ಕೆಲಸ ಮಾಡುವಂತೆ ಕರೆ ನೀಡಿದರು.

ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ಕಳೆದ ಎರಡು ದಿನಗಳಿಂದ ನಾವು ದೆಹಲಿಯಲ್ಲಿ ಮುಖ್ಯ ಕಾರ್ಯದರ್ಶಿಗಳ ಸಮ್ಮೇಳನದಲ್ಲಿ ವ್ಯಾಪಕ ಚರ್ಚೆ ನಡೆಸುತ್ತಿದ್ದೇವೆ, ಜನರ ಜೀವನವನ್ನು ಸುಧಾರಿಸುವ ಹಾಗೂ ಭಾರತದ ಬೆಳವಣಿಗೆಯ ಪಥವನ್ನು ಬಲಪಡಿಸುವ ವಿಷಯಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತದಿಂದ ಇಡೀ ಜಗತ್ತು ಅನೇಕ ನಿರೀಕ್ಷೆಗಳನ್ನು ಹೊಂದಿದೆ. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಂದು ಜಾಗತಿಕ ಪೂರೈಕೆ ಸರಪಳಿಯಲ್ಲಿ ಸ್ಥಿರತೆಯನ್ನು ತರುವ ದೃಷ್ಟಿಯಿಂದ ಇಡೀ ಜಗತ್ತು ಭಾರತದತ್ತ ನೋಡುತ್ತಿದೆ. ಎಂಎಸ್‌ಎಂಇ ಉದ್ಯಮಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಜಾಗತಿಕ ಮೌಲ್ಯ ಸರಪಳಿಯನ್ನು ರಚಿಸಲು ನಾವು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಪ್ರಧಾನಿ ಹೇಳಿದರು. ನಾವು ಸ್ವಯಂ ಪ್ರಮಾಣೀಕರಣ, ಡೀಮ್ಡ್ ಅನುಮೋದನೆ ಮತ್ತು ಫಾರ್ಮ್‌ಗಳ ಪ್ರಮಾಣೀಕರಣದ ಕಡೆಗೆ ಸಾಗಬೇಕು ಎಂದರು.

ಕಾರ್ಯದರ್ಶಿಗಳನ್ನು ಉದ್ದೇಶಿಸಿ ಮಾತನಾಡಿದ ಪಿಎಂ ಮೋದಿ, ನಾವು ನಮ್ಮ ಭೌತಿಕ ಮತ್ತು ಸಾಮಾಜಿಕ ಮೂಲಸೌಕರ್ಯ ಮತ್ತು ಸೈಬರ್ ಭದ್ರತೆಯನ್ನು ಬಲಪಡಿಸುವತ್ತ ಗಮನಹರಿಸಬೇಕು ಎಂದು ಹೇಳಿದರು.

ಈ ವರ್ಷ ಭಾರತವು ಜಿ 20 ನೇತೃತ್ವ ವಹಿಸುತ್ತಿದೆ, ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಲಿದೆ, ಹೊಸ ಸ್ಟಾರ್ಟ್‌ಅಪ್‌ಗಳು ವೇಗವಾಗಿ ನೋಂದಣಿಯಾಗುತ್ತಿವೆ, ಖಾಸಗಿ ವಲಯವೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಜಿಗಿಯುತ್ತಿದೆ ಎಂದು ಹೇಳಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 9:26 am, Sun, 8 January 23